ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನ ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಯಶ್ ಅವರ ಜನ್ಮದಿನವು ಆಗಮಿಸಲಿದೆ. ಈ ಸಂದರ್ಭದಲ್ಲಿ ಯಶ್ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಾ ಇವೆ. ಈ ಮಧ್ಯೆ ಯಶ್ ಅವರು ಮಿಮಿಕ್ರಿ ಮಾಡಿದ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯಶ್ ಅವರು ಶಂಕರ್ನಾಗ್ ಸ್ಟೈಲ್ನ ಅನುಕರಿಸಿದ್ದರು. ಈ ವಿಡಿಯೋ ಮತ್ತೆ ವೈರಲ್ ಆಗಿ ಗಮನ ಸೆಳೆದಿದೆ.
ಯಶ್ ಅವರು ಶಂಕರ್ನಾಗ್ ಅವರ ಅಭಿಮಾನಿ. ಇದನ್ನು ಅನೇಕ ಬಾರಿ ಅವರು ಹೇಳಿಕೊಂಡಿದ್ದು ಇದೆ. ‘ಗೂಗ್ಲಿ’ ಸಿನಿಮಾದಲ್ಲಿ ಶಂಕರ್ನಾಗ್ ಅವರ ಪೊಲೀಸ್ ಗೆಟಪ್ನಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಅವರ ಗೆಟಪ್ ಸಾಕಷ್ಟು ಸದ್ದು ಮಾಡಿತ್ತು. ಈಗ ಯಶ್ ಅವರು ಶಂಕರ್ನಾಗ್ ಸ್ಟೈಲ್ನ ಅನುಕರಿಸಿದ ವಿಡಿಯೋ ಗಮನ ಸೆಳೆಯುತ್ತಿದೆ.
‘ಕಾಸ್ಗೆ ಟಾಸ್’ ಕಾರ್ಯಕ್ರಮದಲ್ಲಿ ಯಶ್ ಭಾಗಿ ಆಗಿದ್ದರು. ಜೀ ಕನ್ನಡದಲ್ಲಿ ಪ್ರಸಾರ ಆಗಿದ್ದ ಈ ಶೋನಲ್ಲಿ ಸೃಜನ್ ಲೋಕೇಶ್ ನಡೆಸಿಕೊಟ್ಟಿದ್ದರು. ‘ಎ’ ಸಿನಿಮಾದಲ್ಲಿ ಬರೋ ‘ಏನ್ ಮಾಡಿದೀಯಾ? ವರ್ಷಕ್ಕೆ ಎರಡು ಬಾರಿ ಬರ್ತೀಯಾ, ಡೆಕೋರೇಷನ್ ಮಾಡ್ಕೋತಿಯಾ, ಡ್ಯಾನ್ಸ್ ಮಾಡ್ಕೊಂಡು ಹೋಗ್ತೀಯಾ. ನಿನಗಿಂತ ನಾನೇ ಉತ್ತಮ. ನಾಲ್ಕು ಜನ ಕೆಟ್ಟವರನ್ನು ಮೇಲಕ್ಕೆ ಕಳುಹಿಸಿದ್ದೇನೆ. ಐ ಆ್ಯಮ್ ಗಾಡ್ ಗಾಡ್ ಈಸ್ ಗ್ರೇಟ್’ ಎಂದು ಸೃಜನ್ ಲೋಕೇಶ್ ಅವರು ಯಶ್ಗೆ ಡೈಲಾಗ್ನ ಹೇಳಿಕೊಟ್ಟರು.
ಇದೇ ಡೈಲಾಗ್ನ ಯಶ್ ಅವರು ಅನುಕರಿಸಿದ್ದರು. ಅವರು ಪರ್ಫೆಕ್ಟ್ ಆಗಿ ಶಂಕರ್ನಾಗ್ನ ಅನುಕರಿಸಿದ್ದರು. ಈ ವಿಡಿಯೋ ಈಗ ವೈರಲ್ ಮಾಡಲಾಗುತ್ತಿದೆ. ಫ್ಯಾನ್ಸ್ ಇದಕ್ಕೆ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ. ಯಶ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಯಶ್ಗೆ ಇದೆ ನುಗ್ಗಿ ನಡೆಯೋ ಗುಣ; ‘ಕೆಜಿಎಫ್’ ಚಿತ್ರ ಕಾಡ್ಗಿಚ್ಚಾಗಲು ಕಿಡಿ ಹಚ್ಚಿದ್ದೇ ಇವರು
ಶಂಕರ್ ನಾಗ್ ಅವರು ಅನೇಕ ಹೀರೋಗಳಿಗೆ ಸ್ಫೂರ್ತಿ. ಹಲವು ಹೀರೋಗಳಿಗೆ ಅವರು ಮಾರ್ಗದರ್ಶಿ ಆಗಿದ್ದಾರೆ. ಕಡಿಮೆ ಸಮಯದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದ ಅವರು ಅಪಘಾತದಲ್ಲಿ ನಿಧನ ಹೊಂದಿದರು. ಆದಾಗ್ಯೂ ಯಶ್ ಅವರಂಥ ಸೂಪರ್ಸ್ಟಾರ್ಗಳು ಶಂಕರ್ನಾಗ್ನ ಅಭಿಮಾನಿ ಆಗಿದ್ದಾರೆ. ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ರಾಮಾಯಣ’ ಸಿನಿಮಾದಲ್ಲೂ ಅವರು ನಟಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.