ಸೀತಾಳ ಮನೆಗೆ ರಾಮ್ ಹೋಗಿರುವ ವಿಚಾರ ಭಾರ್ಗವಿಗೆ ತಿಳಿಯುತ್ತಾ? ಅವಳ ಮುಂದಿನ ನಡೆಯೇನು?

ಸೀತಾಳನ್ನು ಪಡೆದುಕೊಳ್ಳಲು ರುದ್ರ ಪ್ರತಾಪ ಹಲವಾರು ರೀತಿಯಲ್ಲಿ ಮಸಲತ್ತು ಮಾಡುತ್ತಿರುತ್ತಾನೆ. ಮನೆ ಮಾರಾಟ ಬೇಗ ಆಗಬೇಕು ಎಂದು ಸೀತಾಳನ್ನು ಹೆದರಿಸಿ ತಾನು ಅವಳ ಹತ್ತಿರವಾಗಲು ಯೋಚಿಸುತ್ತಾನೆ. ಆದರೆ, ಇದಕ್ಕೆ ಸಿಹಿ ಅವಕಾಶ ನೀಡುವುದಿಲ್ಲ.

ಸೀತಾಳ ಮನೆಗೆ ರಾಮ್ ಹೋಗಿರುವ ವಿಚಾರ ಭಾರ್ಗವಿಗೆ ತಿಳಿಯುತ್ತಾ? ಅವಳ ಮುಂದಿನ ನಡೆಯೇನು?
ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ
Updated By: ರಾಜೇಶ್ ದುಗ್ಗುಮನೆ

Updated on: Oct 04, 2023 | 10:59 AM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 59: ಸೀತಾಳನ್ನು ನೋಡಿಕೊಳ್ಳಲು ಹಾಗೂ ಸಿಹಿಗೆ ಸಹಾಯ ಮಾಡಲು ಬಂದ ರಾಮ್ ಅವರ ಮನೆಯಲ್ಲಿ ಸಿಹಿಗಾಗಿ ಅವಳಂತೆಯೇ ಮಗುವಾಗುತ್ತಾನೆ. ಇಬ್ಬರೂ ಮೇಕಪ್ ಮಾಡಿಕೊಂಡು ಸೀತಾಳನ್ನು ನಗಿಸುತ್ತಾರೆ. ಮಧ್ಯಮ ವರ್ಗದ ಕಷ್ಟ ನೋಡಿರದ ರಾಮನಿಗೆ ಸೀತಾ ಮನೆಯಲ್ಲಿ ಎಲ್ಲವೂ ಹೊಸತೆನಿಸುತ್ತದೆ. ಅದನ್ನು ನೋಡಿ, ಅಮ್ಮ- ಮಗಳು ಇಬ್ಬರೂ ರಾಮನ ಮೇಲೆ ಸಂಶಯ ಬಂದು ಹಲವಾರು ಪ್ರಶ್ನೆಗಳನ್ನು ಒಂದಾದ ಮೇಲೆ ಒಂದರಂತೆ ಕೇಳುತ್ತಾರೆ. ಅವರು ಕೇಳಿದ್ದಕ್ಕೆಲ್ಲಾ ಏನೋ ಉತ್ತರ ನೀಡಿ, ಅವರಿಬ್ಬರ ಪ್ರಶ್ನೆಯ ಸುರಿಮಳೆಯಿಂದ ತಪ್ಪಿಸಿಕೊಳ್ಳುತ್ತಾನೆ.

ಸೀತಾಳನ್ನು ಪಡೆದುಕೊಳ್ಳಲು ರುದ್ರ ಪ್ರತಾಪ ಹಲವಾರು ರೀತಿಯಲ್ಲಿ ಮಸಲತ್ತು ಮಾಡುತ್ತಿರುತ್ತಾನೆ. ಮನೆ ಮಾರಾಟ ಬೇಗ ಆಗಬೇಕು ಎಂದು ಸೀತಾಳನ್ನು ಹೆದರಿಸಿ ತಾನು ಅವಳ ಹತ್ತಿರವಾಗಲು ಯೋಚಿಸುತ್ತಾನೆ. ಅದಕ್ಕಾಗಿಯೇ ಸೀತಾಳಿಗೂ ಕರೆ ಮಾಡುತ್ತಾನೆ. ಅದನ್ನು ನೋಡಿದ ಸಿಹಿ, ಸೀತಮ್ಮನಿಗೆ ಡಿಸ್ಟರ್ಬ್ ಆಗುತ್ತದೆ ಎಂದು ಫೋನ್​ನನ್ನು ಸೈಲೆಂಟ್ ಮಾಡುತ್ತಾಳೆ. ಬಳಿಕ ರಾಮನ ಜೊತೆ ಹರಟೆ ಹೊಡೆದು, ಸಂಜೆ ಆಗುವುದನ್ನು ನೋಡಿ, ಅಜ್ಜಿ ಮಾಡುತ್ತಿದ್ದ ಹಾಗೆಯೇ ದೀಪ ಹಚ್ಚಲು ರಾಮನನ್ನು ಕರೆದುಕೊಂಡು ಹೋಗುತ್ತಾಳೆ. ಇಬ್ಬರೂ ದೇವರ ಮನೆಯಲ್ಲಿ ಕುಳಿತು ಭಕ್ತಿಯಿಂದ ದೀಪ ಹಚ್ಚುತ್ತಾರೆ.

ರಾಮ್ ಮನೆಗೆ ಬರದಿದ್ದನ್ನು ನೋಡಿ ಭಾರ್ಗವಿ, ಅದನ್ನೇ ದೊಡ್ಡ ಸುದ್ದಿ ಮಾಡಿ ಮಾವನಿಗೆ ಚಿಂತೆ ಆಗುವಂತೆ ಮಾಡುತ್ತಾಳೆ. ತಾನೂ ಕೂಡ ಅವನ ಬಗ್ಗೆ ಕಾಳಜಿ ತೋರಿಸುತ್ತಿದ್ದೇನೆ ಎಂಬಂತೆ ಎಲ್ಲರ ಮುಂದೆ ನಾಟಕವಾಡುತ್ತಾಳೆ. ಇದಾವುದೂ ಗೊತ್ತಿರದ ರಾಮ್, ಸಿಹಿಯ ಜೊತೆ ಒಂದೊಳ್ಳೆ ದಿನ ಕಳೆದಿದ್ದಕ್ಕಾಗಿ ಅವಳಿಗೆ ಧನ್ಯವಾದ ಹೇಳುತ್ತಾನೆ. ಅದಕ್ಕೆ ಅವಳು “ದೇವರು ನಾವು ಕೇಳಿಕೊಂಡಿದ್ದ ಎಲ್ಲವನ್ನೂ ಕೊಡುವುದಿಲ್ಲ. ಬದಲಾಗಿ ನಮಗೆ ಯಾವುದೋ ಒಳ್ಳೇಯದೋ ಅದನ್ನೇ ಕೊಡುತ್ತಾನೆ. ದೇವರು ನಾವು ಯಾವುದನ್ನು ಕಳೆದುಕೊಂಡಿರುತ್ತೇವೋ ಅದಕ್ಕಿಂತ ಸ್ಪೆಷಲ್ ಆಗಿರುವುದನ್ನು ಕೊಡುತ್ತಾನೆ‘ ಎಂದು ಅಜ್ಜಿ ಹೇಳಿದ್ದಾಳೆಂದು ರಾಮನಿಗೆ ಹೇಳುತ್ತಾಳೆ.

ಇದನ್ನೂ ಓದಿ: ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?

‘ನಾನು ಕೂಡ ಪಿಕ್ನಿಕ್ ಹೋಗಬೇಕು ಅಂದುಕೊಂಡಿದ್ದೆ ಆದರೆ ಆಗಿಲ್ಲ. ಅದಕ್ಕಿಂತಲೂ ಸಂತೋಷ ನಿನ್ನಿಂದ ಸಿಕ್ಕಿದೆ ಎನ್ನುತ್ತಾಳೆ. ಆ ಮಾತನ್ನು ಕೇಳಿ ರಾಮ್ ಮಂತ್ರಮುಗ್ದನಾಗಿ ನಿಂತು ಬಿಡುತ್ತಾನೆ. ಮುಂದೇನಾಗಬಹುದು? ರಾಮ್ ಎಲ್ಲಿಗೆ ಹೋಗಿದ್ದ ಎಂಬ ಸತ್ಯ ಮನೆಯವರಿಗೆ ತಿಳಿಯುತ್ತಾ? ಭಾರ್ಗವಿಯ ಮುಂದಿನ ನಡೆಯೇನು? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ