‘ಅದೇ ಎನರ್ಜಿ, ಅದೇ ಗತ್ತು’; ಜೀ ಕನ್ನಡ ವೇದಿಕೆ ಮೇಲೆ ಶಿವಣ್ಣ-ಪ್ರೇಮಾ ‘ಓಂ’ ರೀ ಕ್ರಿಯೇಷನ್

‘ಒಂ’ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರು. 1995ರ ಮೇ 19ರಂದು ಈ ಚಿತ್ರ ರೀಲೀಸ್ ಆಯಿತು. ಈ ಸಿನಿಮಾ ಈವರೆಗೆ ಸಿನಿಮಾ 550ಕ್ಕೂ ಅಧಿಕ ಬಾರಿ ರೀ-ರಿಲೀಸ್ ಆಗಿದೆ ಅನ್ನೋದು ವಿಶೇಷ. ಈಗ ಜೀ ಕನ್ನಡ ವೇದಿಕೆ ಮೇಲೆ ಶಿವರಾಜ್​ಕುಮಾರ್ ಅವರು ‘ಓಂ’ ಚಿತ್ರವನ್ನು ರೀ ಕ್ರಿಯೇಟ್ ಮಾಡುತ್ತಿದ್ದಾರೆ.

‘ಅದೇ ಎನರ್ಜಿ, ಅದೇ ಗತ್ತು’; ಜೀ ಕನ್ನಡ ವೇದಿಕೆ ಮೇಲೆ ಶಿವಣ್ಣ-ಪ್ರೇಮಾ ‘ಓಂ’ ರೀ ಕ್ರಿಯೇಷನ್
ಶಿವರಾಜ್​ಕುಮಾರ್-ಪ್ರೇಮಾ

Updated on: Aug 31, 2024 | 10:40 AM

ನಟ ಶಿವರಾಜ್​ಕುಮಾರ್ ನಟನೆಯ ‘ಓಂ’ ಸಿನಿಮಾ 1995ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಬಿಡುಗಡೆ ಆಗಿ 30 ವರ್ಷ ಪೂರ್ಣಗೊಳ್ಳುತ್ತಿದೆ. ಈ ಚಿತ್ರವನ್ನು ಈಗಲೂ ನೆನಪಿಸಿಕೊಳ್ಳು ಕೆಲಸ ಫ್ಯಾನ್ಸ್ ಮಾಡುತ್ತಾರೆ. ಈಗ ಜೀ ಕನ್ನಡ ವೇದಿಕೆ ಮೇಲೆ ಶಿವರಾಜ್​ಕುಮಾರ್ ಅವರು ‘ಓಂ’ ಚಿತ್ರವನ್ನು ರೀ ಕ್ರಿಯೇಟ್ ಮಾಡುತ್ತಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದೆ. ಸಂಪೂರ್ಣ ಎಪಿಸೋಡ್ ನೋಡಲು ಫ್ಯಾನ್ಸ್ ಕಾದಿದ್ದಾರೆ.

‘ಒಂ’ ಚಿತ್ರವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿದ್ದರು. 1995ರ ಮೇ 19ರಂದು ಈ ಚಿತ್ರ ರೀಲೀಸ್ ಆಯಿತು. ಈ ಸಿನಿಮಾ ಈವರೆಗೆ ಸಿನಿಮಾ 550ಕ್ಕೂ ಅಧಿಕ ಬಾರಿ ರೀ-ರಿಲೀಸ್ ಆಗಿದೆ ಅನ್ನೋದು ವಿಶೇಷ. ಶಿವರಾಜ್​ಕುಮಾರ್ ಅವರು ಸತ್ಯ ಹೆಸರಿನ ಪಾತ್ರ ಮಾಡಿದರೆ, ಪ್ರೇಮಾ ಅವರು ಮಧು ಹೆಸರಿನ ಪಾತ್ರ ಮಾಡಿದ್ದರು. ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದರು.

ಮಧು ಬಳಿ ಬರುವ ಸತ್ಯ ಪ್ರೀತಿಸು ಎಂದು ಪೀಡಿಸುತ್ತಾನೆ. ಈ ದೃಶ್ಯವನ್ನು ರೀ ಕ್ರಿಯೇಟ್ ಮಾಡಲಾಗಿದೆ. ‘ದಂತದ ಗೊಂಬೆ ತರ ಕಾಣ್ತಾ ಇದೀಯಾ, ಐ ಲವ್​ ಯೂ ಮಧು’ ಎಂದು ಶಿವಣ್ಣ ಹೇಳಿದ್ದಾರೆ. ‘ನನಗೆ ನೀನು ಇಷ್ಟ ಇಲ್ಲ ಅಂದ್ರೂ ಯಾಕೆ ನನ್ನ ಪೀಡಿಸ್ತೀಯಾ’ ಎಂದು ಪ್ರೇಮಾ ಕೇಳಿದ್ದಾರೆ. ಇಬ್ಬರ ಎನರ್ಜಿ ಅದೇ ರೀತಿ ಇದೆ. ಡೈಲಾಗ್​ ಡೆಲಿವರಿ ಆಗ ಹೇಗಿತ್ತೋ ಹಾಗೆಯೇ ಇದೆ ಅನ್ನೋದು ವಿಶೇಷ.


ಇದನ್ನೂ ಓದಿ: ‘ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’; ಮತ್ತೆ ಲಾಂಗ್ ಹಿಡಿದ ಶಿವರಾಜ್​ಕುಮಾರ್

ಜೀ ಕನ್ನಡದಲ್ಲಿ ಇಂದು ಎರಡು ರಿಯಾಲಿಟಿ ಶೋಗಳ ಸಮಾಗಮ ಆಗುತ್ತಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ಮಹಾನಟಿ ‘ಮಹಾಸಂಭ್ರಮ’ ಕಾರ್ಯಕ್ರಮ ಸಂಜೆ 7ರಿಂದ ರಾತ್ರಿ 9:30ರವರೆಗೆ ನಡೆಯಲಿದೆ. ಶಿವಣ್ಣ ಅವರು ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಜಡ್ಡ್ ಆದರೆ, ಪ್ರೇಮಾ ಮಹಾನಟಿ ಶೋನ ಜಡ್ಜ್​ ಆಗಿದ್ದಾರೆ. ತರುಣ್ ಸುಧೀರ್ ಕೂಡ ಜಡ್ಜ್ ಸ್ಥಾನದಲ್ಲಿ ಇದ್ದು, ಅವರ ಪತ್ನಿ ಸೋನಲ್ ಅವರು ಬರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us