
ಗಗನ್ ಚಿನ್ನಪ್ಪ, ವೈಷ್ಣವಿ ಗೌಡ (Vaishnavi Gowda), ಪೂಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ನಟಿಸಿರುವ ‘ಸೀತಾ ರಾಮ’ಧಾರಾವಾಹಿಗೆ ಇತ್ತೀಚೆಗೆ ಕೊನೆಯ ದಿನದ ಶೂಟ್ ಪೂರ್ಣಗೊಂಡಿದೆ. ಈ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಧಾರಾವಾಹಿ ಕೊನೆ ಆಗಲಿದೆ. ಸೀರಿಯಲ್ ಪ್ರಿಯರಿಗೆ ಈ ವಿಚಾರ ಬೇಸರ ಉಂಟು ಮಾಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹಾಗಾದರೆ ಈ ಧಾರಾವಾಹಿ ಕೊನೆಗೊಳ್ಳಲು ಕಾರಣಗಳು ಏನು? ಇಲ್ಲಿದೆ ವಿವರ.
ಮರಾಠಿ ಧಾರಾವಾಹಿ ‘ಮುಜಿ ತುಜಿ ರೇಶಿಮಗಾಡ’ ಧಾರಾವಾಹಿಯ ರಿಮೇಕ್ ಆಗಿ ‘ಸೀತಾ ರಾಮ’ ಧಾರಾವಾಹಿ ಮೂಡಿ ಬಂತು. 2023ರ ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆರಂಭಿಸಿತು. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿಗೆ ಇನ್ನು ಕೆಲವೇ ದಿನಗಳಲ್ಲಿ ಕೊನೆಯ ಎಪಿಸೋಡ್ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಈ ವರೆಗೆ 465 ಎಪಿಸೋಡ್ಗಳನ್ನು ಪ್ರಸಾರ ಕಂಡಿದೆ. ಧಾರಾವಾಹಿಯ ಕಲಾವಿದರಾದ ಅಶೋಕ ಮೊದಲಾದವರು ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ಈ ಧಾರಾವಾಹಿ ಕೊನೆಗೊಳ್ಳಲು ಕಾರಣವಾದ ಅಂಶಗಳ ಬಗ್ಗೆ ಕೆಳಗಿದೆ ವಿವರ.
ಇದನ್ನೂ ಓದಿ: ‘ಸೀತಾ ರಾಮ’: ಸಿಹಿ ಆತ್ಮವೇ ಹೆದರಿ ಮನೆಬಿಟ್ಟು ಹೋದಾಗ.. ವೀಕ್ಷಕರಲ್ಲಿ ಮೂಡಿದೆ ಅಸಮಾಧಾನ
‘ಸೀತಾ ರಾಮ’ ಧಾರಾವಾಹಿ ಈ ಮೊದಲು ಪ್ರೈಮ್ ಟೈಮ್ನಲ್ಲಿ ಪ್ರಸಾರ ಕಾಣುತ್ತಿತ್ತು. ಇತ್ತೀಚೆಗೆ ‘ನಾನಿನ್ನ ಬಿಡಲಾರೆ’ ಧಾರಾವಾಹಿ ಪ್ರಸಾರ ಆರಂಭ ಆಗುತ್ತಿದ್ದಂತೆ ‘ಸೀತಾ ರಾಮ’ ಸಮಯವನ್ನು ಸಂಜೆ 5.30ಕ್ಕೆ ಬದಲಾವಣೆ ಮಾಡಲಾಯಿತು. ಇದರಿಂದ ಜನಪ್ರಿಯತೆ ಕಡಿಮೆ ಆಯಿತು.
‘ಸೀತಾ ರಾಮ’ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದ್ದಾಗ ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಇದ್ದರು. ಯಾವಾಗ ಧಾರಾವಾಹಿ ಸಂಜೆ ಪ್ರಸಾರ ಆರಂಭಿಸಿತೋ ಆಗ ದೊಡ್ಡ ಮಟ್ಟದಲ್ಲಿ ವೀಕ್ಷಕರನ್ನು ಈ ಧಾರಾವಾಹಿ ಕಳೆದುಕೊಂಡಿತು. ಇದರಿಂದ ಟಿಆರ್ಪಿ ಕುಸಿಯಿತು.
ಮೂಲ ಧಾರಾವಾಹಿಯ ಕಥೆಗೂ ಈ ಧಾರಾವಾಹಿಯ ಕಥೆಯಲ್ಲೂ ವ್ಯತ್ಯಾಸ ಮಾಡಿಕೊಳ್ಳಲಾಗಿದೆ ಎನ್ನುವ ಮಾತಿದೆ. ಇತ್ತೀಚೆಗೆ ಧಾರಾವಾಹಿಯ ಕಥೆ ದಿಕ್ಕು ತಪ್ಪಿದೆ ಎನ್ನುವ ಬಗ್ಗೆ ಚರ್ಚೆ ಆಗಿತ್ತು.
ಕಥಾ ನಾಯಕಿ ವೈಷ್ಣವಿ ಗೌಡ ಎರಡು ವರ್ಷಗಳ ಕಾಲ ಅವರು ಸಂಪೂರ್ಣವಾಗಿ ಈ ಧಾರಾವಾಹಿಗೆ ಮುಡಿಪಿಟ್ಟಿದ್ದಾರೆ. ಅವರು ಈಗ ವಿವಾಹ ಆಗುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಮದುವೆಗೆ ಒಂದು ದೊಡ್ಡ ವೆಕೇಶನ್ ಬೇಕೆ ಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.