ಕಿರುತೆರೆಗೆ ಪ್ರವೇಶಿಸಿದ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ

Sapthami Gowda: ಸಪ್ತಮಿ ಗೌಡ ಹಿರಿತೆರೆಯ ಬಲು ಬೇಡಿಕೆಯ ನಟಿ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಕಿರುತರೆಗೆ ಎಂಟ್ರಿ ಕೊಟ್ಟಿದ್ದಾರೆ ಸಪ್ತಮಿ ಗೌಡ.

ಕಿರುತೆರೆಗೆ ಪ್ರವೇಶಿಸಿದ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ

Updated on: Feb 04, 2024 | 8:02 PM

‘ಕಾಂತಾರ’ (Kantara) ಸಿನಿಮಾ ಮೂಲಕ ಸಪ್ತಮಿ ಗೌಡ (Saptami Gowda) ಅವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಮಾಡಿದ್ದ ಪಾತ್ರ ವೈರಲ್ ಆಗಿತ್ತಾದರೂ ದೊಡ್ಡ ಆಫರ್​ಗಳೇನು ಅದರಿಂದ ದೊರಕಿರಲಿಲ್ಲ. ಆದರೆ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ ಸಪ್ತಮಿ ಗೌಡ ಅವರಿಗೆ ಅವಕಾಶಗಳ ಸುರಿಮಳೆಯೇ ಆಗುತ್ತಿದೆ. ಈಗಾಗಲೇ ಬಾಲಿವುಡ್​ನ ಒಂದು ಸಿನಿಮಾದಲ್ಲಿ ನಟಿಸಿರುವ ಸಪ್ತಮಿ ಗೌಡ, ಇದೀಗ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ.

ಹಿರಿತೆರೆಯಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟರು ಕಿರುತೆರೆಗೆ ಕಾಲಿಡುವುದಿಲ್ಲ. ಬಂದರೂ ಸಹ ಅತಿಥಿಯಾಗಿ ಮಾತ್ರ. ಇದೀಗ ಸಪ್ತಮಿ ಗೌಡ ಸಹ ಅತಿಥಿಯಾಗಿಯೇ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬಿಗ್​ಬಾಸ್​ಗೆ ಸಪ್ತಮಿ ಗೌಡ ಬಂದಿದ್ದರು. ಮುಟ್ಟಿನ ಕಪ್​ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಪ್ತಮಿ ಗೌಡ, ಅದೇ ಕಾರ್ಯಕ್ಕಾಗಿ ಬಿಗ್​ಬಾಸ್ ಮನೆಗೆ ಬಂದು ಮುಟ್ಟಿನ ಕಪ್​ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು.

ಇದನ್ನೂ ಓದಿ:ಹಸಿರು ಸೀರೆಯುಟ್ಟು ಬಂದ ಸಪ್ತಮಿ ಗೌಡ, ಮುಡಿಯಲ್ಲಿ ಮಲ್ಲಿಗೆ ಮಿಸ್ಸಿಂಗ್

ಇದೀಗ ಮತ್ತೊಮ್ಮೆ ಕಿರುತೆರೆಗೆ ಸಪ್ತಮಿ ಗೌಡ ಎಂಟ್ರಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯೇ ‘ಜೀ ಕನ್ನಡ’ಕ್ಕಾಗಿ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಪ್ತಮಿ ಗೌಡ, ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಗಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯ ಪ್ರೊಮೋಟರ್ ರೀತಿ ಸಪ್ತಮಿ ಗೌಡ, ಧಾರಾವಾಹಿ ಬಗ್ಗೆ ಕಾಮೆಂಟ್ರಿ ಮಾಡಿದ್ದಾರೆ. ಧಾರಾವಾಹಿಗಳಲ್ಲಿ ಇತ್ತೀಚೆಗೆ ಸಿನಿಮಾ ನಟರನ್ನು ಅತಿಥಿಗಳನ್ನಾಗಿ ಕರೆತರುವ ಅಭ್ಯಾಸ ಹೆಚ್ಚಾಗಿದೆ. ನಟ ರವಿಚಂದ್ರನ್ ಸೇರಿದಂತೆ ಹಲವು ನಟರನ್ನು ಧಾರಾವಾಹಿಗಳಿಗಾಗಿ ಕರೆತರಲಾಗಿದೆ. ಇದೀಗ ಸಪ್ತಮಿ ಗೌಡ ಅವರನ್ನು ಶ್ರೀರಸ್ತು ಶುಭಮಸ್ತು ಧಾರಾವಾಗಿಗಾಗಿ ಕರೆ ತರಲಾಗಿದೆ.

ಸಪ್ತಮಿ ಗೌಡ ನಟಿಸಿರುವ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಇದೀಗ ದೊಡ್ಮನೆಯ ಯುವರಾಜ್ ಕುಮಾರ್ ನಟನೆಯ ‘ಯುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್ ಅಂಬರಿಶ್ ನಟನೆಯ ಹೊಸ ಸಿನಿಮಾದಲ್ಲಿಯೂ ಸಪ್ತಮಿ ನಾಯಕಿಯಾಗಿ ನಟಿಸಿದ್ದಾರೆ. ‘ಕಾಂತಾರ 2’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಆ ಸಿನಿಮಾದಲ್ಲಿ ಸಪ್ತಮಿ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us