
ಖ್ಯಾತ ನಿರ್ದೇಶಕ ಹಾಗೂ ಬಿಗ್ ಬಾಸ್ ಸ್ಪರ್ಧಿ ಓಂ ಪ್ರಕಾಶ್ ರಾವ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದೆ. ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ತೀವ್ರ ಮಾನಸಿಕ ಒತ್ತಡದ ಕಾರಣದಿಂದಾಗಿ ಅವರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೊರ ಬಂದಿರುವ ಅವರು ಈಗ ಅವರು ದೊಡ್ಮನೆಗೆ ಮರಳುತ್ತಾರಾ ಎಂಬುದು ಸದ್ಯದ ಪ್ರಶ್ನೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಓಂ ಪ್ರಕಾಶ್ ರಾವ್ ಸ್ಪರ್ಧಿ ಆಗಿದ್ದರು. ದೊಡ್ಮನೆಯಿಂದ ಮರಳಿದ ಓಂ ಪ್ರಕಾಶ್ ರಾವ್ ಸದ್ಯ ಕಾಡುಮನೆ ಎಸ್ಟೇಟ್ ಬಳಿ ಇರುವ ಆರಾಧ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರು ಬಿಗ್ ಬಾಸ್ ಮನೆಯಲ್ಲಿ ಕುಟುಂತ್ತಾ ಓಡಾಡುತ್ತಿದ್ದರು. ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೂ ದಿನ ವಿಮಾನದಲ್ಲೇ ಸಮಯ ಕಳೆಯುವ ಪರಿಸ್ಥಿತಿ ಬಂದಿತ್ತು.
ಆರೋಗ್ಯ ವ್ಯತ್ಯಾಸವಾಗುತ್ತಿದ್ದಂತೆ ಕುಟುಂಬಸ್ಥರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಸ್ತುತ ಒಂದು ಗಂಟೆಯ ಹಿಂದೆಯಷ್ಟೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯರು ಅವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಅವರ ಕುಟುಂಬದ ವೈದ್ಯರು ಶೀಘ್ರದಲ್ಲೇ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆ ಇದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ತಪಾಸಣೆಗಾಗಿ ಓಂ ಪ್ರಕಾಶ್ ರಾವ್ ಅವರನ್ನು ಅವರ ರೆಗ್ಯೂಲರ್ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಏರಡನೇ ಬಾರಿ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ನಿರ್ದೇಶಕ ಓಂ ಪ್ರಕಾಶ್ ರಾವ್
ಬಿಗ್ ಬಾಸ್ ಮನೆಯ ಒಳಗಿನ ಕಠಿಣ ವಾತಾವರಣ ಹಾಗೂ ಅಲ್ಲಿನ ಆಟದ ಒತ್ತಡವೇ ಅವರ ಈ ಸ್ಥಿತಿಗೆ ಕಾರಣವಿರಬಹುದು ಎಂದು ಊಹಿಸಲಾಗಿದೆ. ಓಂ ಪ್ರಕಾಶ್ ರಾವ್ ಅವರು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಪ್ರಾರ್ಥಿಸುತ್ತಿದ್ದಾರೆ. ವೈದ್ಯರ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ. ಈ ಮೊದಲು ಬಿಗ್ ಬಾಸ್ ಮನೆಗೆ ಹೋದಾಗ ಅವರು ಅನಾರೋಗ್ಯದ ಕಾರಣದಿಂದಲೇ ಹೊರ ಬಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:15 pm, Mon, 14 September 26