ಹಿರಿದಾಯಿತು ‘ಮಜಾ ಟಾಕೀಸ್’ ಕುಟುಂಬ; ತಂಡದಲ್ಲಿ ಕುರಿ ಪ್ರತಾಪ್, ತುಕಾಲಿ ಸಂತೋಷ್, ಭಟ್ರು
ಕಲರ್ಸ್ ಕನ್ನಡದ ಜನಪ್ರಿಯ ಕಾಮಿಡಿ ಶೋ ‘ಮಜಾ ಟಾಕೀಸ್’ ಫೆಬ್ರವರಿ 1 ರಿಂದ ಆರಂಭ ಆಗುತ್ತಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ, ತುಕಾಲಿ ಸಂತೋಷ್, ಯೋಗರಾಜ್ ಭಟ್, ಕುರಿ ಪ್ರತಾಪ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಮುಂತಾದ ಪ್ರತಿಭಾವಂತ ಕಲಾವಿದರ ತಂಡ ಈ ಶೋನಲ್ಲಿದೆ. ಯೋಗರಾಜ್ ಭಟ್ ಈ ಬಾರಿ ಹೊಸ ಪಾತ್ರದಲ್ಲಿದ್ದಾರೆ.
‘ಮಜಾ ಟಾಕೀಸ್’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1ರಿಂದ ‘ಮಜಾ ಟಾಕೀಸ್’ ಆರಂಭ ಆಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಈ ಶೋನ ಪಾತ್ರವರ್ಗ ಕೂಡ ಹಿರಿದಾಗಿದೆ. ತುಕಾಲಿ ಸಂತೋಷ್, ಯೋಗರಾಜ್ ಭಟ್ ಮೊದಲಾದವರು ತಂಡ ಸೇರಿರೋದು ವಿಶೇಷ. ಈ ಮೊದಲನಿಂದಲೂ ಇದ್ದ ಕುರಿ ಪ್ರತಾಪ್ ಶೋನಲ್ಲಿ ಮುಂದುವರಿದಿದ್ದಾರೆ.
ಈ ಮೊದಲು ‘ಮಜಾ ಟಾಕೀಸ್’ನಲ್ಲಿ ಇಂದ್ರಜಿತ್ ಲಂಕೇಶ್ ಅವರು ವೇದಿಕೆ ಮೇಲೆ ಕುಳಿತಿರುತ್ತಿದ್ದರು. ಎಲ್ಲ ಜೋಕ್ಗೆ ನಗೋದು ಅವರ ಕೆಲಸ ಆಗಿತ್ತು. ಅಲ್ಲದೆ, ಆಗಾಗ ಕಮೆಂಟ್ಗಳನ್ನು ಕೂಡ ಪಾಸ್ ಮಾಡುತ್ತಿದ್ದರು. ಈ ಬಾರಿ ಆ ಜಾಗವನ್ನು ಯೋಗರಾಜ್ ಭಟ್ ತುಂಬುವ ಸೂಚನೆ ಸಿಕ್ಕಿದೆ. ಇದಲ್ಲದೆ ಪಾತ್ರವರ್ಗ ಕೂಡ ಹಿರಿದಾಗಿದೆ.
ಈ ಬಾರಿ ಮಜಾ ಟಾಕೀಸ್ನಲ್ಲಿ ತುಕಾಲಿ ಸಂತೋಷ್, ಕುರಿ ಪ್ರತಾಪ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿ ಅನೇಕರು ಇರಲಿದ್ದಾರೆ. ಈ ಮೂಲಕ ಮನರಂಜನೆ ಕೂಡ ಡಬಲ್ ಆಗುವ ಸೂಚನೆ ಸಿಕ್ಕಿದೆ. ಈ ಬಾರಿ ಯಾವ ರೀತಿಯ ಸ್ಕ್ರಿಪ್ಟ್ಗಳೊಂದಿಗೆ ಸೃಜನ್ ಬರುತ್ತಾರೆ ಎಂಬ ಕುತೂಹಲ ಇದೆ.
View this post on Instagram
ಈ ಮೊದಲು ಮಜಾ ಟಾಕೀಸ್ ಪ್ರಸಾರ ಕಂಡಿತ್ತು. ಆದರೆ, ಕೆಲ ವರ್ಷಗಳಿಂದ ಸೃಜನ್ ಬ್ರೇಕ್ ಪಡೆದಿದ್ದರು. ಅವರು ಕಲರ್ಸ್ ಕನ್ನಡ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾ ಇದ್ದರು. ಈಗ ಮಜಾ ಟಾಕೀಸ್ಗೆ ಅವರು ಮರಳಿರೋದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.
ಇದನ್ನೂ ಓದಿ: ‘ಮಜಾ ಟಾಕೀಸ್’ ಫ್ಯಾನ್ಸ್ಗೆ ಗುಡ್ ನ್ಯೂಸ್; ಮತ್ತೆ ಬರ್ತಿದೆ ಸೃಜನ್ ಲೋಕೇಶ್ ಶೋ
ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ (ಜನವರಿ 25-26) ಈ ಶೋನ ಫಿನಾಲೆ ನಡೆಯಲಿದೆ. ಇದಾದ ಬಳಿಕ ‘ಮಜಾ ಟಾಕೀಸ್’ ಆರಂಭ ಆಗಲಿದೆ. ಸಿನಿಮಾ ತಂಡದವರು ಬಂದು ತಮ್ಮ ಚಿತ್ರದ ಪ್ರಚಾರವನ್ನು ಈ ವೇದಿಕೆ ಮೇಲೆ ಮಾಡಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:14 pm, Wed, 15 January 25