ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಯ್ತು ಕಳ್ಳರ ಕಾಟ; ರೂಪೇಶ್ ಶೆಟ್ಟಿ ಬಳಿ ಇದ್ದ ಚಿನ್ನ ಕದ್ದವರು ಯಾರು?

ರೂಪೇಶ್ ಶೆಟ್ಟಿ ಅವರು ಒಟಿಟಿಯಲ್ಲಿ ಗಮನ ಸೆಳೆದಿದ್ದರು. ಅವರು ಅಲ್ಲಿ ಟಾಪ್ ಒನ್ ಆಗಿದ್ದರು. ಈಗ ಅವರು ಟಿವಿ ಸೀಸನ್​ಗೆ ಬಂದು ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಯ್ತು ಕಳ್ಳರ ಕಾಟ; ರೂಪೇಶ್ ಶೆಟ್ಟಿ ಬಳಿ ಇದ್ದ ಚಿನ್ನ ಕದ್ದವರು ಯಾರು?
ರೂಪೇಶ್ ಶೆಟ್ಟಿ
Updated By: ರಾಜೇಶ್ ದುಗ್ಗುಮನೆ

Updated on: Oct 12, 2022 | 10:22 PM

ಬಿಗ್ ಬಾಸ್ (Bigg Boss) ಮನೆಯ ರಂಗು ದಿನ ಕಳೆದಂತೆ ಹೆಚ್ಚುತ್ತಿದೆ. ಈಗಾಗಲೇ ಎರಡು ವಾರ ಪೂರ್ಣಗೊಂಡು ಮೂರನೇ ವಾರಕ್ಕೆ ದೊಡ್ಮನೆ ಆಟ ಕಾಲಿಟ್ಟಿದೆ. ಈ ವಾರ ಹಲವರ ಮೇಲೆ ನಾಮಿನೇಷನ್​ ತೂಗುಗತ್ತಿ ಇದೆ. ಈ ಕಾರಣಕ್ಕೆ ಎಲ್ಲರೂ ಟಾಸ್ಕ್ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಮೂರನೇ ವಾರದ ಕ್ಯಾಪ್ಟನ್ಸಿ ಟಾಸ್ಕ್​ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಬಿಗ್ ಬಾಸ್ ಕಡೆಯಿಂದ ಟಾಸ್ಕ್ ಒಂದು ಸಿಕ್ಕಿದೆ. ಈ ಟಾಸ್ಕ್​ ಪ್ರಕಾರ ಗಣಿ ಮಾದರಿಯ ಸೆಟ್ ಒಳಗೆ ತೆರಳಿ ಚಿನ್ನ ಹುಡುಕಿ ತರಬೇಕು. ಈ ರೀತಿ ತಂದ ಚಿನ್ನವನ್ನು ರೂಪೇಶ್​ ಬಳಿಯಿಂದ ಕಳುವಾಗಿದೆ. ರೂಪೇಶ್ ಶೆಟ್ಟಿ (Roopesh Shetty) ಎಲ್ಲರ ಬಳಿ ಹೋಗಿ ‘ಚಿನ್ನ ಕದ್ದಿದ್ದು ಯಾರು ಹೇಳಿ’ ಎಂದು ಗೋಗರೆದಿದ್ದಾರೆ.

ರೂಪೇಶ್ ಶೆಟ್ಟಿ ಅವರು ಒಟಿಟಿಯಲ್ಲಿ ಗಮನ ಸೆಳೆದಿದ್ದರು. ಅವರು ಅಲ್ಲಿ ಟಾಪ್ ಒನ್ ಆಗಿದ್ದರು. ಈಗ ಅವರು ಟಿವಿ ಸೀಸನ್​ಗೆ ಬಂದು ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಚಿನ್ನದ ಗಣಿ ಟಾಸ್ಕ್​ನಲ್ಲಿ ರೂಪೇಶ್ ಶೆಟ್ಟಿ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಈ ಟಾಸ್ಕ್ ಆರಂಭವಾದ ನಂತರದಲ್ಲಿ ದೊಡ್ಮನೆಯಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ.

ರೂಪೇಶ್ ಶೆಟ್ಟಿ ಬಳಿ ಒಂದೂವರೆ ಕೆ.ಜಿ.ಗೂ ಅಧಿಕ ಚಿನ್ನ ಇತ್ತು. ಇದನ್ನು ಅಮೂಲ್ಯ ಗೌಡ ಹಾಗೂ ನೇಹಾ ಗೌಡ ಕದ್ದು ತಂದಿದ್ದರು. ರೂಪೇಶ್ ಶೆಟ್ಟಿ ಹೋಗಿ ನೋಡಿದಾಗ ಅಲ್ಲಿ ಚಿನ್ನವೇ ಇರಲಿಲ್ಲ. ಇದನ್ನು ಕಂಡು ರೂಪೇಶ್​ಗೆ ಶಾಕ್ ಆಗಿದೆ. ಮೊದಲು ಅರುಣ್ ಸಾಗರ್ ಬಳಿ ಹೋಗಿ ‘ನನ್ನ ಚಿನ್ನವನ್ನು ನೀವು ಕದ್ದಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದಾರೆ ರೂಪೇಶ್. ಈ ರೀತಿ ಅವರು ಎಲ್ಲರಿಗೂ ಪ್ರಶ್ನೆ ಮಾಡುತ್ತಾ ಬಂದಿದ್ದಾರೆ. ಆದರೆ, ನಿಜವಾದ ಕಳ್ಳ ಯಾರು ಎಂಬುದು ಮಾತ್ರ ಗೊತ್ತಾಗಿಲ್ಲ.

ಇದನ್ನೂ ಓದಿ
ಬಿಗ್ ಬಾಸ್ ಮನೆಯಲ್ಲಿ ಸ್ವಿಮ್ ಸ್ಯೂಟ್​ನಲ್ಲಿ ಕಾಣಿಸಿಕೊಂಡ ಅನುಪಮಾ ಗೌಡ
ಕ್ಯೂಟ್ ಅವತಾರದಲ್ಲಿ ಕಾಣಿಸಿಕೊಂಡ ಸಾನ್ಯಾ ಐಯ್ಯರ್; ಅಭಿಮಾನಿಗಳು ಏನ್​ ಅಂದ್ರು?
ಬಿಗ್ ಬಾಸ್​ನಿಂದ ಹೊರ ನಡೆಯಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ; ಈ ವೀಕೆಂಡ್​ನಲ್ಲೇ ಎಲಿಮಿನೇಷನ್​?
ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು

ಇದನ್ನೂ ಓದಿ: ಮಹಿಳಾ ಸ್ಪರ್ಧಿಗಳ ಜೊತೆ ಮಿಂಗಲ್ ಆಗುವ ರೂಪೇಶ್ ಶೆಟ್ಟಿಯ ಕಾಲೆಳೆದ ಸುದೀಪ್

ಮರುದಿನ ನೇಹಾ ಗೌಡ ಹಾಗೂ ಅಮೂಲ್ಯ ಗೌಡ ಬಂದು ಚಿನ್ನ ಕದ್ದಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಚಿನ್ನವನ್ನು ಮರಳಿ ರೂಪೇಶ್​ ಶೆಟ್ಟಿಗೆ ನೀಡಿದ್ದಾರೆ. ಕಳೆದುಕೊಂಡ ಚಿನ್ನ ಸಿಕ್ಕ ಖುಷಿಯಲ್ಲಿ ರೂಪೇಶ್ ನಿಟ್ಟುಸಿರು ಬಿಟ್ಟಿದ್ದಾರೆ.

Published On - 9:55 pm, Wed, 12 October 22