ಕೊನೆಗೂ ತೆರೆಯಿತು ಕ್ಯಾಪ್ಟನ್ ಕೋಣೆಯ ಬೀಗ: ತೆರೆದಿದ್ದು ಯಾರು?

|

Updated on: Dec 22, 2023 | 11:24 PM

Bigg Boss: ಎರಡು ವಾರಗಳಿಂದ ಬೀಗ ಹಾಕಲ್ಪಟ್ಟಿದ್ದ ಕ್ಯಾಪ್ಟೆನ್ಸಿ ಕೋಣೆಯ ಬೀಗ ಈಗ ತೆರೆದಿದೆ. ಅಂದಹಾಗೆ ಕೋಣೆಯ ಬೀಗ ತೆರೆದಿದ್ದು ಯಾರು?

ಕೊನೆಗೂ ತೆರೆಯಿತು ಕ್ಯಾಪ್ಟನ್ ಕೋಣೆಯ ಬೀಗ: ತೆರೆದಿದ್ದು ಯಾರು?
Follow us on

ಬಿಗ್​ಬಾಸ್ (Bigg Boss) ಮನೆಯ ಕ್ಯಾಪ್ಟನ್​ ಸ್ಥಾನಕ್ಕೆ ವಿಶೇಷ ಗೌರವ, ಮಾನ್ಯತೆ ಇದೆ. ಅದಕ್ಕೆ ಮುಖ್ಯ ಕಾರಣ, ಕ್ಯಾಪ್ಟನ್ ಆದವರು ಒಂದು ವಾರ ನಾಮಿನೇಷನ್​ನಿಂದ ಇಮ್ಯೂನಿಟಿ ಪಡೆಯುತ್ತಾರೆ. ಅಲ್ಲದೆ, ಕ್ಯಾಪ್ಟನ್​ಗಾಗಿ ಮೀಸಲಾಗಿರುವ ಕೋಣೆಯನ್ನು ಬಳಸುವ ಅಧಿಕಾರ ಪಡೆಯುತ್ತಾರೆ. ಆದರೆ ಕಳೆದ ಎರಡು ವಾರಗಳಿಂದ ಬಿಗ್​ಬಾಸ್ ಮನೆಗೆ ಯಾವುದೇ ಕ್ಯಾಪ್ಟನ್ ಇರಲಿಲ್ಲ. ಆದರೆ ಎರಡು ವಾರಗಳ ಬಳಿಕ ಇದೀಗ ಕ್ಯಾಪ್ಟನ್ ಕೋಣೆಯ ಬಾಗಿಲು ತೆರೆಯಲಾಗಿದೆ. ಮನೆಗೆ ಒಬ್ಬ ಕ್ಯಾಪ್ಟನ್ ಸಿಕ್ಕಿದ್ದಾರೆ.

ಎರಡು ವಾರಗಳ ಹಿಂದೆ ನಡೆದಿದ್ದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ವರ್ತೂರು ಸಂತೋಷ್ ಕ್ಯಾಪ್ಟನ್ ಆಗಿದ್ದರು. ಆದರೆ ಅವರು ಹಾಗೂ ವಿನಯ್ ಸೇರಿ ಕುತಂತ್ರದಿಂದ ಟಾಸ್ಕ್​ ಗೆದ್ದಿದ್ದ ಕಾರಣಕ್ಕೆ ಸುದೀಪ್ ಅವರು ಕ್ಯಾಪ್ಟನ್ ಆಯ್ಕೆಯನ್ನು ರದ್ದು ಮಾಡಿ, ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ್ದರು. ಆದರೆ ಕಳೆದ ವಾರ ಅವರೇ ಕ್ಯಾಪ್ಟನ್ ಟಾಸ್ಕ್​ ಮತ್ತೆ ಮಾಡಬೇಕೆಂದು ಘೋಷಿಸಿದ್ದರು. ಅಂತೆಯೇ ಈ ಶುಕ್ರವಾರದ ಎಪಿಸೋಡ್​ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ ನಡೆಸಲಾಯ್ತು. ಕೊನೆಗೆ ಮನೆಗೆ ಒಬ್ಬ ಕ್ಯಾಪ್ಟನ್ ಸಿಕ್ಕಿದರು.

ಈ ವಾರದ ಟಾಸ್ಕ್​ಗಳು ಆರಂಭವಾದಾಗಿನಿಂದಲೂ ಕ್ಯಾಪ್ಟೆನ್ಸಿ ಟಾಸ್ಕ್​ನ ಲೆಕ್ಕಾಚಾರವೇ ಎಲ್ಲ ಸ್ಪರ್ಧಿಗಳ ಮನಸ್ಸಿನಲ್ಲಿ ಓಡುತ್ತಿತ್ತು. ಹೆಚ್ಚು ಪಾಯಿಂಟ್ಸ್ ಇದ್ದವರು ಕ್ಯಾಪ್ಟೆನ್ಸಿ ಟಾಸ್ಕ್​ಗೆ ಅರ್ಹರಾಗುತ್ತಾರೆ ಎಂಬುದು ಮೊದಲೇ ಗೊತ್ತಿದ್ದರಿಂದ ಎಲ್ಲರೂ ಪಾಯಿಂಟ್ಸ್​ಗಾಗಿ ಹಾತೊರೆಯುತ್ತಿದ್ದರು. ಶುಕ್ರವಾರದ ಎಪಿಸೋಡ್​ನಲ್ಲಂತೂ ವೀಕ್ಷಕರಿಗೆ ಗೊಂದಲವಾಗುವಷ್ಟು ಲೆಕ್ಕಾಚಾರಗಳು ನಡೆದವು.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

ಎಲ್ಲ ಲೆಕ್ಕಾಚಾರಗಳೂ ಮುಗಿದು ಕೊನೆಗೆ ಕಾರ್ತಿಕ್, ವಿನಯ್, ಸಂಗೀತಾ, ನಮ್ರತಾ ಅವರುಗಳು ಮಾತ್ರವೇ ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಅರ್ಹತೆ ಗಿಟ್ಟಿಸಿಕೊಂಡರು. ಚೆಂಡನ್ನು ಬ್ಯಾಲೆನ್ಸ್ ಮಾಡುವ ಟಾಸ್ಕ್​ನಲ್ಲಿ ವಿನಯ್ ಹಾಗೂ ನಮ್ರತಾ ಗೆದ್ದು ಅಂತಿಮವಾಗಿ ಉಳಿದ ಇಬ್ಬರು ಸ್ಪರ್ಧಿಗಳಾದರು. ಬಳಿಕ ಬಿಗ್​ಬಾಸ್ ಆದೇಶದಂತೆ ಮನೆಯ ಸ್ಪರ್ಧಿಗಳು ಒಟ್ಟಿಗೆ ಸೇರಿ ವಿನಯ್ ಹಾಗೂ ನಮ್ರತಾರಲ್ಲಿ ಒಬ್ಬರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕಾಯ್ತು.

ಅದರಂತೆ ಮೊದಲು ಮಾತನಾಡಿದ ವಿನಯ್, ತಾನು ಈಗಾಗಲೇ ಒಮ್ಮೆ ಕ್ಯಾಪ್ಟನ್ ಆಗಿದ್ದೇನೆ, ನಾನು ಅಗ್ರೆಸಿವ್, ಮುಂದೆಯೂ ಅಗ್ರೆಸಿವ್ ಆಗಿಯೇ ಆಡಲಿದ್ದೇನೆ, ಆದರೆ ನನಗೆ ಕ್ಯಾಪ್ಟನ್​ಗೆ ಮತ ಹಾಕುವ ಅವಕಾಶ ಸಿಕ್ಕರೆ ನಾನು ನಮ್ರತಾಗೆ ಮತ ಹಾಕುತ್ತಿದ್ದೆ ಎಂದರು. ನಂತರ ಬಂದ ನಮ್ರತಾ, ನನ್ನ ತಂದೆ-ತಾಯಿಯ ಫೋಟೊ ಕ್ಕಾಗಿ ಆದರೂ ನಾನು ಕ್ಯಾಫ್ಟನ್ ಆಗಲೇ ಬೇಕು ಎಂದರು. ಅಂತಿಮವಾಗಿ ಮನೆಯ ಎಲ್ಲ ಸದಸ್ಯರು ನಮ್ರತಾ ಅವರೇ ಕ್ಯಾಪ್ಟನ್ ಆಗಬೇಕೆಂದು ಮತ ಹಾಕಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:22 pm, Fri, 22 December 23