AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namratha Gowda: ‘ಬಿಗ್ ಬಾಸ್’ ಬಳಿಕ ನಮ್ರತಾ ಗೌಡ ಜೀವನದಲ್ಲಿ ಆದ ಬದಲಾವಣೆ ಒಂದೆರಡಲ್ಲ; ವಿವರಿಸಿದ ನಟಿ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡು ಮೂರು ತಿಂಗಳು ಪೂರ್ಣಗೊಂಡಿದೆ. ಇದರಲ್ಲಿ ಭಾಗಿ ಆದ ಸ್ಪರ್ಧಿಗಳು ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಇದರಲ್ಲಿ ನಮ್ರತಾ ಗೌಡ ಕೂಡ ಹೊರತಾಗಿಲ್ಲ. ಅವರ ಬದುಕು ಸಾಕಷ್ಟು ಬದದಲಾಗಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

Namratha Gowda: ‘ಬಿಗ್ ಬಾಸ್’ ಬಳಿಕ ನಮ್ರತಾ ಗೌಡ ಜೀವನದಲ್ಲಿ ಆದ ಬದಲಾವಣೆ ಒಂದೆರಡಲ್ಲ; ವಿವರಿಸಿದ ನಟಿ
ರಾಜೇಶ್ ದುಗ್ಗುಮನೆ
|

Updated on: Apr 29, 2024 | 11:37 AM

Share

‘ಬಿಗ್ ಬಾಸ್’ ಹಲವು ಕಲಾವಿದರ ಬದುಕನ್ನು ಬದಲಿಸಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್ 10’ (BBK 10) ಕೂಡ ಇದಕ್ಕೆ ಹೊರತಾಗಿಲ್ಲ. ಈ ರಿಯಾಲಿಟಿ ಶೋ ಸಾಕಷ್ಟು ಸದ್ದು ಮಾಡಿತ್ತು. ಕಿರುತೆರೆ ಮೂಲಕ ಫೇಮಸ್ ಆದ ನಮ್ರತಾ ಗೌಡ ಕೂಡ ಇದರಲ್ಲಿ ಸ್ಪರ್ಧಿಸಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದರು. ಅವರ ಬದುಕು ಈಗ ಸಾಕಷ್ಟು ಬದಲಾಗಿದೆ. ಈ ಬಗ್ಗೆ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ. ಮೊದಲು ಹೇಗಿದ್ದರು ಮತ್ತು ಈಗ ಹೇಗಿದ್ದಾರೆ ಎನ್ನುವ ಬಗ್ಗೆ ಅವರು ವಿವರಿಸಿದ್ದಾರೆ.

ನಮ್ರತಾ ಗೌಡ ಅವರು ನಟಿಯಾದ ಹೊರತಾಗಿಯೂ ಜನರ ಜೊತೆ ಹೆಚ್ಚು ಬೆರೆಯುತ್ತಿರಲಿಲ್ಲ. ಈಗ ಅವರು ಬದಲಾಗಿದ್ದಾರೆ. ‘ಈ ಮೊದಲು ನಾನು ಜನರಿಂದ ದೂರ ಓಡ್ತಾ ಇದ್ದೆ. ನಾನಾಯ್ತು ನನ್ನ ಕೆಲಸ ಆಯ್ತು ಅಂತ ಇರುತ್ತಿದೆ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಈಗ ಹಾಗಲ್ಲ, ಬೇಕೋ ಬೇಡವೋ ಹೋಗಲೇ ಬೇಕಾಗುತ್ತದೆ. ಎಲ್ಲಿ ಹೋದರೂ ನಮ್ರತಾ, ನಮ್ರತಾ ಎಂದು ಫ್ಯಾನ್ಸ್ ಬರುತ್ತಾರೆ. ಎಲ್ಲಿ ಹೋದರೂ ಜನರು ನಿಲ್ಲಿಸಿ ಮಾತನಾಡುತ್ತಾರೆ. ನಿರೀಕ್ಷೆ ಜಾಸ್ತಿ ಆಗಿದೆ. ಏನಾದರೂ ದೊಡ್ಡದಾಗಿ ಮಾಡಬೇಕು’ ಎಂದಿದ್ದಾರೆ ನಮ್ರತಾ.

ಭೇಟಿ ಆಗುವ ಎಲ್ಲರೂ ನಮ್ರತಾ ಅವರನ್ನು ತುಂಬಾ ಪರಿಚಯಸ್ತರು, ಫ್ಯಾಮಿಲಿ ಅನ್ನೋ ರೀತಿಯಲ್ಲಿ ಟ್ರೀಟ್ ಮಾಡುತ್ತಿದ್ದಾರಂತೆ.  ‘ಜನರು ಪ್ರತಿಕ್ರಿಯಿಸುತ್ತಿರುವ ರೀತಿಗೆ ಖುಷಿ ಇದೆ. ನಟಿ ಆದರೂ ನಾನು ಸೋಶಿಯಲೈಜ್ ಆಗುತ್ತಾ ಇರಲಿಲ್ಲ. ಆದರೆ ಈಗ ಹಾಗಲ್ಲ, ನಾನು ಮಿಂಗಲ್ ಆಗ್ತಾ ಇದೀನಿ. ಫೋಟೋ ಕೊಡ್ತೀನಿ. ನಾವು ಹೇಗೆ ರಿಯಾಕ್ಟ್ ಮಾಡ್ತೀವಿ ಅನ್ನೋದು ಜನರಿಗೆ ಗೊತ್ತಾಗಿಬಿಟ್ಟಿದೆ. ತುಂಬಾ ಪರಿಚಯದವರು ಅನ್ನೋ ತರಹ ಮಾತಾಡಿಸಿದಾಗ ನಮಗೆ ಶಾಕ್ ಆಗುತ್ತದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಈ ಬಾರಿಯ ಬಿಗ್ ಬಾಸ್ ಫಾಲೋ ಮಾಡಿದ್ದಾರೆ. ಅವರಿಗೂ ನಾವು ಹತ್ತಿರ ಆಗಿದ್ದೇವೆ’ ಎಂದು ನಮ್ರತಾ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಬಳಿಕ ನಮ್ರತಾಗೆ ಸಾಕಷ್ಟು ಆಫರ್​ಗಳು ಬರುತ್ತಿವೆ. ಆದರೆ, ಈ ವಿಚಾರದಲ್ಲಿ ಅವರು ತರಾತುರಿ ತೋರುತ್ತಿಲ್ಲ. ‘ಸಿನಿಮಾ, ಧಾರಾವಾಹಿ ಆಫರ್​ಗಳು ಬರುತ್ತಿವೆ. ನಾನು ಯಾವುದನ್ನೂ ಒಪ್ಪಿಕೊಂಡಿಲ್ಲ. ಈ ರಶ್​ನಲ್ಲಿ ಹಣಕ್ಕಾಗಿ ಬಂದ ಆಫರ್​ಗಳೆಲ್ಲ ಒಪ್ಪಿಕೊಂಡು ಸಿನಿಮಾ ಮಾಡಿಬಿಡಬಹುದು. ಆದರೆ, ಜನರು ಗುರುತಿಸಬೇಕು. ಆ ರೀತಿಯ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ. ಕಿರುತೆರೆ ಮನೆಯ ತರ. ಯಾವಾಗಲೂ ಓಪನಿಂಗ್ಸ್ ಇದ್ದೇ ಇರುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ

ನಮ್ರತಾ ಗೌಡ ಅವರು ಬಿಗ್ ಬಾಸ್ ಮುಗಿದ ಬಳಿಕ ನಟನೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ವರ್ಕ್​ಶಾಪ್​ಗಳನ್ನು ಕೂಡ ಅವರು ಅಟೆಂಡ್ ಮಾಡುತ್ತಾ ಇದ್ದಾರೆ. ಈ ಮೂಲಕ ಮುಂದೆ ಒಪ್ಪಿಕೊಳ್ಳೋ ಆಫರ್​ಗಳಿಗೆ ಮೊದಲೇ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಬಿಗ್ ಬಾಸ್​’ನಲ್ಲಿ ನಮ್ರತಾ ತಿಂಡಿಗಳ ಬಗ್ಗೆ ಮಾತನಾಡುತ್ತಿದ್ದರು. ಹೊರಗೆ ಬಂದ ಬಳಿಕ ಅವರು ತಮ್ಮಿಷ್ಟದ ಆಹಾರಗಳನ್ನು ಸವಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.