‘ನಾ ನಿನ್ನ ಬಿಡಲಾರೆ’: ಮದುವೆ ಆಗಿ ಎರಡನೇ ದಿನಕ್ಕೆ ದುರ್ಗಾಗೆ ಡಿವೋರ್ಸ್ ನೀಡಲು ಮುಂದಾದ ಶರತ್

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ದುರ್ಗಾ ಮತ್ತು ಶರತ್‌ರ ವಿವಾಹದ ನಂತರ ಅನಿರೀಕ್ಷಿತ ತಿರುವು ಸಂಭವಿಸಿದೆ. ಹಿತಾಳ ಅಸಮಾಧಾನದಿಂದಾಗಿ ಶರತ್ ವಿಚ್ಛೇದನಕ್ಕೆ ನಿರ್ಧರಿಸಿದ್ದಾನೆ. ಮಾಯಾಳ ಭವಿಷ್ಯವೂ ಅನಿಶ್ಚಿತವಾಗಿದೆ. ಈ ಘಟನೆಗಳು ಧಾರಾವಾಹಿಯ ಕಥಾವಸ್ತುವಿಗೆ ಹೊಸ ತಿರುವು ನೀಡಲಿವೆ ಮತ್ತು ವೀಕ್ಷಕರ ಕುತೂಹಲವನ್ನು ಹೆಚ್ಚಿಸಿವೆ.

‘ನಾ ನಿನ್ನ ಬಿಡಲಾರೆ’: ಮದುವೆ ಆಗಿ ಎರಡನೇ ದಿನಕ್ಕೆ ದುರ್ಗಾಗೆ ಡಿವೋರ್ಸ್ ನೀಡಲು ಮುಂದಾದ ಶರತ್
ನಾ ನಿನ್ನ ಬಿಡಲಾರೆ
Updated By: ರಾಜೇಶ್ ದುಗ್ಗುಮನೆ

Updated on: Sep 12, 2025 | 10:19 AM

‘ನಾ ನಿನ್ನ ಬಿಡಲಾರೆ’ (Naa Ninna Bidalaare) ಧಾರಾವಾಹಿ ಈಗ ಪ್ರಮುಖ ಘಟ್ಟಕ್ಕೆ ತಲುಪಿದೆ. ಈ ಧಾರಾವಾಹಿಯಲ್ಲಿ ವಿವಾಹ ನಡೆದಿದೆ. ದುರ್ಗಾ ಹಾಗೂ ಶರತ್ ಮದುವೆ ಆಗಿದ್ದಾರೆ. ಆದರೆ, ಮದುವೆ ಆದ ಕೆಲವೇ ದಿನಕ್ಕೆ ವಿಚ್ಛೇದನ ನೀಡಲು ಶರತ್ ನಿರ್ಧರಿಸಿದ್ದಾನೆ. ಮಗಳು ಹಿತಾಗೆ ಈ ಮದುವೆ ಇಷ್ಟ ಇಲ್ಲ ಎಂಬ ಕಾರಣಕ್ಕೆ ಆತನು ಈ ನಿರ್ಧಾರ ಮಾಡಿದ್ದಾನೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಮುಂದೆ ಧಾರಾವಾಹಿ ಯಾವ ರೀತಿಯ ತಿರುವು ಪಡೆದು ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಒಳ್ಳೆಯ ಟಿಆರ್​ಪಿಯೊಂದಿಗೆ ಸಾಗುತ್ತಿರುವುದು ಗೊತ್ತೇ ಇದೆ. ಈ ಧಾರಾವಾಹಿಯಲ್ಲಿ ಸಾಕಷ್ಟು ಮುಖ್ಯ ಘಟ್ಟ ಬಂದಿದೆ. ಶರತ್ ಹಾಗೂ ಮಾಯಾ ಮದುವೆ ನಡೆಯಬೇಕಿತ್ತು. ಆದರೆ, ಅಲ್ಲಾಗಿದ್ದೇ ಬೇರೆ. ಶರತ್ ತಾಯಿಯ ವಶೀಕರಣದಲ್ಲಿ ಇದ್ದ. ಆತನಿಗೆ ಹಸಮಣೆ ಮೇಲೆ ಕುಳಿತು ತಾಳಿ ಕಟ್ಟುವಂತೆ ಆದೇಶ ಇತ್ತು. ಅತ್ತ ದೇವತೆ ಅಜ್ಜಿ ವೇಷದಲ್ಲಿ ಬಂದು ಬಿರುಗಾಳಿ ಬೀಸುವಂತೆ ಮಾಡಿದ್ದಳು. ಹೀಗಾಗಿ, ಅಲ್ಲಿದ್ದ ಯಾರಿಗೂ ಮಿಸುಕಾಡಲೂ ಆಗಿಲ್ಲ.

ಇದನ್ನೂ ಓದಿ
ಅಕ್ಷಯ್ ಹೇಗೆ ಅಷ್ಟು ಬೇಗ ಸಿನಿಮಾ ಮಾಡ್ತಾರೆ? ಅಜಯ್ ದೇವಗನ್ ಫನ್ನಿ ವಿವರಣೆ
ಟಾಪ್​ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
ಮದುವೆ ಬಳಿಕ ಕೆಲಸಕ್ಕೆ ಮರಳಿದ ಅನುಶ್ರೀ ಈ ವಿಚಾರದಲ್ಲಿ ತಪ್ಪು ಮಾಡಲಿಲ್ಲ
ಹಠ ಮಾಡಿ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ ನಟ ಅಕ್ಷಯ್ ಕುಮಾರ್

ಇತ್ತ ದುರ್ಗಾ ಮೈ ಮೇಲೆ ಅಂಬಿಕಾ ಸೇರಿಕೊಂಡು ಹಸೆಮಣೆ ಏರಿದ್ದಳು. ಶರತ್ ತಾಳಿ ಕಟ್ಟಿದ್ದು ಅಂಬಿಕಾಗೆ ಆಗಿತ್ತು. ಈಗ ಶರತ್ ಹಾಗೂ ದುರ್ಗಾ ಮದುವೆ ಬಗ್ಗೆ ಹಿತಾ ಅಸಮಾಧಾನ ಹೊರ ಹಾಕಿದ್ದಾಳೆ. ಆಕೆಗೆ ಈ ಮದುವೆ ಸ್ವಲ್ಪವೂ ಇಷ್ಟ ಇಲ್ಲ. ಈ ಕಾರಣದಿಂದಲೇ ದುರ್ಗಾಗೆ ವಿಚ್ಛೇದನ ನೀಡಲು ಶರತ್ ನಿರ್ಧರಿಸಿದ್ದಾನೆ.

ಇದನ್ನೂ ಓದಿ: ಶರತ್-ದುರ್ಗಾ ಈಗ ಪತಿ-ಪತ್ನಿ; ಹೆಚ್ಚಿತು ಅಂಬಿಕಾ ಶಕ್ತಿ, ಮಾಳವಿಕಾ ಕನಸು ಭಗ್ನ

‘ಮದುವೆ ನಡೆಯಬಾರದಿತ್ತು ನಡೆದು ಹೋಗಿದೆ. ಹೀಗಾಗಿ, ನಾವಿಬ್ಬರೂ ಬೇರೆ ಆಗೋಣ’ ಎಂದು ಶರತ್ ಹೇಳಿದ್ದಾನೆ. ಅತ್ತ, ಮಾಯಾಗೆ ಮನೆ ಬಿಟ್ಟು ಹೋಗುವಂತೆ ಸೂಚಿಸಿದ್ದಾನೆ. ಈ ವಿಚ್ಛೇದನಕ್ಕೆ ಹಿತಾಳೆ ವಿರೋಧ ತೋರಿಸೋ ಸಾಧ್ಯತೆ ಇದೆ. ಶರತ್ ಹಾಗೂ ದುರ್ಗಾ ಬೇರೆ ಆದರೆ, ಮತ್ತೆ ಶರತ್ ಬಾಳಲ್ಲಿ ಮಾಯಾ ಬರಬಹುದು ಎಂಬ ಭಯ ಅವಳದ್ದು. ಮುಂದೆ ಧಾರಾವಾಹಿ ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.