ಬಿಗ್ ಬಾಸ್ ಮನೆಯಿಂದ ಹೊರಬರಲು ಹನುಮಂತ ನಿರ್ಧಾರ; ಧನರಾಜ್ ಪ್ರತಿಕ್ರಿಯೆ ಏನು?

|

Updated on: Jan 05, 2025 | 9:27 PM

ಬಿಗ್ ಬಾಸ್ ಮನೆಯಲ್ಲಿ ಹನುಮಂತ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ಅವರಿಗೆ ಈಗ ಬಿಗ್ ಬಾಸ್ ಆಟ ಸಾಕು ಎನಿಸುತ್ತಿದೆ. ಅವರಿಗೆ ಉತ್ತಮ ವೋಟ್​ ಸಿಗುತ್ತಿದೆ. ಹಾಗಿದ್ದರೂ ಕೂಡ ಅವರು ಇಂಥ ನಿರ್ಧಾರಕ್ಕೆ ಬಂದಿದ್ದಾರೆ. ಹನುಮಂತ ಅವರಿಗೆ ಆಪ್ತ ಗೆಳೆಯ ಧನರಾಜ್​ ಬುದ್ಧಿ ಹೇಳಿದ್ದಾರೆ. ಮುಂದಿನ ಅವರ ನಿರ್ಧಾರ ಹೇಗಿರಲಿದೆ ಎಂಬ ಕೌತುಕ ಮೂಡಿದೆ.

ಬಿಗ್ ಬಾಸ್ ಮನೆಯಿಂದ ಹೊರಬರಲು ಹನುಮಂತ ನಿರ್ಧಾರ; ಧನರಾಜ್ ಪ್ರತಿಕ್ರಿಯೆ ಏನು?
Hanumantha, Kichcha Sudeep
Follow us on

ಸಿಂಗರ್​ ಹನುಮಂತ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಬೇರೆ ಎಲ್ಲ ಸ್ಪರ್ಧಿಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರನ್ನು ಇಷ್ಟಪಡುವ ವೀಕ್ಷಕರ ಸಂಖ್ಯೆ ದೊಡ್ಡದಿದೆ. ಪ್ರತಿ ವಾರ ಅವರಿಗೆ ಉತ್ತಮವಾಗಿ ವೋಟ್​ಗಳು ಬರುತ್ತಿವೆ. ಆದರೆ ಯಾಕೋ ಹನುಮಂತ ಅವರು ಬಿಗ್ ಬಾಸ್​ ಆಟವನ್ನು ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಭಾನುವಾರದ (ಜನವರಿ 5) ಸಂಚಿಕೆಯಲ್ಲಿ ಹನುಮಂತ ಅವರು ಈ ಕುರಿತು ಧನರಾಜ್​ ಜೊತೆ ಚರ್ಚೆ ಮಾಡಿದ್ದಾರೆ. ಆದರೆ ಧನರಾಜ್​ ಅವರು ಹನುಮಂತನಿಗೆ ಧೈರ್ಯ ತುಂಬಿದ್ದಾರೆ.

‘ಬಿಗ್ ಬಾಸ್​ಗೆ ನಾನು ನೇರವಾಗಿ ಹೇಳಿಬಿಡುತ್ತೇನೆ. ಕಷ್ಟ ಆಗುತ್ತಿದೆ ನನ್ನನ್ನು ಕಳಿಸಿ ಬಿಡಿ’ ಎಂದು ಹನುಮಂತ ಅವರು ಹೇಳಿದ್ದಾರೆ. ‘ನೀನು ಯಾಕೆ ಶೋಭಕ್ಕನ ಥರ ಆಡುತ್ತಿದ್ದೀಯ’ ಎಂದು ಧನರಾಜ್​ ಅವರು ಹೇಳಿದರು. ಯಾಕೆಂದರೆ, ಶೋಭಾ ಶೆಟ್ಟಿ ಕೂಡ ಇದೇ ರೀತಿ ಮಾತನಾಡಿ ಬಿಗ್ ಬಾಸ್​ ಮನೆಯಿಂದ ಹೊರಗೆ ಹೋಗಿದ್ದರು. ತಮ್ಮ ಮನಸ್ಸಿನ ಗೊಂದಲ ಏನು ಎಂಬುದನ್ನು ಹನುಮಂತ ವಿವರಿಸಿದ್ದಾರೆ.

‘ಶೋಭಕ್ಕನ ರೀತಿ ಏನೂ ಇಲ್ಲ. ನಾವು ಬಾಯಿ ಸತ್ತವರ ರೀತಿ ಇರೋಕೆ ಆಗಲ್ಲ. ಮಾತಾಡೋಕೆ ಬರುತ್ತಿಲ್ಲ. ತಲೆ ಸ್ವಿಚ್ ಆಫ್ ಆಗಿದೆ’ ಎಂದು ಹನುಮಂತ ಅವರು ತಮ್ಮ ನಿಜವಾದ ಸಮಸ್ಯೆ ಏನು ಎಂಬುದನ್ನು ವಿವರಿಸಿದ್ದಾರೆ. ಅದಕ್ಕೆ ಕೂಡ ಧನರಾಜ್ ಅವರು ಬುದ್ಧಿ ಹೇಳಿದ್ದಾರೆ.‘ಹಾಡಲ್ಲೇ ಉತ್ತರ ಕೊಡುತ್ತೀಯ ದೋಸ್ತಾ. ವಾರ ಪೂರ್ತಿ ಮಾತಾಡುವ ನೀನು ವೀಕೆಂಡ್ನಲ್ಲಿ ಯಾಕೆ ಮಾಡಲ್ಲ ಅಂತ ಅಷ್ಟೇ ಹೇಳಿದ್ದು’ ಎಂದಿದ್ದಾರೆ ಧನರಾಜ್. ‘ಸುದೀಪ್ ಸರ್ ಹತ್ತಿರ ಟ್ರೇನಿಂಗ್ ತೆಗೆದುಕೊಂಡು ನಾವು ಇಲ್ಲಿಗೆ ಬರಬೇಕಿತ್ತು’ ಎಂದಿದ್ದಾರೆ ಹನುಮಂತ.

ಇದನ್ನೂ ಓದಿ: ಹಳ್ಳಿಯಿಂದ ಬಂದ ಅಪ್ಪ, ಅಮ್ಮನಿಗೆ ಹೆಮ್ಮೆಯಿಂದ ಬಿಗ್ ಬಾಸ್ ಮನೆ ತೋರಿಸಿದ ಹನುಮಂತ

ಹನುಮಂತ ಅವರು ಹಳ್ಳಿಯಿಂದ ಬಂದವರು. ಅವರಿಗೆ ಸಿಟಿ ಜೀವನದ ಅಷ್ಟಾಗಿ ಪರಿಚಯ ಇಲ್ಲ. ವೈಲ್ಡ್​ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಬಂದಾಗ ಅವರಿಗೆ ಎಲ್ಲವೂ ಹೊಸದಾಗಿತ್ತು. ಆದರೆ ಈಗ ಅವರು ತುಂಬ ಹೊಂದಿಕೊಂಡಿದ್ದಾರೆ. ಟಾಸ್ಕ್​ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ಕಡೆಯಿಂದ ಭರ್ಜರಿ ಮನರಂಜನೆ ಕೂಡ ಸಿಗುತ್ತಿದೆ. ಆದರೂ ಸಹ ಫಿನಾಲೆ ಹತ್ತಿರ ಆಗುತ್ತಿರುವಾಗ ಅವರು ಆಟ ತೊರೆಯುವ ಬಗ್ಗೆ ಮಾತನಾಡಿರುವುದು ಅವರ ಅಭಿಮಾನಿಗಳಿಗೆ ಖಂಡಿತ ಬೇಸರ ತಂದಿರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.