ರಿತ್ವಿಕ್ ಕೃಪಾಕರ್ (Rithvik Krupakar) ಅವರು ರಾಮಾಚಾರಿ ಎಂದೇ ಫೇಮಸ್. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ರಾಮಾಚಾರಿ’ (Ramachari) ಧಾರಾವಾಹಿಯಲ್ಲಿ ರಾಮಾಚಾರಿ ಪಾತ್ರವನ್ನು ಮಾಡುತ್ತಿದ್ದಾರೆ. ಅವರ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕಥಾ ನಾಯಕನಿಗೆ (ರಾಮಾಚಾರಿ) ತೊಂದರೆ ಕೊಡುವ ನಾಯಕಿ ಚಾರುಲತಾಗೆ ನಂತರ ಆತನ ಮೇಲೆ ಲವ್ ಆಗುತ್ತದೆ. ಈ ರೀತಿಯಲ್ಲಿ ಧಾರಾವಾಹಿಯ ಕಥೆ ಸಾಗುತ್ತಿದೆ. ರಿತ್ವಿಕ್ ಅವರು ನಿರ್ವಹಿಸುತ್ತಿರುವ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಈಗ ರಿತ್ವಿಕ್ ಅವರು ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2’ಗೆ ಅತಿಥಿಯಾಗಿ ಬಂದಿದ್ದಾರೆ. ಈ ವೇಳೆ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
‘ನನ್ನಮ್ಮ ಸೂಪರ್ ಸ್ಟಾರ್’ನ ಮೊದಲ ಸೀಸನ್ ಹಿಟ್ ಆಯಿತು. ಆ ಬಳಿಕ ಎರಡನೇ ಸೀಸನ್ ಆರಂಭ ಆಗಿದೆ. ಇದಕ್ಕೆ ‘ರಾಮಾಚಾರಿ’ ತಂಡದ ರಿತ್ವಿಕ್ ಹಾಗೂ ಚಾರುಲತಾ ಪಾತ್ರ ಮಾಡುತ್ತಿರುವ ಮೌನ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಗೆ ಆಗಮಿಸುವಾಗ ರಿತ್ವಿಕ್ ಅವರು ದಡೂತಿ ದೇಹ ಮಾಡಿಕೊಂಡು ಬಂದಿದ್ದಾರೆ. ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ತೀರ್ಥಂಕರ್ ಪ್ರಸಾದ್ ಆಗಿ ಕಾಣಿಸಿಕೊಂಡಿರುವ ಆಕಾಶ್ ಕೂಡ ಇದ್ದರು. ಇವರ ವೇಷ ನೋಡಿ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ. ಈ ವೇಳೆ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ರಿತ್ವಿಕ್.
ರಿತ್ವಿಕ್ ಅವರು ನಾಲ್ಕು ವರ್ಷಗಳ ಹಿಂದೆ 125 ಕೆಜಿ ಇದ್ದರು. ಈ ಕುರಿತು ಅವರು ಮಾತನಾಡಿದ್ದಾರೆ. ‘ನಾಲ್ಕು ವರ್ಷಗಳ ಹಿಂದಿನ ಮಾತು. ನನ್ನ ದೇಹದ ತೂಕ 125 ಕೆಜಿ ಇತ್ತು. ಫ್ರೆಂಡ್ಸ್ ಜತೆ ಆಚೆ ಹೋಗಿದ್ದೆ. ಎಲ್ಲರೂ ನನ್ನ ದೇಹದ ಸೈಜ್ ನೋಡಿ ಹೀಯಾಳಿಸಿದರು. ತುಂಬಾನೇ ಬೇಸರ ಆಯ್ತು. ಅವತ್ತು ನಾನು ಸಣ್ಣ ಆಗಬೇಕು ಎಂದು ನಿರ್ಧರಿಸಿದೆ. ಈಗ 85 ಕೆಜಿ ಇದ್ದೀನಿ’ ಎಂದಿದ್ದಾರೆ ರಿತ್ವಿಕ್. ಅವರು ನಿತ್ಯ ಜಿಮ್ ಮಾಡುತ್ತಾರೆ. ಸೇವನೆ ಮಾಡುವ ಆಹಾರದ ಬಗ್ಗೆಯೂ ಅವರು ಹೆಚ್ಚು ಗಮನ ಹರಿಸುತ್ತಾರೆ.
ಇದನ್ನೂ ಓದಿ: ‘ಬಿಗ್ ಬಾಸ್’ ಫಿನಾಲೆಯಲ್ಲಿ ಅಕ್ಕಿನೇನಿ ನಾಗಾರ್ಜುನ ಆಡಿದ ಮಾತಿನಿಂದ ಫ್ಯಾನ್ಸ್ಗೆ ಬೇಸರ
ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಂಡಿದೆ. ರಿತ್ವಿಕ್ ಅವರ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ರಿತ್ವಿಕ್ ಅವರ ಮೇಕೋವರ್ ಅನೇಕರಿಗೆ ಇಷ್ಟವಾಗಿದೆ. ರಿತ್ವಿಕ್ ಅನೇಕರಿಗೆ ಸ್ಫೂರ್ತಿ ಎಂಬ ಕಮೆಂಟ್ಗಳು ಬಂದಿವೆ. ‘ನನ್ನಮ್ಮ ಸೂಪರ್ಸ್ಟಾರ್’ ಸಂಚಿಕೆ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:42 am, Thu, 22 December 22