ಕ್ಯಾಪ್ಟನ್ ಆದ ರಜತ್; ಬಿಗ್ ಬಾಸ್​ ಟ್ರೋಫಿ ಹಿಡಿಯಲು ಇನ್ನಷ್ಟು ಸಮೀಪ

|

Updated on: Jan 03, 2025 | 10:59 PM

ವೈಲ್ಡ್​ ಕಾರ್ಡ್​ ಮೂಲಕ ಬಿಗ್ ಬಾಸ್ ಆಟಕ್ಕೆ ಎಂಟ್ರಿ ನೀಡಿದ ರಜತ್ ಅವರು ನಿರೀಕ್ಷೆಯಂತೆಯೇ ಉತ್ತಮವಾಗಿ ಆಟವಾಡಿದ್ದಾರೆ. ಮೊದಲಿಗೆ ತುಂಬ ರಫ್ ಆ್ಯಂಡ್​ ಟಫ್ ಆಗಿ ನಡೆದುಕೊಂಡಿದ್ದ ಅವರು ನಂತರದ ದಿನಗಳಲ್ಲಿ ತಮ್ಮನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದರು. ಈಗ ಅವರು ಕ್ಯಾಪ್ಟನ್ ಕೂಡ ಆಗಿದ್ದಾರೆ. ಆ ಮೂಲಕ ಗೆಲುವಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ.

ಕ್ಯಾಪ್ಟನ್ ಆದ ರಜತ್; ಬಿಗ್ ಬಾಸ್​ ಟ್ರೋಫಿ ಹಿಡಿಯಲು ಇನ್ನಷ್ಟು ಸಮೀಪ
Rajath
Follow us on

‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್ ಕನ್ನಡ ಸೀಸನ್​ 11’ ಆಟ ಕೊನೇ ಹಂತವನ್ನು ತಲುಪುತ್ತಿದೆ. ಯಾರಿಗೆ ಬಿಗ್ ಬಾಸ್ ಟ್ರೋಫಿ ಹಿಡಿಯುವ ಅವಕಾಶ ಸಿಗಲಿದೆ ಎಂಬುದನ್ನು ತಿಳಿಯಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಸೀಸನ್​ನಲ್ಲಿ ರಜತ್ ಅವರು ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. 50 ದಿನ ಕಳೆದ ಬಳಿಕ ವೈಲ್ಡ್​ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಬಂದ ಅವರು 100 ದಿನಗಳ ಸಮೀಪದಲ್ಲಿ ಇದ್ದಾರೆ. ರಜತ್ ಈ ವಾರ ಕ್ಯಾಪ್ಟನ್ ಆಗಿದ್ದು, ಇನ್ನಷ್ಟು ಸ್ಟ್ರಾಂಗ್ ಆಗಿದ್ದಾರೆ.

ಕ್ಯಾಪ್ಟನ್ ಆದ ಸಂದರ್ಭದಲ್ಲೇ ರಜತ್ ಅವರಿಗೆ ಕಿಚ್ಚ ಸುದೀಪ್ ಕಡೆಯಿಂದ ಪತ್ರ ಬಂದಿದೆ. ‘ನಾಯಕನಿಗೂ, ಖಳನಾಯಕನಿಗೈ ವ್ಯತ್ಯಾಸ ಇಷ್ಟೇ. ಒಬ್ಬನಿಗೆ ಕೋಪ ಜಾಸ್ತಿ. ಇನ್ನೊಬ್ಬನಿಗೆ ತಾಳ್ಮೆ ಜಾಸ್ತಿ. ನೀವು ನಾಯಕನಾ ಅಥವಾ ಖಳನಾಯಕನಾ’ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆ ಪತ್ರದಲ್ಲಿ ರಜತ್​ಗೆ ಕಿವಿಮಾತು ಕೂಡ ಇದೆ. ಇದಕ್ಕೆ ಉತ್ತರಿಸಿರುವ ರಜತ್ ಅವರು ‘ನಾನು ನಿಮ್ಮ ಅಭಿಮಾನಿ ಸರ್​’ ಎಂದು ಹೇಳಿದ್ದಾರೆ. ಕ್ಯಾಪ್ಟನ್ ಆಗಿ ಅವರು ಬಿಗ್ ಬಾಸ್ ಮನೆಯಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು.

ರಜತ್ ಅವರು ಬಿಗ್ ಬಾಸ್ ಮನೆಗೆ ಬಂದ ಆರಂಭದಲ್ಲಿ ತುಂಬ ವೈಲ್ಡ್ ಆಗಿ ನಡೆದುಕೊಳ್ಳುತ್ತಿದ್ದರು. ಗೋಲ್ಡ್ ಸುರೇಶ್​ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅಲ್ಲದೇ, ಧನರಾಜ್ ಮೇಲೆ ಕೈ ಮಾಡಲು ಕೂಡ ಅವರು ಮುಂದಾಗಿದ್ದರು. ಚೈತ್ರಾ ಅವರನ್ನು ಕಂಡರೆ ರಜತ್ ಉರಿದುಬೀಳುತ್ತಿದ್ದರು. ಒಂದು ಟಾಸ್ಕ್ ರದ್ದಾಗುವಂತೆ ನಡೆದುಕೊಂಡಿದ್ದರು. ಇನ್ನೊಂದು ಟಾಸ್ಕ್ ಆಡುವಾಗ ಉಗ್ರಂ ಮಂಜು ಜೊತೆ ಕೈ ಕೈ ಮಿಲಾಯಿಸುವ ಹಂತಕ್ಕೂ ರಜತ್ ಹೋಗಿದ್ದರು. ಆದರೆ ದಿನದಿಂದ ದಿನಕ್ಕೆ ಅವರು ಸುಧಾರಿಸಿದ್ದಾರೆ.

ಇದನ್ನೂ ಓದಿ: ಹಳ್ಳಿಯಿಂದ ಬಂದ ಅಪ್ಪ, ಅಮ್ಮನಿಗೆ ಹೆಮ್ಮೆಯಿಂದ ಬಿಗ್ ಬಾಸ್ ಮನೆ ತೋರಿಸಿದ ಹನುಮಂತ

ಶೀಘ್ರದಲ್ಲೇ ಬಿಗ್ ಬಾಸ್ ಫಿನಾಲೆ ಬರಲಿದೆ. ಈಗ ರಜತ್, ಚೈತ್ರಾ ಕುಂದಾಪುರ, ಧನರಾಜ್, ಹನುಮಂತ, ಉಗ್ರಂ ಮಂಜು, ಗೌತಮಿ, ತ್ರಿವಿಕ್ರಮ್​, ಭವ್ಯಾ ಗೌಡ, ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಒಂದೊಂದು ಆಯಾಮದಿಂದ ಒಬ್ಬೊಬ್ಬರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅಂತಿಮವಾಗಿ ಯಾರ ಕೈಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಈ ವಾರ ಬಿಗ್ ಬಾಸ್ ಸದಸ್ಯರ ಕುಟುಂಬದವರು ದೊಡ್ಮನೆಗೆ ಬಂದಿದ್ದರು. ಆದ್ದರಿಂದ ಮನರಂಜನೆ ಜಾಸ್ತಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.