Namratha Gowda: ಬಿಗ್ ಬಾಸ್​ನಲ್ಲಿ ಪ್ಲ್ಯಾನ್ ಮಾಡಿದಂತೆ ಯಾವುದೂ ನಡೆಯುತ್ತಿಲ್ಲ ಎಂದ ನಮ್ರತಾ ಗೌಡ

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಹೊರಗೆ ಪ್ರತಿ ವಾರ ಸಿಗೋಣ, ಪಾರ್ಟಿ ಮಾಡೋಣ ಎಂದೆಲ್ಲ ಪ್ಲ್ಯಾನ್ ಮಾಡಿದ್ದರು. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಆರಂಭದಲ್ಲಿ ಕೆಲವು ಬಾರಿ ಇವರು ಭೇಟಿ ಆಗಿದ್ದು ಇದೆ. ಈಗ ಆ ರೀತಿಯ ಭೇಟಿಗಳು ನಿರಂತರವಾಗಿ ನಡೆಯುತ್ತಿಲ್ಲ ಎಂದು ನಮ್ರತಾ ಗೌಡ ಮಾಹಿತಿ ನೀಡಿದ್ದಾರೆ.

Namratha Gowda: ಬಿಗ್ ಬಾಸ್​ನಲ್ಲಿ ಪ್ಲ್ಯಾನ್ ಮಾಡಿದಂತೆ ಯಾವುದೂ ನಡೆಯುತ್ತಿಲ್ಲ ಎಂದ ನಮ್ರತಾ ಗೌಡ
ನಮ್ರತಾ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on: Apr 30, 2024 | 8:31 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಪೂರ್ಣಗೊಂಡು ಮೂರು ತಿಂಗಳು ಕಳೆದರೂ ಆ ಬಗ್ಗೆ ನಡೆಯುತ್ತಿರುವ ಚರ್ಚೆಗಳು ನಿಂತಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಈ ಶೋ ಬಗ್ಗೆ, ಶೋನ ಸ್ಪರ್ಧಿಗಳ ಬಗ್ಗೆ ಚರ್ಚೆಗಳು ಆಗುತ್ತಿವೆ. ಈಗ ನಮ್ರತಾ ಗೌಡ ಅವರು ಒಂದು ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್​ನಲ್ಲಿ ಪ್ಲ್ಯಾನ್ ಮಾಡಿದಂತೆ ಯಾವುದೂ ನಡೆಯುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಹೀಗೆ ಹೇಳೋಕೂ ಒಂದು ಕಾರಣ ಇದೆ.

‘ಬಿಗ್ ಬಾಸ್​’ನಲ್ಲಿ ಇದ್ದಾಗ ವಿನಯ್ ಗೌಡ, ನಮ್ರತಾ, ರಕ್ಷಕ್ ಬುಲೆಟ್, ಈಶಾನಿ, ಮೈಕಲ್ ಅಜಯ್ ಮೊದಲಾದವರು ಒಟ್ಟಿಗೆ ಇದ್ದರು. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿತ್ತು. ‘ಬಿಗ್ ಬಾಸ್’ ಪೂರ್ಣಗೊಂಡ ಬಳಿಕ ಹೊರಗೆ ಪ್ರತಿ ವಾರ ಸಿಗೋಣ, ಪಾರ್ಟಿ ಮಾಡೋಣ ಎಂದೆಲ್ಲ ಪ್ಲ್ಯಾನ್ ಮಾಡಿದ್ದರು. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಆರಂಭದಲ್ಲಿ ಕೆಲವು ಬಾರಿ ಇವರು ಭೇಟಿ ಆಗಿದ್ದು ಇದೆ. ಈಗ ಆ ರೀತಿಯ ಭೇಟಿಗಳು ನಿರಂತರವಾಗಿ ನಡೆಯುತ್ತಿಲ್ಲ ಎಂದು ಟಿವಿ9 ಕನ್ನಡಕ್ಕೆ ನಮ್ರತಾ ಗೌಡ ಮಾಹಿತಿ ನೀಡಿದ್ದಾರೆ.

‘ದಿನವೂ ಸಿಗಬೇಕು ಇಲ್ಲವಾದರೆ ವಾರಕ್ಕೆ ಒಮ್ಮೆ ಆದರೂ ಸಿಗಬೇಕು ಎಂದು ಬಿಗ್ ಬಾಸ್​​ನಲ್ಲಿ ಪ್ಲ್ಯಾನ್ ಮಾಡಿದ್ವಿ. ಆದರೆ, ಅದೆಲ್ಲ ನಡೆಯುತ್ತಿಲ್ಲ. ನನ್ನ ಸರ್ಕಲ್​ನಲ್ಲಿ ಇರುವವರನ್ನು ನನ್ನ ಬರ್ತ್ಡೇಗೆ ಕರೆದಿದ್ದೆ. ನಾನು ರೆಗ್ಯುಲರ್ ಆಗಿ ಯಾರ ಜೊತೆಗೂ ಕಂಟ್ಯಾಕ್ಟ್ ಇಲ್ಲ. ವಿನಯ್, ಈಶಾನಿ ಜೊತೆ ಆಗಾಗ ಕಾಲ್​ನಲ್ಲಿ ಮಾತನಾಡುತ್ತೇನೆ. ರಕ್ಷಕ್, ಕಾರ್ತಿಕ್ ಹಾಗೂ ಇತರರು ಈವೆಂಟ್​ನಲ್ಲಿ ಮಾತಾಡ್ತೀನಿ’ ಎಂದಿದ್ದಾರೆ ನಮ್ರತಾ.

ಇದನ್ನೂ ಓದಿ: ‘ಬಿಗ್ ಬಾಸ್’ ಬಳಿಕ ನಮ್ರತಾ ಗೌಡ ಜೀವನದಲ್ಲಿ ಆದ ಬದಲಾವಣೆ ಒಂದೆರಡಲ್ಲ; ವಿವರಿಸಿದ ನಟಿ

ಬಿಗ್ ಬಾಸ್ ಮನೆಯಲ್ಲಿದ್ದಾಗ ಅದೇ ಒಂದು ಲೋಕ ಎನಿಸುತ್ತದೆ. ಅಲ್ಲಿರುವ ಬಾಂಡಿಂಗ್ ಹೊರಗೂ ಮುಂದುವರಿಯುತ್ತದೆ ಎಂದು ಹೇಳೋದು ಕಷ್ಟ. ಹೊರಗೆ ಬಂದ ಬಳಿಕ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಹೀಗಾಗಿ ಪದೇ ಪದೇ ಸಿಗೋದು ಅಸಾಧ್ಯವೇ. ಸದ್ಯ ನಮ್ರತಾ ಯಾವುದೇ ಹೊಸ ಆಫರ್ ಒಪ್ಪಿಕೊಂಡಿಲ್ಲ. ಅವರು ನಟನೆಯಲ್ಲಿ ಮತ್ತಷ್ಟು ಪಳಗಲು ತರಬೇತಿ ಕೂಡ ಪಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.