ಈ ವಾರ ಇರಲ್ಲ ಎಲಿಮಿನೇಷನ್; ನಾಮಿನೇಷನ್ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್

ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲಿಮಿನೇಷನ್ ಇರುವುದಿಲ್ಲವೇ ಎನ್ನುವ ಅನುಮಾನ ವೀಕ್ಷಕರಲ್ಲಿ ಮೂಡಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಹಾಗೂ ಕಳೆದ ವಾರವೇ ಇಬ್ಬರು ಎಲಿಮಿನೇಟ್ ಆಗಿ ಹೊರಹೋಗಿರುವುದರಿಂದ, ಈ ಬಾರಿ ವಿಭಿನ್ನ ನಾಮಿನೇಷನ್ ಪ್ರಕ್ರಿಯೆ ನಡೆಸುವ ಮೂಲಕ ಎಲಿಮಿನೇಷನ್ ರದ್ದು ಮಾಡುವ ಸುಳಿವನ್ನು ಬಿಗ್ ಬಾಸ್ ನೀಡಿದ್ದಾರೆ.

ಈ ವಾರ ಇರಲ್ಲ ಎಲಿಮಿನೇಷನ್; ನಾಮಿನೇಷನ್ ಮೂಲಕ ಸೂಚನೆ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್

Updated on: Oct 13, 2026 | 7:37 AM

ಮುಖ್ಯಾಂಶಗಳು

  • ಡ್ಯಾನ್ಸ್ ಫ್ಲೋರ್ ಮೂಲಕ ನಡೆದ ವಿಭಿನ್ನ ನಾಮಿನೇಷನ್ ಪ್ರಕ್ರಿಯೆ
  • ಕಳೆದ ವಾರವೇ ನಡೆದಿದ್ದ ಡಬಲ್ ಎಲಿಮಿನೇಷನ್
  • ನವರಾತ್ರಿ ಹಬ್ಬದ ಪ್ರಯುಕ್ತ ಈ ವಾರ ನೋ ಎಲಿಮಿನೇಷನ್?

ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲಿಮಿನೇಷನ್ ಇರುವುದಿಲ್ಲವೇ? ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ ನೋಡಿದ ಅನೇಕರಿಗೆ ಹೀಗೊಂದು ಅನುಮಾನ ಬಂದಿದೆ. ಕಳೆದ ಕೆಲ ವರ್ಷಗಳಿಂದ ನವರಾತ್ರಿ ವಾರದಲ್ಲಿ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ಈ ವರ್ಷವೂ ಎಲಿಮಿನೇಷನ್ ನಡೆಯೋದು ಅನುಮಾನ ಎಂಬ ಮಾತುಗಳು ಕೇಳಿ ಬಂದಿವೆ.

ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ ಯಾವಾಗಲೂ ಪ್ರತಿ ಸ್ಪರ್ಧಿಗಳ ಅಭಿಪ್ರಾಯ ಹಾಗೂ ಅವರು ಮಾಡಿದ ನಾಮಿನೇಷನ್ ಆಧರಿಸಿಯೇ ಇರುತ್ತದೆ. ಆದರೆ, ಈ ಬಾರಿ ಭಿನ್ನವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣ ಆಗಿದೆ. ಇದನ್ನು ನೋಡಿದ ವೀಕ್ಷಕರು ಈ ವಾರ ಎಲಿಮಿನೇಷನ್ ಅನುಮಾನ ಎನ್ನುತ್ತಿದ್ದಾರೆ.

ಡ್ಯಾನ್ಸ್ ಫ್ಲೋರ್

ಈ ವಾರ ಒಂದು ಡ್ಯಾನ್ಸ್ ಫ್ಲೋರ್ ನಿರ್ಮಾಣ ಮಾಡಲಾಗಿತ್ತು. ಅದರ ಎದರು ಭಾಗದಲ್ಲಿ ಮೂರು ಸಣ್ಣ ಸ್ಟೇಜ್ ನಿರ್ಮಾಣ ಮಾಡಿ ಅದರಲ್ಲಿ ನಂಬರ್ ಬರೆಯಲಾಗಿತ್ತು. ಬಿಗ್ ಬಾಸ್ ಪ್ಲೇ ಮಾಡುವ ಹಾಡು ಆಫ್ ಆದ ತಕ್ಷಣ ಎಲ್ಲಾ ಸ್ಪರ್ಧಿಗಳು ಹೋಗಿ ನಂಬರ್ ಬಳಿ ನಿಲ್ಲಬೇಕು. ಕ್ಯಾಪ್ಟನ್ ಧನುಷ್ ಸೂಚಿಸಿದ ಗುಂಪಿನವರು ಅವರ ತಂಡದಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಹೊರಕ್ಕೆ ಹಾಕಬೇಕು. ಅವರು ನಾಮಿನೇಟ್ ಆಗುತ್ತಾರೆ. ಬಿಗ್ ಬಾಸ್ ಈ ರೀತಿ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದು ತೀರಾ ವಿರಳ. ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಈ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಿರಬಹುದು ಎನ್ನುವ ಅನುಮಾನ ಮೂಡಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ

ಎರಡು ಎಲಿಮಿನೇಷನ್

ಕಳೆದ ವಾರ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಮಂಜು ಅವಾಚ್ಯ ಶಬ್ದ ಬಳಕೆ ಮಾಡಿ ಎಲಿಮಿನೇಟ್ ಆದರೆ, ಸಂಗೀತಾ ಅವರು ಅನಾರೋಗ್ಯದ ಕಾರಣಕ್ಕೆ ಹೊರ ಹೋಗಿದ್ದಾರೆ. ಹೀಗಾಗಿ, ಈ ವಾರ ಎಲಿಮಿನೇಷನ್ ನಡೆಸುವ ಸಾಧ್ಯತೆ ಕಡಿಮೆ,.
ಹಬ್ಬದ ಸಮಯ

ನವರಾತ್ರಿ ಸಮಯದಲ್ಲಿ ಎಲಿಮಿನೇಷನ್ ನಡೆಸದೇ ಇರೋದು ಬಿಗ್ ಬಾಸ್ ಸಂಪ್ರದಾಯವಾಗಿ ರೂಪಿಸಿಕೊಂಡು ಬಂದಿದೆ. ಹೀಗಾಗಿ, ಅದು ಈ ಬಾರಿಯೂ ಮುಂದುವರಿಯುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us