Nenapirali Prem: ‘ಪತಿಯ ಕನಸು ನನಸು ಮಾಡಲು ತಾಳಿ ಅಡ ಇಟ್ಟಳು’; ಕಷ್ಟದ ದಿನ ನೆನಪಿಸಿಕೊಂಡ ನೆನಪಿರಲಿ ಪ್ರೇಮ್

ನೆನಪಿರಲಿ ಪ್ರೇಮ್ ಹಾಗೂ ಜ್ಯೋತಿ ಅವರದ್ದು ಲವ್ ಮ್ಯಾರೇಜ್. ಮೂರು ವರ್ಷ ಪ್ರೀತಿಸಿ ಮದುವೆ ಆದರು. ಇವರ ದಾಂಪತ್ಯ ಜೀವನ ಎರಡು ದಶಕಗಳನ್ನು ಪೂರೈಸಿದೆ.

Nenapirali Prem: ‘ಪತಿಯ ಕನಸು ನನಸು ಮಾಡಲು ತಾಳಿ ಅಡ ಇಟ್ಟಳು’; ಕಷ್ಟದ ದಿನ ನೆನಪಿಸಿಕೊಂಡ ನೆನಪಿರಲಿ ಪ್ರೇಮ್
ಜ್ಯೋತಿ-ಪ್ರೇಮ್
Follow us
ರಾಜೇಶ್ ದುಗ್ಗುಮನೆ
|

Updated on:May 03, 2023 | 2:45 PM

ನೆನಪಿರಲಿ ಪ್ರೇಮ್ (Nenapirali Prem) ಅವರು ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷ ಕಳೆದಿದೆ. ಅನೇಕ ಯಶಸ್ವಿ ಸಿನಿಮಾಗಳನ್ನು ಅವರು ನೀಡಿದ್ದಾರೆ. ಈಗ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ವೀಕೆಂಡ್ ವಿತ್ ರಮೇಶ್​’ಗೆ (Weekend With Ramesh) ಅತಿಥಿಯಾಗಿ ಆಗಮಿಸಿದ್ದಾರೆ. ಸಾಧಕರ ಸೀಟ್​ನಲ್ಲಿ ಕುಳಿತು ಅವರು ತಮ್ಮ ಹಳೆಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ಪತಿಯ ಕನಸು ನನಸು ಮಾಡಲು ಅವರ ಪತ್ನಿ ಜ್ಯೋತಿ ತಾಳಿಯನ್ನು ಅಡ ಇಟ್ಟಿದ್ದರು. ಈ ವಿಚಾರವನ್ನು ಅವರು ವೇದಿಕೆ ಮೇಲೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ನೆನಪಿರಲಿ ಪ್ರೇಮ್ ಹಾಗೂ ಜ್ಯೋತಿ ಅವರದ್ದು ಲವ್ ಮ್ಯಾರೇಜ್. ಮೂರು ವರ್ಷ ಪ್ರೀತಿಸಿ ಮದುವೆ ಆದರು. ಇವರ ದಾಂಪತ್ಯ ಜೀವನ ಎರಡು ದಶಕಗಳನ್ನು ಪೂರೈಸಿದೆ. ಇವರ ಮಧ್ಯೆ ಇರುವ ಪ್ರೀತಿ ಎಂದಿಗೂ ಕಡಿಮೆ ಆಗಿಲ್ಲ. ಈ ವಿಚಾರದ ಬಗ್ಗೆ ನೆನಪಿರಲಿ ಪ್ರೇಮ್ ಅವರು ಮಾತನಾಡಿದ್ದಾರೆ.

2005ರಲ್ಲಿ ರಿಲೀಸ್ ಆದ ‘ನೆನಪಿರಲಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ದೊಡ್ಡ ಯಶಸ್ಸು ಕಂಡರು. ರಾತ್ರೋರಾತ್ರಿ ಫೇಮಸ್ ಆದರು. ಇದರ ಜೊತೆಗೆ ಅವರು ಕಷ್ಟಗಳನ್ನು ನೋಡಿದ್ದಾರೆ. ‘21 ವರ್ಷದ ಹಿಂದೆ ಬೆಳಕು ಹರಿಯುವುದರೊಳಗೆ ನಾನು ದೊಡ್ಡ ಹೀರೋ ಆದೆ. ಅಲ್ಲಿಂದ ಆರಂಭವಾದ ಜರ್ನಿ ನನ್ನ ಲೈಫ್ ಏನು ಎಂದು ತೋರಿಸಿತು’ ಎಂದು ಪ್ರೇಮ್ ಹೇಳಿದ್ದಾರೆ. ನೆನಪಿರಲಿ ಪ್ರೇಮ್​ ಅವರ ಕನಸು ನನಸಾಗಬೇಕು ಎನ್ನುವ ಕಾರಣಕ್ಕೆ ಜ್ಯೋತಿ ತಾಳಿಯನ್ನು ಅಡ ಇಟ್ಟರು. ‘ಈ ತರಹ ಸ್ಥಿತಿ ಬರುತ್ತದೆ ಎಂದು ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ’ ಎಂದಿದ್ದಾರೆ ಪ್ರೇಮ್.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: Weekend With Ramesh: ವೀಕೆಂಡ್ ವಿತ್ ರಮೇಶ್​ಗೆ ಬಂದ ಹೊಸ ಸಾಧಕ, ಯಾರು ಗೆಸ್ ಮಾಡಬಲ್ಲಿರಾ?

ನೆನಪಿರಲಿ ಪ್ರೇಮ್, ಶರಣ್, ಮಾಸ್ಟರ್ ಆನಂದ್ ಅವರದ್ದು ಒಂದು ಗ್ಯಾಂಗ್. ಗೆಳೆಯರಿಲ್ಲದೆ ಕಾರ್ಯಕ್ರಮ ಪೂರ್ಣಗೊಳ್ಳಲ್ಲ. ಹೀಗಾಗಿ, ಶರಣ್, ಮಾಸ್ಟರ್ ಆನಂದ್ ಮೊದಲಾದವರು ಗೆಳೆಯ ಪ್ರೇಮ್ ಬಗ್ಗೆ ಮಾತನಾಡಲು ವೇದಿಕೆ ಏರಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ‘ಸ್ಯಾಂಡಲ್‌ವುಡ್‌ನ ಲವ್ಲೀ ಸ್ಟಾರ್, ನೆನಪಿರಲಿ ಪ್ರೇಮ್ ಈ ವೀಕೆಂಡ್‌ನ ಅತಿಥಿ. ವೀಕೆಂಡ್ ವಿತ್ ರಮೇಶ್-5, ಶನಿ-ಭಾನು ರಾತ್ರಿ 9ಕ್ಕೆ’ ಎಂದು ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ.

ಇದನ್ನೂ ಓದಿ: ಕುಟುಂಬದೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಕ್ಷಿತಾ ಪ್ರೇಮ್, ಚಿತ್ರಗಳು ಇಲ್ಲಿವೆ

ಪ್ರೇಮ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ, ಅವರ ಸಂಪೂರ್ಣ ಜರ್ನಿ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಸಾಧಕರ ಸೀಟ್ ಮೇಲೆ ಕುಳಿತು ಅವರು ತಮ್ಮ ಪಯಣ ಬಿಚ್ಚಿಡುವ ಸಾಧ್ಯತೆ ಇದೆ. 2021ರಲ್ಲಿ ರಿಲೀಸ್ ಆದ ‘ಪ್ರೇಮಂ ಪೂಜ್ಯಂ’ ಬಳಿಕ ಅವರ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:44 pm, Wed, 3 May 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್