‘ನಯನತಾರಾಗೆ ಮಗು ಕೂಡ ಜನಿಸಿತು, ಮದುವೆ ವಿಡಿಯೋ ಎಲ್ಲಿ?’ ನೆಟ್​​ಫ್ಲಿಕ್ಸ್​ಗೆ ನೆಟ್ಟಿಗರ ಪ್ರಶ್ನೆ

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮೊದಲೇ ಫೋಟೋ ಪೋಸ್ಟ್ ಮಾಡಿದ್ದರಿಂದ ಡೀಲ್ ಕ್ಯಾನ್ಸಲ್ ಆಗಿದೆ ಎಂದು ಸುದ್ದಿ ಹರಿದಾಡಿತ್ತು. ಇದಕ್ಕೆ ನೆಟ್​​ಫ್ಲಿಕ್ಸ್ ಈ ಬಗ್ಗೆ ಸ್ಪಷ್ಟನೆ ನೀಡಿತ್ತು.

‘ನಯನತಾರಾಗೆ ಮಗು ಕೂಡ ಜನಿಸಿತು, ಮದುವೆ ವಿಡಿಯೋ ಎಲ್ಲಿ?’ ನೆಟ್​​ಫ್ಲಿಕ್ಸ್​ಗೆ ನೆಟ್ಟಿಗರ ಪ್ರಶ್ನೆ
ನಯನತಾರಾ
Updated By: ರಾಜೇಶ್ ದುಗ್ಗುಮನೆ

Updated on: Oct 12, 2022 | 2:42 PM

ನಟಿ ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ ತಿಂಗಳಲ್ಲಿ ಮದುವೆ ಆದರು. ಮದುವೆ ಆಗಿ ನಾಲ್ಕು ತಿಂಗಳಿಗೆ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರು. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ. ನಟಿ ನಯನತಾರಾ ಮಕ್ಕಳ ಫೋಟೋ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ‘ನೆಟ್​ಫ್ಲಿಕ್ಸ್ ಇಂಡಿಯಾ’ಗೆ ನಯನತಾರಾ ಅಭಿಮಾನಿಗಳು ಪ್ರಶ್ನೆ ಒಂದನ್ನು ಇಟ್ಟಿದ್ದಾರೆ. ‘ನಯನತಾರಾ ಹಾಗೂ ವಿಘ್ನೇಶ್ ಶಿವನ್​ ಮದುವೆ ವಿಡಿಯೋ ಎಲ್ಲಿ?’. ಇಬ್ಬರೂ ಮದುವೆ ಆಗಿ ಮಗು ಪಡೆದರೂ ನೆಟ್​ಫ್ಲಿಕ್ಸ್ ಅವರು ವಿವಾಹದ ವಿಡಿಯೋ ರಿಲೀಸ್ ಮಾಡಿಲ್ಲ. ಈ ವಿಚಾರದಲ್ಲಿ ಫ್ಯಾನ್ಸ್ ಅಪ್ಡೇಟ್​ ಕೇಳುತ್ತಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ ತಿಂಗಳಲ್ಲಿ ಮದುವೆ ಆದರು. ತಿರುಪತಿಯಲ್ಲಿ ಮದುವೆ ಆಗಬೇಕು ಎಂಬುದು ಇವರ ಆಸೆ ಆಗಿತ್ತು. ಆದರೆ, ಇದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಈ ಜೋಡಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ವಿವಾಹ ಮಾಡಿಕೊಂಡಿತ್ತು. ಇವರ ಮದುವೆಯ ಸುಂದರ ಕ್ಷಣಗಳನ್ನು ನೆಟ್​ಫ್ಲಿಕ್ಸ್ ಸೆರೆ ಹಿಡಿದಿದೆ. ಮದುವೆ ವಿಡಿಯೋ ಶೂಟ್ ಮಾಡಲು ನೆಟ್​ಫ್ಲಿಕ್ಸ್ ಹಲವು ಅರೇಂಜ್​ಮೆಂಟ್ಸ್​​  ಮಾಡಿತ್ತು. ಈಗ ಮದುವೆ ಆಗಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮಗು ಕೂಡ ಪಡೆದಿದ್ದಾರೆ. ಆದರೆ, ವಿವಾಹದ ವಿಡಿಯೋ ಮಾತ್ರ ಪ್ರಸಾರ ಕಂಡಿಲ್ಲ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮೊದಲೇ ಫೋಟೋ ಪೋಸ್ಟ್ ಮಾಡಿದ್ದರಿಂದ ಡೀಲ್ ಕ್ಯಾನ್ಸಲ್ ಆಗಿದೆ ಎಂದು ಸುದ್ದಿ ಹರಿದಾಡಿತ್ತು. ಇದಕ್ಕೆ ನೆಟ್​​ಫ್ಲಿಕ್ಸ್ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಸ್ಟಾರ್ ದಂಪತಿಯ ವಿವಾಹದ ಟೀಸರ್ ಹಂಚಿಕೊಂಡಿತ್ತು. ಈ ಮೂಲಕ ಮದುವೆ ವಿಡಿಯೋ ಬರಲಿದೆ ಎಂಬುದನ್ನು ಒಟಿಟಿ ಸಂಸ್ಥೆ ಫ್ಯಾನ್ಸ್​ಗೆ ತಿಳಿಸಿತ್ತು. ಆದರೆ, ಈ ಘೋಷಣೆ ಆಗಿ ಹಲವು ಸಮಯ ಕಳೆದರೂ ವಿಡಿಯೋ ಮಾತ್ರ ಹೊರ ಬಿದ್ದಿಲ್ಲ.

ಇದನ್ನೂ ಓದಿ
Nayanthara: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು
ಮದುವೆಯಲ್ಲಿ ಸುಂದರಿಯಾಗಿ ಮಿಂಚಿದ ನಯನತಾರಾ; ಇಲ್ಲಿದೆ ಫೋಟೋ ಗ್ಯಾಲರಿ
Priyanka Chopra: ಬಾಡಿಗೆ ತಾಯಿ ಮೂಲಕ ಮಗು ಪಡೆದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್
Mimi Trailer: ‘ಮಿಮಿ’ ಟ್ರೇಲರ್​ ನೋಡಿದರೆ ಸಾಕು, ಕಣ್ಣಿಗೆ ಕಟ್ಟುತ್ತದೆ ಬಾಡಿಗೆ ತಾಯಿಯ ಕಷ್ಟ

ಇದನ್ನೂ ಓದಿ: ಬಾಡಿಗೆ ತಾಯ್ತನದ ಮೂಲಕ ಮಗು ಪಡೆದು ಸಂಕಷ್ಟಕ್ಕೆ ಸಿಲುಕಿದ ನಟಿ ನಯನತಾರಾ-ವಿಘ್ನೇಶ್​

ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ನಡುವಿನ ಲವ್​ ಸ್ಟೋರಿ ಬಗ್ಗೆ ಹೆಚ್ಚಿನ ವಿಷಯ ತಿಳಿಯುವ ಹಂಬಲ ಕೂಡ ಅಭಿಮಾನಿಗಳಿಗೆ ಇದೆ. ಆ ಬಗ್ಗೆಯೂ ನೆಟ್​ಫ್ಲಿಕ್ಸ್ ವಿಡಿಯೋದಲ್ಲಿ ಮಾಹಿತಿ ಇರಲಿದೆ ಎಂದು ಹೇಳಲಾಗಿತ್ತು. ತಮ್ಮ ಮದುವೆ ಬಗ್ಗೆ ಸ್ವತಃ ನಯನತಾರಾ, ವಿಘ್ನೇಶ್​ ಶಿವನ್​ ಏನು ಹೇಳಿದ್ದಾರೆ? ಒಟ್ಟಾರೆ ಮದುವೆಯ ವಾತಾವರಣ ಯಾವ ರೀತಿ ಇತ್ತು? ಅತಿಥಿಗಳ ಸಂಗಮ ಹೇಗಿತ್ತು ಎಂಬುದನ್ನೆಲ್ಲ ಅಭಿಮಾನಿಗಳಿಗೆ ತೋರಿಸಲು ನೆಟ್​ಫ್ಲಿಕ್ಸ್​ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ, ವಿಡಿಯೋ ಮಾತ್ರ ಹೊರಬಿದ್ದಿಲ್ಲ.