ನಟ ಪುನೀತ್ ರಾಜ್ಕುಮಾರ್ ಇಲ್ಲ ಎನ್ನುವ ವಿಚಾರವನ್ನು ಯಾರಿಂದಲೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನರು ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿಯಲ್ಲಿ ಪ್ರಸಾರವಾಗುತ್ತಿರುವ ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಪುನೀತ್ಗೆ ಸ್ವರ ನಮನ ಸಲ್ಲಿಸಲಾಗಿದೆ. ಈ ವಾರದ ಎಪಿಸೋಡ್ ಸಂಪೂರ್ಣವಾಗಿ ಪುನೀತ್ ನೆನಪು ಮಾಡಿಕೊಳ್ಳುವ ಹಾಗೂ ಅವರಿಗೆ ನಮನ ಸಲ್ಲಿಸುವ ಕೆಲಸ ವೇದಿಕೆ ಮೇಲೆ ಆಗಲಿದೆ ಎನ್ನಲಾಗುತ್ತಿದೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಸಂಗೀತ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್ಗಳಿಗೆ ಇದು ವೇದಿಕೆ ಆಗಿತ್ತು. ಈಗ ಕಲರ್ಸ್ ಕನ್ನಡ ವಾಹಿನಿ ಈ ಶೋನ ಹೊಸ ಸೀಸನ್ ಆರಂಭಿಸಿದೆ. ಆಗಸ್ಟ್ 14ರಂದು ಈ ರಿಯಾಲಿಟಿ ಶೋ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇದ್ದಾರೆ. ಈ ವೇದಿಕೆ ಮೇಲೆ ಪುನೀತ್ ಅವರಿಗೆ ನಮನ ಸಲ್ಲಿಸಲಾಗಿದೆ.
ಪುನೀತ್ ಹೃದಯಾಘಾತದಿಂದ ನಿಧನ ಹೊಂದುವ ಹಿಂದಿನ ದಿನ ಅಂದರೆ ಅಕ್ಟೋಬರ್ 28ರ ರಾತ್ರಿ ಅವರು ಗಾಯಕ ಗುರುಕಿರಣ್ ಅವರ ಮನೆಗೆ ತೆರಳಿದ್ದರು. ಗುರುಕಿರಣ್ ಬರ್ತ್ಡೇ ಪಾರ್ಟಿಯಲ್ಲಿ ಪುನೀತ್ ನಗುತ್ತಾ ಓಡಾಡಿಕೊಂಡಿದ್ದರು. ಆದರೆ, ಮರುದಿನ 11 ಗಂಟೆ ಸುಮಾರಿಗೆ ಪುನೀತ್ ನಿಧನ ಹೊಂದಿದ್ದರು. ಈ ಘಟನೆ ಗುರುಕಿರಣ್ಗೆ ಶಾಕ್ ನೀಡಿದೆ. ರಾತ್ರಿ ಪಾರ್ಟಿಯಲ್ಲಿ ಹಾಯಾಗಿ ಸಮಯ ಕಳೆದಿದ್ದ ಅಪ್ಪು ಮುಂಜಾನೆ ಇಲ್ಲ ಎನ್ನುವುದನ್ನು ಅವರ ಬಳಿ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅವರು ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಮಾತು ಪೂರ್ಣಗೊಳ್ಳುವ ವೇಳೆ ಅವರ ಕಣ್ಣೀರ ಕೋಡಿ ಒಡೆದಿತ್ತು. ‘ರಾತ್ರಿ ನೋಡಿದ ವ್ಯಕ್ತಿ ಬೆಳಗ್ಗೆ ಇಲ್ಲ ಎಂದರೆ..’ ಎಂದು ಗುರುಕಿರಣ್ ಭಾವುಕರಾದರು.
ಇದನ್ನೂ ಓದಿ: ಬೆಂಗಳೂರಿನ ಎಸ್ಆರ್ವಿ ಥಿಯೇಟರ್ನಲ್ಲಿ ಕೊನೆಯದಾಗಿ ಅಟೆಂಡ್ ಮಾಡಿದ್ದ ಪುನೀತ್; ಇಲ್ಲಿದೆ ಸಿಸಿಟಿವಿ ವಿಡಿಯೋ
ಸಾಯುವುದಕ್ಕೂ ಒಂದು ವಾರ ಮೊದಲು ಫಿಸಿಯೋ ಥೆರಪಿ ಮಾಡಿಸಿಕೊಂಡಿದ್ದ ಪುನೀತ್ ರಾಜ್ಕುಮಾರ್
Published On - 6:54 pm, Thu, 4 November 21