ರೂಪೇಶ್ ಶೆಟ್ಟಿ ಮಾಡಿದ ಸಣ್ಣ ತಪ್ಪಿಗೆ ದೊಡ್ಡ ಶಿಕ್ಷೆ ನೀಡಿದ ಬಿಗ್ ಬಾಸ್​

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ವಸ್ತುಗಳನ್ನು ನೀಡಲಾಗುತ್ತದೆ. ಇದನ್ನು ಡ್ಯಾಮೇಜ್ ಮಾಡಿದರೆ ತಪ್ಪಿತಸ್ಥರಿಗೆ ಬಿಗ್ ಬಾಸ್ ಪನಿಶ್​ಮೆಂಟ್ ನೀಡುತ್ತಾರೆ.

ರೂಪೇಶ್ ಶೆಟ್ಟಿ ಮಾಡಿದ ಸಣ್ಣ ತಪ್ಪಿಗೆ ದೊಡ್ಡ ಶಿಕ್ಷೆ ನೀಡಿದ ಬಿಗ್ ಬಾಸ್​
ರೂಪೇಶ್
Updated By: ರಾಜೇಶ್ ದುಗ್ಗುಮನೆ

Updated on: Nov 10, 2022 | 9:45 PM

ಬಿಗ್ ಬಾಸ್ (Bigg Boss) ಮನೆಯಲ್ಲಿ ಎಲ್ಲರೂ ನಿಯಮ ಪಾಲನೆ ಮಾಡಬೇಕು. ಒಂದೊಮ್ಮೆ ನಿಯಮ ಮುರಿದರೆ ಇಂದಲ್ಲ ನಾಳೆ ಶಿಕ್ಷೆ ಗ್ಯಾರಂಟಿ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ನಿಯಮ. ಈ ಸೀಸನ್​ನಲ್ಲೂ ಅದು ಮುಂದುವರಿದಿದೆ. ರೂಪೇಶ್ ಶೆಟ್ಟಿ (Roopesh Shetty) ಈಗ ಬಿಗ್ ಬಾಸ್ ಮನೆಯಲ್ಲಿ ಸಣ್ಣ ತಪ್ಪು ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ದೊಡ್ಡ ಶಿಕ್ಷೆ ನೀಡಿದ್ದಾರೆ. ಇದರಿಂದ ರೂಪೇಶ್ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ವಸ್ತುಗಳನ್ನು ನೀಡಲಾಗುತ್ತದೆ. ಇದನ್ನು ಡ್ಯಾಮೇಜ್ ಮಾಡಿದರೆ ತಪ್ಪಿತಸ್ಥರಿಗೆ ಬಿಗ್ ಬಾಸ್ ಪನಿಶ್​ಮೆಂಟ್ ನೀಡುತ್ತಾರೆ. ಈಗ ರೂಪೇಶ್ ಶೆಟ್ಟಿ ಅವರು ಮನೆಯ ಗಾಜಿನ ಲೋಟವನ್ನು ಒಡೆದು ಹಾಕಿದ್ದಾರೆ. ಇದನ್ನು ಬಿಗ್ ಬಾಸ್ ಗಮನಿಸಿದ್ದಾರೆ. ಇದಕ್ಕೆ ಪನಿಶ್​ಮೆಂಟ್ ನೀಡಲಾಗಿದೆ.

ರೂಪೇಶ್ ಶೆಟ್ಟಿ ನಿತ್ಯ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುತ್ತಾರೆ. ಈ ಕಾರಣಕ್ಕೆ ಕಾಫಿ ಕಪ್​​ನ ಗಾತ್ರದ ಲೋಟ ಕೊಟ್ಟು ಅದರಲ್ಲಿ ಮಾತ್ರ ನೀರು ಕುಡಿಯುವಂತೆ ಆದೇಶ ಹೊರಡಿಸಿದ್ದಾರೆ ಬಿಗ್​ ಬಾಸ್. ಇನದನ್ನು ಕೇಳಿ ರೂಪೇಶ್​ ಶೆಟ್ಟಿಗೆ ಶಾಕ್ ಆಗಿದೆ. ಅನಿವಾರ್ಯವಾಗಿ ಅವರು ಅದರಲ್ಲೇ ನೀರು ಕುಡಿಯೋಕೆ ಆರಂಭಿಸಿದ್ದಾರೆ.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಇದನ್ನೂ ಓದಿ: ‘ಅವಳು ಬದಲಾಗಬಹುದು’; ಸಾನ್ಯಾ ಐಯ್ಯರ್ ಬಗ್ಗೆ ರೂಪೇಶ್ ಶೆಟ್ಟಿಗೆ ಕಾಡಿತು ಒಂದು ಆತಂಕ

ಈ ಪನಿಶ್​ಮೆಂಟ್​ನಿಂದ ಮನೆ ಮಂದಿಗೆ ಹಾಗೂ ವೀಕ್ಷಕರಿಗೆ ಸಖತ್ ಮಜಾ ಸಿಕ್ಕಿದೆ. ಅಮೂಲ್ಯ ಗೌಡ ಅವರು ರೂಪೇಶ್ ಅವರ ಗಾಜಿನ ಲೋಟವನ್ನು ಕಿತ್ತುಕೊಂಡು ಓಡಿದ್ದಾರೆ. ಇದರಿಂದ ರೂಪೇಶ್ ಪೇಚಿಗೆ ಸಿಲುಕಿದ್ದಾರೆ. ಈ ಪನಿಶ್​​ಮೆಂಟ್​ನಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಂತೂ ನಿಜ. ಈ ಮೊದಲು ರೂಪೇಶ್ ರಾಜಣ್ಣ ಕೂಡ ಗ್ಲಾಸ್ ಒಡೆದಿದ್ದರು. ಆದರೆ, ಅವರಿಗೆ ಬಿಗ್ ಬಾಸ್ ಪನಿಶ್​ಮೆಂಟ್ ನೀಡಿಲ್ಲ. ಈ ಬಗ್ಗೆ ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.

ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ತುಂಬಾನೇ ಕ್ಲೋಸ್ ಆಗಿದ್ದರು. ಒಟಿಟಿಯಿಂದ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ ಕಳೆದ ವಾರದ ಎಲಿಮಿನೇಷನ್​ನಲ್ಲಿ ಅವರು ಮನೆಯಿಂದ ಹೊರ ಹೋಗಿದ್ದಾರೆ. ಈ ವಾರದ ಆರಂಭದ ದಿನಗಳಲ್ಲಿ ರೂಪೇಶ್ ಶೆಟ್ಟಿ ಅವರು ಡಲ್ ಆಗಿದ್ದರು. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಟಾಸ್ಕ್ ಆಡುತ್ತಾ ದಿನ ಕಳೆಯುತ್ತಿದ್ದಾರೆ.