ರಕ್ಷಕ್ ಬುಲೆಟ್ (Rakshak Bullet) ಅವರು ಬಿಗ್ ಬಾಸ್ ಮನೆಯಿಂದ ಕೇವಲ ಒಂದೇ ತಿಂಗಳಿಗೆ ಔಟ್ ಆದರು. ಇದು ಅವರ ಫ್ಯಾನ್ಸ್ಗೆ ಸಾಕಷ್ಟು ಬೇಸರ ಮೂಡಿಸಿತ್ತು. ಸ್ವತಃ ರಕ್ಷಕ್ ಅವರು ಈ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಕಾರಣದಿಂದಲೇ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡೋಕೆ ಆರಂಭಿಸಿದ್ದರು. ಸಂದರ್ಶನಗಳಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದರು. ಈಶಾನಿ ಅವರು ದೊಡ್ಮನೆ ಒಳಗೆ ಅತಿಥಿಯಾಗಿ ಎಂಟ್ರಿ ಕೊಟ್ಟಾಗ ಪ್ರತಾಪ್ ಬಗ್ಗೆ ಮಾತನಾಡಿದ್ದರು. ಇದನ್ನು ಸುದೀಪ್ ಖಂಡಿಸಿದ್ದರು. ಪರಿಣಾಮ ಯಾವ ವಿಡಿಯೋ ಟೇಪ್ನಲ್ಲೂ (ವಿಟಿ) ಅವರು ಕಾಣಿಸಿಲ್ಲ.
ತಮ್ಮ ಬಗ್ಗೆ ನೆಗೆಟಿವ್ ಟಾಕ್ ಮಾಡಿದವರಿಗೆ ಸುದೀಪ್ ಎಚ್ಚರಿಕೆ ನೀಡದೇ ಬಿಡುವುದಿಲ್ಲ. ರಕ್ಷಕ್ ಹಾಗೂ ಈಶಾನಿ ಇಬ್ಬರಿಗೂ ಎಚ್ಚರಿಕೆ ನೀಡುವ ಕೆಲಸವನ್ನು ಅವರು ಮಾಡಿದ್ದರು. ಇದರ ಜೊತೆ ಯಾವುದೇ ವಿಡಿಯೋ ಟೇಪ್ನಲ್ಲಿ ಅವರು ಕಾಣಿಸಿಲ್ಲ. ಕಿರಿಕ್ ಮಾಡಿಕೊಂಡಿದ್ದರಿಂದಲೇ ಅವರನ್ನು ಎಲ್ಲಾ ವಿಡಿಯೋಗಳಿಂದ ಕೈ ಬಿಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.
ಬಿಗ್ ಬಾಸ್ನಲ್ಲಿ ಫನ್, ಕಣ್ಣೀರು ಇತ್ಯಾದಿ ಘಟನೆಗಳು ನಡೆದಿರುತ್ತವೆ. ಇದರ ಸಮ್ಅಪ್ ಮಾಡಿ ವಿಡಿಯೋ ಪ್ಲೇ ಮಾಡಲಾಗುತ್ತದೆ. ಈ ಬಾರಿ ಫನ್ ವಿಟಿ, ಕಣ್ಣೀರು ಹಾಕಿದ ವಿಟಿ, ಒಟ್ಟಾರೆ ಜರ್ನಿ ವಿಟಿಯನ್ನು ಹಾಕಲಾಗಿದೆ. ಇದರಲ್ಲಿ ಎಲ್ಲಿಯೂ ರಕ್ಷಕ್ ಹಾಗೂ ಈಶಾನಿಯನ್ನು ತೋರಿಸಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ರಕ್ಷಕ್ ಹಾಗೂ ಈಶಾನಿ ಮಾಡಿಕೊಂಡ ಕಿರಿಕ್ನಿಂದಲೇ ಈ ರೀತಿ ಆಗಿರಬಹುದು ಎಂದು ಅನೇಕರು ಭಾವಿಸಿದ್ದಾರೆ.
ಇದನ್ನೂ ಓದಿ: ‘ಗೆಳೆಯ ಬುಲೆಟ್ ಪ್ರಕಾಶ್ ಮನಸ್ಸಿನಲ್ಲಿದ್ದಾರೆ, ಅಂದ್ರೆ ನಿಮ್ಮನ್ನು ಪ್ರೀತ್ಸಲ್ವ?’; ರಕ್ಷಕ್ಗೆ ಸುದೀಪ್ ಪ್ರಶ್ನೆ
ರಕ್ಷಕ್ ಅವರು ಬಿಗ್ ಬಾಸ್ ಮನೆ ಒಳಗೆ ಎರಡನೇ ಬಾರಿ ಬರುವಾಗ ಅತಿಥಿಯಾಗಿ ಬಂದಿದ್ದರು. ಈ ವೇಳೆ ಪ್ರತಾಪ್ ಬಳಿ ಅವರು ಕಿರಿಕ್ ಮಾಡಿಕೊಂಡಿದ್ದರು. ಸ್ನೇಹಿತ್ ಅವರು ಇದನ್ನು ಖಂಡಿಸಿದ್ದರು. ‘ಪ್ರತಾಪ್ ಬಗ್ಗೆ ಸಿಂಪತಿ ಮೂಡುವಂತೆ ಮಾಡಲು ನಾವೇ ಕಾರಣ’ ಎಂದು ಅವರು ಹೇಳಿದ್ದರು. ಈಶಾನಿ ಕೂಡ ಪ್ರತಾಪ್ನ ಟಾರ್ಗೆಟ್ ಮಾಡಿದ್ದರು. ‘ಕಾಗೆ ಕಕ್ಕ ಮಾಡಿಕೊಂಡು ಎಲ್ಲ ಕಡೆಗಳಲ್ಲೂ ಓಡಾಡುತ್ತಿದೆ’ ಎಂದು ಅವರು ಹೇಳಿದ್ದರು. ಈ ಬಾರಿಯ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:00 am, Mon, 29 January 24