ಧಾರಾವಾಹಿ ಸೆಟ್​​ನಲ್ಲಿ ಭೀಕರ ಅಗ್ನಿ ದುರಂತ; ಕ್ಷಣಮಾತ್ರದಲ್ಲಿ ಎಲ್ಲವೂ ಭಸ್ಮ

Ghum Hai Kisi Ke Pyaar Mein Serial Set : ಸೆಟ್​ನಲ್ಲಿ ಸಿಲಿಂಡರ್ ಇತ್ತು. ಅದು ಸ್ಫೋಟಗೊಂಡಿದೆ. ಇದರಿಂದ ಕ್ಷಣಮಾತ್ರದಲ್ಲಿ ಬೆಂಕಿ ಎಲ್ಲಾ ಕಡೆಗಳಲ್ಲಿ ಆವರಿಸಿದೆ. ಸೆಟ್​ ಬಹುತೇಕ ಸುಟ್ಟು ಕರಕಲಾಗಿದೆ.

ಧಾರಾವಾಹಿ ಸೆಟ್​​ನಲ್ಲಿ ಭೀಕರ ಅಗ್ನಿ ದುರಂತ; ಕ್ಷಣಮಾತ್ರದಲ್ಲಿ ಎಲ್ಲವೂ ಭಸ್ಮ
ಧಾರಾವಾಹಿ ಸೆಟ್​ನಲ್ಲಿ ಬೆಂಕಿ
Follow us
ರಾಜೇಶ್ ದುಗ್ಗುಮನೆ
|

Updated on: Mar 11, 2023 | 7:20 AM

ಸಿನಿಮಾ ಶೂಟಿಂಗ್​ ವಿಚಾರದಲ್ಲಿ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸಿ ಬಿಡುತ್ತವೆ. ಈಗ ಹಿಂದಿ ಧಾರಾವಾಹಿ ‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ (Ghum Hai Kisi Ke Pyaar Mein) ಧಾರಾವಾಹಿ ಸೆಟ್​ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದೆ. ಇದರಿಂದ ಇಡೀ ಧಾರಾವಾಹಿ ಸೆಟ್ ಬೆಂಕಿಗೆ ಆಹುತಿ ಆಗಿದೆ. ಮುಂಬೈನ ಫಿಲ್ಮ್​ ಸಿಟಿಯಲ್ಲಿ ಈ ಸೆಟ್​ ಇತ್ತು. ಮಾರ್ಚ್​ 10ರಂದು ಸಂಜೆ ನಾಲ್ಕು ಗಂಟೆ ವೇಳೆಗೆ ಈ ಅಗ್ನಿಅವಘಡ ಸಂಭವಿಸಿದೆ. ಸದ್ಯ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ವರದಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಅಪ್​ಡೇಟ್ ಸಿಗಬೇಕಿದೆ.

ಸಿಲಿಂಡರ್ ಸ್ಫೋಟ

ಸೆಟ್​ನಲ್ಲಿ ಸಿಲಿಂಡರ್ ಇತ್ತು. ಅದು ಸ್ಫೋಟಗೊಂಡಿದೆ. ಇದರಿಂದ ಕ್ಷಣಮಾತ್ರದಲ್ಲಿ ಬೆಂಕಿ ಎಲ್ಲಾ ಕಡೆಗಳಲ್ಲಿ ಆವರಿಸಿದೆ. ಸೆಟ್​ ಬಹುತೇಕ ಸುಟ್ಟು ಕರಕಲಾಗಿದೆ. ಸೆಟ್​ನಲ್ಲಿ ಬೆಂಕಿ ನಂದಿಸಲು ಯಾವುದೇ ವಸ್ತುಗಳು ಇರಲಿಲ್ಲ. ಇದು ಬೆಂಕಿ ವೇಗವಾಗಿ ಹಬ್ಬಲು ಸಹಕಾರಿ ಆಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಫಿಲ್ಮ್​ ಸಿಟಿ ನಿರ್ದೇಶಕರ ವಿರುದ್ಧವೂ ಕೇಸ್​ ದಾಖಲಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಬಚಾವ್ ಆದ ಮಕ್ಕಳು

ಸಿಲಿಂಡರ್ ಸ್ಫೋಟಗೊಳ್ಳುವ ಸಂದರ್ಭದಲ್ಲಿ ಮಕ್ಕಳ ದೃಶ್ಯವೊಂದನ್ನು ಶೂಟ್ ಮಾಡಲಾಗುತ್ತಿತ್ತು. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅವರನ್ನು ಸ್ಥಳಾಂತರ ಮಾಡಲಾಗಿದೆ. ಧಾರಾವಾಹಿಯ ಕೆಲ ವಸ್ತುಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Film City: ಮೈಸೂರಿನಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಸಿಎಂಗೆ ಮನವಿ; ಕನ್ನಡದ ಸೆಲೆಬ್ರಿಟಿಗಳ ಜತೆ ಬಾಲಿವುಡ್​ ಮಂದಿ ಸಹಿ

ಅಕ್ಕಪಕ್ಕದ ಸೆಟ್​​ಗೂ ಬೆಂಕಿ

‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿ ಸೆಟ್​ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅಕ್ಕಪಕ್ಕದ ಸೆಟ್​​ಗೂ ಹಾನಿ ಆಗಿದೆ. ಶೂನ್ಯ ಸ್ಕ್ವೇರ್ ಪ್ರೊಡಕ್ಷನ್ಸ್ ಕಡೆಯಿಂದ ಸೆಟ್​ ಒಂದು ನಿರ್ಮಾಣ ಆಗುತ್ತಿತ್ತು. ಬೆಂಕಿ ಬಿದ್ದ ಧಾರಾವಾಹಿ ಸೆಟ್​​ನ ಪಕ್ಕದಲ್ಲೇ ಅದೂ ಇತ್ತು. ಅದಕ್ಕೂ ಬೆಂಕಿ ತಗುಲಿದೆ. ಬೆಂಕಿ ಹರಡುವ ಭಯದಿಂದ ಈ ಸೆಟ್​ನ ಸಮೀಪದಲ್ಲಿದ್ದ ಎರಡು ಸೆಟ್​ನಿಂದ ಜನರನ್ನು ಸ್ಥಳಾಂತರ ಮಾಡಲಾಗಿತ್ತು.

 ಪಾತ್ರವರ್ಗ

‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿಯಲ್ಲಿ ಆಯೇಶಾ ಸಿಂಗ್, ನೀಲ್ ಭಟ್​, ಐಶ್ವರ್ಯಾ ಶರ್ಮ ಭಟ್, ಕಿಶೋರಿ ಶಹಾನೆ, ಸ್ನೇಹಾ ಭವ್ಸಾರ್ ಮೊದಲಾದವರು ನಟಿಸುತ್ತಿದ್ದಾರೆ. 2020ರಿಂದ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಜಯ್​ದೀಪ್​ ಸೇನ್ ಸೇರಿ ಇಬ್ಬರು ನಿರ್ದೇಶಕರು ಈ ಧಾರಾವಾಹಿಗೆ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್