ನಮ್ರತಾ ಗೌಡ (Namratha Gowda) ಅವರು ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ಅವರು ಎಲ್ಲರ ಜೊತೆ ಬರೆಯುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗುತ್ತಿದೆ. ಈ ಕಾರಣಕ್ಕೆ ಅವರ ಮೈಲೇಜ್ ಹೆಚ್ಚಿದೆ. ಅನೇಕ ವಾರಗಳಿಂದ ಅವರು ನಾಮಿನೇಟ್ ಆಗಿರಲಿಲ್ಲ. ಈ ವಾರ ಅವರು ಡೇಂಜರ್ ಜೋನ್ನಲ್ಲಿ ಇದ್ದಾರೆ. ಅವರಿಗೆ ಹೆಚ್ಚು ವೋಟ್ ಪಡೆಯೋ ಅಗತ್ಯವಿದೆ. ಹೀಗಾಗಿ ಹೆಚ್ಚು ಹೈಲೈಟ್ ಆಗಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ನಮ್ರತಾ ಅವರ ಕಾಲೆಳೆದಿದ್ದಾರೆ ವಿನಯ್. ಈ ಎಪಿಸೋಡ್ ಗಮನ ಸೆಳೆದಿದೆ.
ನಮ್ರತಾ ಗೌಡ ಹಾಗೂ ವಿನಯ್ ಗೌಡ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಒಬ್ಬರ ಮೇಲೊಬ್ಬರು ಹಾಸ್ಯ ಮಾಡುತ್ತಾ ಇರುತ್ತಾರೆ. ಜನವರಿ 11ರ ಎಪಿಸೋಡ್ನಲ್ಲಿ ನಮ್ರತಾ ಗೌಡ ಅವರು ಅಡುಗೆ ಮನೆಯಲ್ಲಿದ್ದರು. ವಿನಯ್ ಹಾಗೂ ಪ್ರತಾಪ್ ಕೂಡ ಅಲ್ಲಿಯೇ ಇದ್ದರು. ಈ ವೇಳೆ ನಮ್ರತಾ ಬಾಯಿಂದ ಒಂದು ಹಾಡು ಬಂತು. ‘ಪ್ರೀತಿ ನೀನಿನ್ನಲದೆ ನಾನು ಹೇಗಿರಲಿ’ ಎಂದು ಹಾಡಿದರು. ಇದಕ್ಕೆ ವಿನಯ್ ಕೌಂಟರ್ ಕೊಟ್ಟರು. ‘ಇಷ್ಟು ವರ್ಷ ಹೇಗಿದ್ದೆಯೋ ಹಾಗೆಯೇ ಇದ್ದುಬಿಡು’ ಎಂದರು. ವಿನಯ್ ಮಾತಿಗೆ ನಮ್ರತಾ ಸೈಲೆಂಟ್ ಆದರು.
ನಮ್ರತಾ ಗೌಡ ಇತ್ತೀಚೆಗೆ ಸಾಕಷ್ಟು ಹೈಲೈಟ್ ಆಗುತ್ತಿದ್ದಾರೆ. ಮೊದಲು ಸ್ನೇಹಿತ್ ಜೊತೆ ಆಪ್ತತೆ ಬೆಳೆಸಿಕೊಂಡಿದ್ದ ಅವರು ಈಗ ಕಾರ್ತಿಕ್ ಜೊತೆ ಕ್ಲೋಸ್ ಆಗಿದ್ದಾರೆ. ಈ ಕಾರಣದಿಂದಲೂ ಸುದ್ದಿ ಆಗುತ್ತಿದ್ದಾರೆ. ನಮ್ರತಾ ಹಾಗೂ ಕಾರ್ತಿಕ್ ಆಪ್ತತೆ ಕಂಡು ಸ್ನೇಹಿತ್ ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಕಾರಣಕ್ಕೆ ನಮ್ರತಾನ ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿ ಮಾಡದಂತೆ ಸ್ನೇಹಿತ್ ಅವರು ಕೋರಿದ್ದಾರೆ.
ಇದನ್ನೂ ಓದಿ: ಈಗ ಮನೆಯ ಮೆಚ್ಚಿನ ಸ್ಪರ್ಧಿ: ಬದಲಾದರೇ ನಮ್ರತಾ ಗೌಡ?
ಸದ್ಯ ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ, ವಿನಯ್ ಗೌಡ, ಸಂಗೀತಾ, ತನಿಷಾ, ಕಾರ್ತಿಕ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ಪ್ರತಾಪ್ ಮಧ್ಯೆ ಸ್ಪರ್ಧೆ ಮುಂದುವರಿದಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ಗಳು ಪ್ರಸಾರ ಕಾಣುತ್ತಿವೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:35 am, Fri, 12 January 24