ಬಿಗ್ ಬಾಸ್ನಲ್ಲಿ ಹಲವರು ಧ್ವನಿ ಆಗಿದ್ದಾರೆ. ಪ್ರತಿ ಬಾರಿಯೂ ಬೇರೆ ಬೇರೆ ಕಲಾವಿದರು ಧ್ವನಿ ನೀಡುತ್ತಾರೆ. ಈ ಪೈಕಿ ಹೆಚ್ಚು ಗಮನ ಸೆಳೆದಿದ್ದು ಪ್ರದೀಪ್ ಬಡೆಕ್ಕಿಲ ಅವರ ಧ್ವನಿ. ಈ ವಾಯ್ಸ್ನ ಅನೇಕರು ಕೇಳಿರುತ್ತೀರಿ. ಈಗಲೂ ಇವರ ಧ್ವನಿಯನ್ನು ಅನೇಕರು ಮಿಸ್ ಮಾಡಿಕೊಳ್ಳುತ್ತಾರೆ. ಈಗ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.
ಪ್ರದೀಪ್ ಬಡೆಕ್ಕಿಲ ಅವರು ಬಿಗ್ ಬಾಸ್ಗೆ ಧ್ವನಿ ಆಗಿದ್ದರು. ಅವರ ಧ್ವನಿ ಎನೇಕರಿಗೆ ಇಷ್ಟ ಆಗಿದೆ. ಅವರ ಧ್ವನಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇದೆ. ಅದರಲ್ಲೂ ಬಿಗ್ ಬಾಸ್ನಲ್ಲಿ ಇವರ ಧ್ವನಿ ಗಮನ ಸೆಳೆಯುತ್ತದೆ. ಕಲರ್ಸ್ ಜೊತೆ ಇವರು ಒಳ್ಳೆಯ ಒಡನಾಟ ಹೊಂದಿದ್ದು, ಧಾರಾವಾಹಿಗಳ ಸಮಯವನ್ನು ಹೇಳೋಕೆ ಹಾಕುವ ಜಾಹೀರಾತಿಗೆ ಇವರ ಧ್ವನಿ ಈಗಲೂ ಬಳಕೆಯಲ್ಲಿ ಇದೆ.
ಉದಾಹರಣೆಗೆ, ‘ಲಕ್ಷ್ಮೀ ಬಾರಮ್ಮ’ ಸೋಮವಾರದಿಂದ ಶನಿವಾರದವರೆಗೆ ಸಂಜೆ 7.30ಕ್ಕೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ’. ಈ ರೀತಿಯ ಧ್ವನಿಯನ್ನು ಪ್ರದೀಪ್ ಅವರು ಈಗಲೂ ನೀಡುತ್ತಾರೆ. ಇದಲ್ಲದೆ, ಹಲವು ಜಾಹೀರಾತುಗಳಿಗೆ, ಎಲ್ಲಕ್ಕಿಂತ ಮುಖ್ಯವಾಗಿ ಮೆಟ್ರೋದಲ್ಲಿ ಅವರ ಧ್ವನಿ ಯಾವಾಗಲೂ ಕೇಳುತ್ತದೆ. ‘ಮುಂದಿನ ನಿಲ್ದಾಣ ಜಯನಗರ’ ಎಂದು ಹೇಳುವಾಗ ಕೇಳಿ ಬರುವುದು ಅವರದ್ದೇ ಧ್ವನಿ. ಅವರು ಬಂಟ್ವಾಳ ತಾಲೂಕಿನವರು. ಸಣ್ಣ ಹಳ್ಳಿಯಿಂದ ಬಂದ ಅವರು ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಅವರು ಧ್ವನಿ ಆಗುತ್ತಾರೆ.
v
ಪ್ರದೀಪ್ ಬಡೆಕ್ಕಿಲ ಅವರು ಟಿವಿ9 ಕನ್ನಡದಲ್ಲೂ ಕೆಲಸ ಮಾಡಿದ್ದಾರೆ. ವಾಯ್ಸ್ ಓವರ್ಗಳನ್ನು ನೀಡಿ ಅವರು ಗಮನ ಸೆಳೆದರು. ಆರ್ಜೆ ಆಗಿಯೂ ಕೆಲಸ ಮಾಡಿದ್ದಾರೆ. ನಂತರ ಹಲವು ರಿಯಾಲಿಟಿ ಶೋಗಳಿಗೆ ಅವರು ನರೇಟರ್ ಆದರು. ಅವರು ಕೆಲವು ಧಾರಾವಾಹಿಗಳಲ್ಲಿ ಹೀರೋ ಆಗಿಯೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳಿನಲ್ಲೂ ಬಣ್ಣ ಹಚ್ಚಿದ್ದಾರೆ. ಅವರು ಈಗ ವಾಯ್ಸ್ ಓವರ್ಗಳನ್ನು ನೀಡುತ್ತಾರೆ. ಇದರಲ್ಲಿಯೆ ಅವರು ಬದುಕು ಕಟ್ಟಿಕೊಂಡಿದ್ದಾರೆ. ಹೊಸ ಹೊಸ ಕ್ಷೇತ್ರಗಳ ಅನ್ವೇಷಣೆಯನ್ನು ಮಾಡುತ್ತಾ ಸಾಗುತ್ತಾರೆ.
ಇದನ್ನೂ ಓದಿ: ಬಿಗ್ ಬಾಸ್ ಫಾರ್ಮ್ಯಾಟ್ ಬಗ್ಗೆ ಭವ್ಯಾಗೆ ಅಸಮಾಧಾನ; ಕಿಚ್ಚನ ಕ್ಲಾಸ್ ಫಿಕ್ಸ್?
ಬಿಗ್ ಬಾಸ್ನಲ್ಲಿ ನರೇಟರ್ ಆಗಿದ್ದ ಪ್ರದೀಪ್ ಅವರು, ಕೊನೆಯಲ್ಲಿ ಬರುವ ಕೆಲವು ಚೆಂದದ ಸಾಲುಗಳನ್ನು ಅವರು ಹೇಳುತ್ತಿದ್ದರು. ಅವರ ಧ್ವನಿಗೆ ದೊಡ್ಡ ಅಭಿಮಾನಿ ಬಳಗ ಈಗಲೂ ಇದೆ. ಈಗ ಅವರ ಧ್ವನಿಯನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:13 am, Wed, 15 January 25