Seetha Raama: ಭಾರ್ಗವಿ ಕಟ್ಟಿ ಬೆಳೆಸಿದ್ದ ಮೋಸದ ಸಾಮ್ರಾಜ್ಯವನ್ನು ಬೀಳಿಸುತ್ತಾನಾ ರಾಮ್?

| Updated By: ರಾಜೇಶ್ ದುಗ್ಗುಮನೆ

Updated on: Oct 07, 2023 | 7:55 AM

Seetha Raama: ರುದ್ರ ಪ್ರತಾಪ ಹೇಳಿದಂತೆ, ಬ್ಯಾಂಕ್​ನವರು ಎಂದು ಹೇಳಿಕೊಂಡು ಬಂದ ರೌಡಿಗಳು ಸೀತಾಳನ್ನು ಹುಡುಕಿ, ಆಫೀಸ್​ನಲ್ಲಿ ಎಲ್ಲರ ಮುಂದೆ ಕೂಗಾಡಿ, ಅವಳನ್ನು ಹೆದರಿಸುವ ಪ್ರಯತ್ನ ಮಾಡುತ್ತಾರೆ. ಮುಂದೇನಾಗಬಹುದು? ರಾಮ್, ಸೀತಾಳಿಗೆ ಅವಮಾನವಾಗುವುದನ್ನು ತಡೆಯುತ್ತಾನಾ? ರಾಮ್ ಕೈಯಲ್ಲಿ ಸಿಕ್ಕಿ ಬೀಳುತ್ತಾಳಾ ಭಾರ್ಗವಿ? ಕಾದು ನೋಡೋಣ. 

Seetha Raama: ಭಾರ್ಗವಿ ಕಟ್ಟಿ ಬೆಳೆಸಿದ್ದ ಮೋಸದ ಸಾಮ್ರಾಜ್ಯವನ್ನು ಬೀಳಿಸುತ್ತಾನಾ ರಾಮ್?
ವೈಷ್ಣವಿ
Follow us on

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 62: ಲಾಯರ್ ರುದ್ರ ಪ್ರತಾಪ ಸೀತಾಳಿಗೆ ಕರೆ ಮಾಡಿದ್ದರೂ ಅವನ ಜೊತೆ ಮಾತನಾಡಲಿಲ್ಲ ಎಂಬ ಕಾರಣಕ್ಕಾಗಿ ಅವಳನ್ನು ಹುಡುಕಿಕೊಂಡು ಬಂದ ಅವಳ ಅತ್ತಿಗೆ ಸೀತಾಳಿಗೆ ಬುದ್ಧಿವಾದ ಹೇಳುತ್ತಾಳೆ. ಲಾಯರ್ ರುದ್ರನಂತವರು ಈ ಕಾಲದಲ್ಲಿ ಸಿಗುವುದು ಕಷ್ಟ, ನೀನು ಅವರು ಫೋನ್ ಮಾಡಿದರೂ ನೋಡದೆ ಅವರಿಗೆ ಅವಮಾನ ಮಾಡಬೇಡ ಎನ್ನುತ್ತಾಳೆ. ಸೀತಾ ತಾನು ನೋಡಿಲ್ಲ, ತನಗೆ ಹುಷಾರಿರಲಿಲ್ಲ ಎನ್ನುವುದನ್ನು ಕೇಳದೆಯೇ ಹೊರಡುತ್ತಾಳೆ. ಇನ್ನು ಸೀತಾಳ ಅಣ್ಣ, ಮನೆ ಮಾರಾಟ ಮಾಡುವ ವಿಷಯವನ್ನು ಲಾಯರ್ ಬಳಿ ಕೇಳುತ್ತಾನೆ. ಅದಕ್ಕೆ ಮಾರಾಟ ಮಾಡಿದ ದುಡ್ಡನ್ನು ಸ್ವಲ್ಪ ಕೊಡುತ್ತೇನೆ ಎನ್ನುತ್ತಾನೆ ರುದ್ರ ಪ್ರತಾಪ. ಬಳಿಕ ಸೀತಾಳ ಅಣ್ಣ ಅವನ ಬಳಿ, ಅವಳು ನಿಮ್ಮನ್ನು ಮದುವೆಯಾಗಲು ಒಪ್ಪದಿದ್ದರೆ? ಎಂದು ಕೇಳುತ್ತಾನೆ ಅದಕ್ಕೆ ಕೋಪಿಸಿಗೊಂಡ ರುದ್ರ ಪ್ರತಾಪ, ನಾನು ನಿಮಗೆ ಕೊಟ್ಟ ಕೆಲಸವನ್ನು ಸರಿಯಾಗಿ ಮಾಡಿ ಎಂದು ಅವರ ಮೇಲೆ ಗದರುತ್ತಾನೆ.

ಇನ್ನು ಸೀತಾ, ರುದ್ರ ಪ್ರತಾಪನಿಗೆ ಕರೆ ಮಾಡುತ್ತಾಳೆ. ಅದೇ ಸರಿಯಾದ ಸಮಯ ಎಂದು ತಿಳಿದು, ಬ್ಯಾಂಕ್ ನವರು ಬಂದು ನಿಮ್ಮನ್ನು ಹೆದರಿಸಿದರೆ ನೀವು ನನ್ನ ಹೆಸರು ಹೇಳಿ ಅಂತೆಲ್ಲಾ ಅವಳ ಮುಂದೆ ನಾಟಕವಾಡುತ್ತಾನೆ. ತಾನೇ ಎಲ್ಲ ಸರಿ ಮಾಡಿಸುತ್ತೇನೆ ಎಂದೂ ಹೇಳುತ್ತಾನೆ. ಬಳಿಕ ರೌಡಿಗಳನ್ನು ಕರೆಸಿ, ಬ್ಯಾಂಕ್​ನವರಂತೆ ಸೀತಾ ಆಫೀಸ್​ಗೆ ಹೋಗಿ ಅವಳನ್ನು ಹೆದರಿಸುವಂತೆ ಹೇಳಿ, ತಾನೇ ಪ್ಲಾನ್ ಮಾಡುತ್ತಾನೆ.

ಇದನ್ನೂ ಓದಿ: ದಕ್ಷಿಣದಲ್ಲೂ ಬಾಲಿವುಡ್​ನಲ್ಲೂ ಬ್ಯುಸಿ ಆದ ‘ಸೀತಾ ರಾಮಂ’ ಸುಂದರಿ

ಇನ್ನು ಆಫೀಸ್​ನಲ್ಲಿ ರಾಮನ ಮೇಲೆ ಸಿಟ್ಟಾಗಿರುವ ಮ್ಯಾನೇಜರ್ ಚರಣ್, ಅವನು ಯಾರು ಎಂದು ಗೊತ್ತಿಲ್ಲದೇ, ಅವನಿಗೆ ಬುದ್ಧಿ ಕಲಿಸಲು ಭಾರ್ಗವಿ ಹೇಳಿರುವ ಫೈಲ್ ಅನ್ನು ರಾಮ್ ಬಳಿ ಕೊಟ್ಟು ತಾನು ಹೇಳಿದ ವಿಳಾಸಕ್ಕೆ ತಲುಪಿಸು ಎಂದು ಅವನನ್ನು ಕಳುಹಿಸುತ್ತಾನೆ. ರಾಮ್ ಮತ್ತು ಅಶೋಕ್ ಇದರ ಹಿಂದೆ ಯಾರಿರಬಹುದು ಎಂಬ ಕೂತೂಹಲದಲ್ಲಿದ್ದರೆ ಮ್ಯಾನೇಜರ್ ಚರಣ್ ಇದರಲ್ಲಿ ನಾನೆಷ್ಟು ದುಡ್ಡು ಹೊಡೆಯಬಹುದು ಎಂದು ಲೆಕ್ಕಾಚಾರ ಹಾಕುತ್ತಾನೆ. ಇನ್ನು ರುದ್ರ ಪ್ರತಾಪ ಹೇಳಿದಂತೆ, ಬ್ಯಾಂಕ್ ನವರು ಎಂದು ಹೇಳಿಕೊಂಡು ಬಂದ ರೌಡಿಗಳು ಸೀತಾಳನ್ನು ಹುಡುಕಿ, ಆಫೀಸ್ ನಲ್ಲಿ ಎಲ್ಲರ ಮುಂದೆ ಕೂಗಾಡಿ, ಅವಳನ್ನು ಹೆದರಿಸುವ ಪ್ರಯತ್ನ ಮಾಡುತ್ತಾರೆ. ಮುಂದೇನಾಗಬಹುದು? ರಾಮ್, ಸೀತಾಳಿಗೆ ಅವಮಾನವಾಗುವುದನ್ನು ತಡೆಯುತ್ತಾನಾ ? ರಾಮ್ ಕೈಯಲ್ಲಿ ಸಿಕ್ಕಿ ಬೀಳುತ್ತಾಳಾ ಭಾರ್ಗವಿ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:54 am, Sat, 7 October 23