‘ತ್ರಿವಿಕ್ರಂ ಗೋಮುಖ ವ್ಯಾಘ್ರ ಎಂದು ಅಂದು ಹೇಳಿದ್ದೆ, ಈಗಲೂ ಹೇಳ್ತೀನಿ’; ಮೋಕ್ಷಿತಾ

ಬಿಗ್ ಬಾಸ್ ಕನ್ನಡದಲ್ಲಿ ಮೋಕ್ಷಿತಾ ಪೈ ಮತ್ತು ತ್ರಿವಿಕ್ರಂ ನಡುವಿನ ಸಂಬಂಧ ಹಾಳಾಗುತ್ತಿದೆ. ತ್ರಿವಿಕ್ರಂ ಅವರನ್ನು ಮೋಕ್ಷಿತಾ ‘ಗೋಮುಖ ವ್ಯಾಘ್ರ’ ಎಂದು ಕರೆದಿದ್ದಾರೆ ಮತ್ತು ಅವರ ಮೇಲೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತ್ರಿವಿಕ್ರಂ ಅವರು ಮೋಕ್ಷಿತಾ ಅವರನ್ನು ಸಮೀಪಿಸಲು ಪ್ರಯತ್ನಿಸಿದ್ದಾರೆ ಆದರೆ ಅದು ವಿಫಲವಾಗಿದೆ. ಅವರ ನಡುವಿನ ಈ ವೈಮನಸ್ಸು ಬಿಗ್ ಬಾಸ್ ಮನೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

‘ತ್ರಿವಿಕ್ರಂ ಗೋಮುಖ ವ್ಯಾಘ್ರ ಎಂದು ಅಂದು ಹೇಳಿದ್ದೆ, ಈಗಲೂ ಹೇಳ್ತೀನಿ’; ಮೋಕ್ಷಿತಾ
ತ್ರಿವಿಕ್ರಂ-ಮೋಕ್ಷಿತಾ

Updated on: Nov 27, 2024 | 7:02 AM

ಮೋಕ್ಷಿತಾ ಪೈಗೆ ತ್ರಿವಿಕ್ರಂ ಮೇಲೆ ಯಾವಾಗಲೂ ಸಿಟ್ಟಿದೆ. ಅವರು ಸದಾ ಒಂದಿಲ್ಲೊಂದು ಕಾರಣಕ್ಕೆ ತ್ರಿವಿಕ್ರಂ ವಿರುದ್ಧ ಸಿಡಿದೇಳುತ್ತಲೇ ಇರುತ್ತಾರೆ. ತ್ರಿವಿಕ್ರಂ ಅವರು ಮೋಕ್ಷಿತಾಗೆ ಎಷ್ಟೇ ಹತ್ತಿರ ಆಗಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಈ ಮೊದಲು ತ್ರಿವಿಕ್ರಂ ಅವರನ್ನು ಗೋಮುಖ ವ್ಯಾಘ್ರ ಎಂದು ಮೋಕ್ಷಿತಾ ಅವರು ಹೇಳಿದ್ದರು. ಈಗ ಇದನ್ನು ಪುನರುಚ್ಛರಿಸಿದ್ದಾರೆ. ಈ ಬಗ್ಗೆ ಅವರು ನೇರ ಮಾತುಗಳಿಂದ ಎಲ್ಲವನ್ನೂ ಹೇಳಿಕೊಂಡಿದ್ದಾರೆ.

ಮೋಕ್ಷಿತಾಗೆ ಹತ್ತಿರ ಆಗಬೇಕು ಎಂದು ತ್ರಿವಿಕ್ರಂ ಅವರು ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದು ಇದೆ. ಆದರೆ, ಅದು ಸಾಧ್ಯವಾಗಲೇ ಇಲ್ಲ. ‘ನನಗೆ ಮೋಕ್ಷಿತಾ ಜೊತೆ ಆಟ ಆಡಬೇಕು ಎನ್ನುವ ಆಸೆ ಇದೆ’ ಎಂದು ತ್ರಿವಿಕ್ರಂ ಅವರು ಹಲವು ಬಾರಿ ಹೇಳಿಕೊಂಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಮೋಕ್ಷಿತಾ ಅವರು ನಾಮಿನೇಷನ್ ವೇಳೆ ತ್ರಿವಿಕ್ರಂ ಹೆಸರನ್ನು ತೆಗೆದುಕೊಂಡಿದ್ದಾರೆ.

‘ತ್ರಿವಿಕ್ರಂ ಎರಡು ಮುಖ ಇರುವ ವ್ಯಕ್ತಿ. ಅವರಿಗೆ ನನ್ನ ಜೊತೆ ಆಡಬೇಕು ಎನ್ನುತ್ತಾರೆ. ನಾನು ಅದಕ್ಕೆ ಓಕೆ ಎಂದಿದ್ದೆ. ನನ್ನ ಜೊತೆ ಇದ್ದಾಗ ಮಂಜು ಅವರ ಬಗ್ಗೆ ನನ್ನ ಬಳಿ ಕೆಟ್ಟದಾಗಿ ಮಾತನಾಡಿದ್ದರು. ಆ ಬಳಿಕ ಅವರ ಬಳಿಯೇ ಡೀಲ್ ಮಾಡಿಕೊಂಡಿದ್ದರು. ಅವರು ಗೋಮುಖ ವ್ಯಾಘ್ರ ಎಂದು ನಾನು ಈ ಮೊದಲು ಹೇಳಿದ್ದೆ. ಅದನ್ನು ಈಗಲೂ ಹೇಳುತ್ತೇನೆ’ ಎಂದರು ಮೋಕ್ಷಿತಾ.

‘ನನ್ನ 57 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಅತಿ ಕಡಿಮೆ ಮಾತನಾಡಿದ್ದು ಎಂದರೆ ಅದು ಮೋಕ್ಷಿತಾ ಜೊತೆ. ಮೋಕ್ಷಿತಾ ಚೆನ್ನಾಗಿದ್ದಾಗ ಚೆನ್ನಾಗಿರುತ್ತಾರೆ. ಬೇಡ ಎನಿಸಿದಾಗ ಎಲ್ಲವನ್ನೂ ಕೆಟ್ಟದ್ದಾಗಿ ಹೇಳುತ್ತಾರೆ’ ಎಂದು ತ್ರಿವಿಕ್ರಂ ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಗೌತಮಿ ಧರಿಸಿದ್ದ ಪಾಸಿಟಿವ್ ಮುಖವಾಡ ಬಯಲು; ಮೋಕ್ಷಿತಾ ಈಗ ದುಷ್ಮನ್

ಈ ಮೊದಲು ಮೋಕ್ಷಿತಾ ಅವರು ಮಂಜು ಜೊತೆ ಆಪ್ತವಾಗಿ ಇದ್ದರು. ಆಗ ಮಂಜು ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು. ಆ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಮೂಡಿತ್ತು. ಈಗ ಇಬ್ಬರೂ ಬೇರೆ ಆಗಿದ್ದಾರೆ. ಮೋಕ್ಷಿತಾ ಅವರು ಶಿಶಿರ್ ಗ್ಯಾಂಗ್​ನಲ್ಲಿ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us