ಮಾಡೋದೆಲ್ಲ ಮಾಡಿ ಮಳ್ಳಿಯಂತೆ ಕುಳಿತ ಚೈತ್ರಾ; ತಮಗಾದ ಮೋಸಕ್ಕೆ ತಿರುಗಿ ಬಿದ್ದ ಶಿಶಿರ್

ಆಟದ ಆರಂಭದಲ್ಲಿ ಶಿಶಿರ್ ಜೊತೆ ಜೋಡಿಯಾಗಿದ್ದ ಚೈತ್ರಾ ಅವರು ನಂತರ ಅರ್ಧಕ್ಕೆ ಕೈ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಮುಂದಾದರು. ಇದರಿಂದ ಶಿಶಿರ್ ಅವರಿಗೆ ಬೇಸರ ಆಯಿತು. ಸ್ವಲ್ಪ ಮಿಸ್ ಆಗಿದ್ದರೂ ಕೂಡ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ಶಿಶಿರ್ ಹೊರಗೆ ಉಳಿಯಬೇಕಿತ್ತು. ಚೈತ್ರಾ ಮಾಡಿದ ಮೋಸಕ್ಕೆ ಶಿಶಿರ್​ ಕೋಪಗೊಂಡಿದ್ದಾರೆ.

ಮಾಡೋದೆಲ್ಲ ಮಾಡಿ ಮಳ್ಳಿಯಂತೆ ಕುಳಿತ ಚೈತ್ರಾ; ತಮಗಾದ ಮೋಸಕ್ಕೆ ತಿರುಗಿ ಬಿದ್ದ ಶಿಶಿರ್
ಚೈತ್ರಾ ಕುಂದಾಪುರ

Updated on: Nov 14, 2024 | 10:06 PM

ಶಿಶಿರ್​ ಜೊತೆ ಜೋಡಿ ಆಗಲ್ಲ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದರಿಂದ ಶಿಶಿರ್​ಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಅವರು ಕೆಂಡಾಮಂಡಲ ಆಗಿದ್ದಾರೆ. ತಾವು ಕೂಡ ಚೈತ್ರಾ ಜೊತೆ ಜೋಡಿ ಆಗಲ್ಲ ಎಂದು ಶಿಶಿರ್ ಹಠ ಮಾಡಿದ್ದಾರೆ. ನಂತರ ಇಡೀ ಮನೆಗೆ ಶಿಕ್ಷೆ ಆಗಬಾರದು ಎಂಬ ಏಕೈಕ ಉದ್ದೇಶದಿಂದ ಅವರ ಜೋಡಿ ಆಟವನ್ನು ಮುಂದುವರಿಸಿದ್ದಾರೆ. ಹಾಗಂತ ಚೈತ್ರಾ ಮೇಲಿನ ಅವರ ಕೋಪ ಕಡಿಮೆ ಆಗಿಲ್ಲ. ಚೈತ್ರಾ ಜೊತೆ ತಾನು ಇನ್ಮೇಲೆ ಮಾತನಾಡುವುದೇ ಇಲ್ಲ ಎಂದು ಶಿಶರ್ ನಿರ್ಧರಿಸಿದ್ದಾರೆ. ‘ಇಂಥವರನ್ನು ನಂಬಿದರೆ ನನ್ನಂಥ ಶತದಡ್ಡ ಮತ್ತೊಬ್ಬ ಇರಲ್ಲ. ಜನ ಈಗಾಗಲೇ ನನ್ನನ್ನು ನೋಡಿ ನಗುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿಸಿಕೊಂಡೆ’ ಎಂದಿದ್ದಾರೆ ಶಿಶಿರ್.

‘ನಾಮಿನೇಷನ್​ ವೇಳೆ ಏನು ಆಗಿದೆ ಎಂಬುದು ನಮಗೆ ಮಾತ್ರ ಗೊತ್ತು. ಬೇಕಿದ್ದರೆ ಇಬ್ಬರೂ ನಾಮಿನೇಟ್ ಆಗಬಹುದಿತ್ತು. ನಾನು ಒಳ್ಳೆಯವನಾಗಲ್ಲ. ಒಳ್ಳೆಯವನಾಗಿದ್ದಕ್ಕೆ ನನಗೆ ಸಿಕ್ಕ ಪ್ರತಿಫಲ ಇದು. ನಾಮಿನೇಷನ್​ನಲ್ಲಿ ಅಯ್ಯೋ, ಅಮ್ಮ ಎನ್ನುತ್ತಾರೆ. ಬೇರೆ ಸಮಯದಲ್ಲಿ ಬರೀ ಸ್ವಾರ್ಥ. ಬರೀ ಮಾತು ಮಾತು ಮಾತು. ಆಡುವ ಮಾತಿನ ಮೇಲೆ ನಿಂತುಕೊಳ್ಳಬೇಕು’ ಎಂದು ಶಿಶಿರ್ ಅವರು ಕೂಗಾಡಿದ್ದಾರೆ. ಇಷ್ಟೆಲ್ಲ ಆಗುವಾಗ ಚೈತ್ರಾ ಅವರು ಮಳ್ಳಿಯಂತೆ ತಲೆ ಬಗ್ಗಿಸಿಕೊಂಡು ಕುಳಿತಿದ್ದರು.

ಇದನ್ನೂ ಓದಿ: ಕೊರಗಜ್ಜನ ಕೃಪೆ: ಮಣ್ಣಿನ ರಾಶಿಯಲ್ಲಿ ಚೈತ್ರಾ ಕಳೆದುಕೊಂಡ ಚಿನ್ನದ ಉಂಗುರ ಕೂಡಲೇ ಪತ್ತೆ

ಚೈತ್ರಾ ಮಾಡಿದ್ದು ತಪ್ಪು ಎಂದು ಐಶ್ವರ್ಯಾ ಕೂಡ ಕಿರುಚಾಡಿದ್ದಾರೆ. ‘ಶಿಶಿರ್​ನ ಯಾಕೆ ಬಲಿಪಶು ಮಾಡಿದ್ದೀರಿ’ ಎಂದು ಕೂಡ ಐಶ್ವರ್ಯಾ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ. ‘ಚೈತ್ರಾ ಅವರಿಗೆ ಎಲ್ಲವೂ ಗೊತ್ತಿತ್ತು. ಹಾಗಿದ್ದರೂ ಕೂಡ ನಾಟಕ ಮಾಡುತ್ತಿದ್ದಾರೆ’ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ. ಇಡೀ ಮನೆ ತಿರುಗಿ ಬಿದ್ದಿದ್ದರೂ ಕೂಡ ಚೈತ್ರಾ ಅವರು ತಮ್ಮದೇ ವಾದವನ್ನು ಮುಂದುವರಿಸಿದ್ದಾರೆ. ಇದರಿಂದ ಶಿಶಿರ್ ಅವರಿಗೆ ಇನ್ನಷ್ಟು ಕೋಪ ಹೆಚ್ಚಾಗಿದೆ.

‘ತಾವೇ ಕ್ಯಾಪ್ಟನ್ ಆಗಲಿ’ ಎಂದು ಚೈತ್ರಾಳ ಮುಖಕ್ಕೆ ಹೊಡೆದಂತೆ ಶಿಶಿರ್​ ಹೇಳಿದ್ದಾರೆ. ‘ಆಯ್ತು ಬಿಡಿ, ನಾನು ಕ್ಯಾಪ್ಟನ್ ಆಗಲ್ಲ’ ಎಂದು ಚೈತ್ರಾ ಅವರು ಹೇಳಿದ್ದಾರೆ. ಅವರ ಆ ಮಾತು ಕೂಡ ನಾಟಕ ಎಂದು ಶಿಶಿರ್ ತಿವಿದಿದ್ದಾರೆ. ಮೊದಲಿನಿಂದಲೂ ಚೈತ್ರಾ ಅವರು ಈ ರೀತಿಯೇ ನಡೆದುಕೊಳ್ಳುತ್ತಿದ್ದಾರೆ. ಅವರ ಮಾತಿಗೂ ಕೃತಿಗೂ ಹೊಂದಾಣಿಕೆ ಬರುತ್ತಿಲ್ಲ. ಅದರಿಂದಲೇ ಶಿಶಿರ್ ಅವರಿಗೆ ನೋವಾಗಿದೆ. ನಾಮಿನೇಷನ್​ ಆಗುವಾಗ ಕಣ್ಣೀರು ಹಾಕಿ ಬಚಾವ್ ಆಗಿ, ನಂತರ ಶಿಶಿರ್​ಗೆ ಸಂಕಷ್ಟ ನೀಡಲು ಮುಂದಾದ ಚೈತ್ರಾ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us