ಆಶ್ಚರ್ಯಕರ ಎಲಿಮಿನೇಷನ್, ಮೆಚ್ಚಿನ ಸ್ಪರ್ಧಿಯೇ ಔಟ್

Bigg Boss: ಬಿಗ್​ಬಾಸ್ ಕನ್ನಡ ಸೀಸನ್ 10 ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ನೆಚ್ಚಿನ ಆಟಗಾರರೇ ಹೊರಗೆ ಹೋಗುತ್ತಿದ್ದಾರೆ. ಈ ವಾರ ಮನೆಯ ನೆಚ್ಚಿನ ಸ್ಪರ್ಧಿಯೇ ಹೊರಗೆ ಹೋಗಿದ್ದಾರೆ.

ಆಶ್ಚರ್ಯಕರ ಎಲಿಮಿನೇಷನ್, ಮೆಚ್ಚಿನ ಸ್ಪರ್ಧಿಯೇ ಔಟ್
ಬಿಗ್​ಬಾಸ್ ಎಲಿಮಿನೇಷನ್

Updated on: Dec 31, 2023 | 11:19 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಫಿನಾಲೆಗೆ ಹತ್ತಿರವಾಗುತ್ತಿದೆ ವಾರಗಳು ಕಳೆದಂತೆ ಒಳ್ಳೆಯ ಸ್ಪರ್ಧಿಗಳೇ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಕಳೆದ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿ ಕೊನೆಯ ಹಂತದಲ್ಲಿ ಬಚಾವಾಗಿ ವಾಪಸ್ ಬಂದಿದ್ದ ಮೈಖಲ್ ಈ ವಾರ ಹೊರಗೆ ಹೋಗಲಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ವೀಕೆಂಡ್ ಎಪಿಸೋಡ್​ನ ಭಾನುವಾರದ ಎಪಿಸೋಡ್​ನಲ್ಲಿ ನಡೆದಿದ್ದೇ ಬೇರೆ.

ಈ ವಾರ ನಮ್ರತಾ, ಡ್ರೋನ್ ಪ್ರತಾಪ್ ಅವರಿಬ್ಬರನ್ನು ಹೊರತುಪಡಿಸಿ ಇನ್ನೆಲ್ಲರೂ ನಾಮಿನೇಟ್ ಆಗಿದ್ದರು. ವಿನಯ್, ತನಿಷಾ, ಕಾರ್ತಿಕ್, ತುಕಾಲಿ, ವರ್ತೂರು ಸಂತು, ಮೈಖಲ್, ಸಿರಿ, ಸಂಗೀತಾ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಅದರಲ್ಲಿ ವಿನಯ್, ತುಕಾಲಿ ಅವರುಗಳು ಶನಿವಾರದ ಎಪಿಸೋಡ್​ನಲ್ಲೇ ಬಚಾವಾಗಿದ್ದರು. ಭಾನುವಾರದ ಎಪಿಸೋಡ್​ನಲ್ಲಿ ಸಂಗೀತಾ, ಮೈಖಲ್, ತನಿಷಾ, ಕಾರ್ತಿಕ್, ಸಿರಿ, ವರ್ತೂರು ಸಂತು ಅವರುಗಳು ನಾಮಿನೇಷನ್​ನಲ್ಲಿ ಉಳಿದಿದ್ದರು.

ಭಾನುವಾರದ ಎಪಿಸೋಡ್ ಆರಂಭವಾದ ಕೆಲವು ಹೊತ್ತಿನಲ್ಲಿ ಮೊದಲಿಗೆ ಸಂಗೀತಾ ಎಲಿಮಿನೇಷನ್​ನಿಂದ ಪಾರಾಗಿರುವುದನ್ನು ಘೋಷಿಸಿದರು. ಅದಾದ ಬಳಿಕ ತನಿಷಾರನ್ನು ಘೋಷಿಸಿದರು. ಬಳಿಕ ಕಾರ್ತಿಕ್ ಮಹೇಶ್ ಪಾರಾದರು. ಅದಾದ ಬಳಿಕ ವರ್ತೂರು ಸಂತೋಷ್, ಸಿರಿ, ಮೈಖಲ್ ಅವರುಗಳು ಉಳಿದಿದ್ದರು. ಆಗ ಸುದೀಪ್ ಬೀಗಗಳನ್ನು ತೆಗೆಯುವ ಆಕ್ಟಿವಿಟಿ ಒಂದನ್ನು ಮಾಡಿಸಿದರು. ಅದರಲ್ಲಿ ವರ್ತೂರು ಅವರು ಗೆದ್ದು ಉಳಿದುಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಗೆಲ್ಲುವ ಕ್ಷಮತೆ ಇರುವ ಸ್ಪರ್ಧಿ ಯಾರು? ಮನೆಯವರೇ ಕೊಟ್ಟರು ಉತ್ತರ

‘‘ನಿಮಗಾಗಿ ಜನ ಮತ ಹಾಕುತ್ತಿದ್ದಾರೆ ಆ ಮತಕ್ಕೆ ಅವಮಾನ ಆಗದಂತೆ ಆಟ ಆಡಿ, ಬೀನ್ ಮೇಲೆ ಕುಳಿತುಕೊಂಡೇ ಇರುವುದು ಆಟ ಅಲ್ಲ’’ ಎಂದು ಖಡಕ್ ಆಗಿ ಎಚ್ಚರಿಕೆಯನ್ನು ವರ್ತೂರು ಅವರಿಗೆ ನೀಡಿದರು. ಅದಾದ ಬಳಿಕ ಉಳಿದ ಸಿರಿ ಹಾಗೂ ಮೈಖಲ್ ಅವರ ಚಿತ್ರಗಳ ಬೋರ್ಡ್​ಗಳನ್ನು ಇಟ್ಟು, ಯಾರು ಉಳಿಯಬೇಕು, ಯಾರು ಹೋಗಬೇಕು ಎಂದು ಅನ್ನಿಸುತ್ತದೆಯೇ ಅವರ ಚಿತ್ರಗಳ ಮೇಲೆ ಇನ್ ಹಾಗೂ ಔಟ್ ಎಂದು ಸೀಲ್ ಹಾಕುವಂತೆ ಹೇಳಿದರು.

ವಿನಯ್, ನಮ್ರತಾ ಹಾಗೂ ತುಕಾಲಿ ಸಂತು ಅವರು ಮೈಖಲ್ ಅವರು ಉಳಿಯಬೇಕೆಂದು ಸೀಲ್ ಹಾಕಿದರೆ, ಸಂಗೀತಾ, ಕಾರ್ತಿಕ್, ತನಿಷಾ, ವರ್ತೂರು ಸಂತು, ಡ್ರೋನ್ ಪ್ರತಾಪ್ ಅವರುಗಳು ಸಿರಿ ಅವರು ಉಳಿಯಬೇಕೆಂದು ಮತ ಹಾಕಿದರು. ಬಹುತಮ ಸಿರಿ ಅವರ ಪರವಾಗಿತ್ತು. ಆದರೆ ಜನರ ಅಭಿಪ್ರಾಯ ಬೇರೆಯೇ ಇತ್ತು. ಅಂತಿಮವಾಗಿ ಮೈಖಲ್ ಮನೆಯಲ್ಲಿ ಉಳಿದುಕೊಂಡರು, ಸಿರಿ ಅವರು ಮನೆಯಿಂದ ಹೊರಗೆ ಹೋದರು.

ಸಿರಿ ಅವರು ಹೊರಗೆ ಹೋಗಬೇಕಾದರೆ ಮನೆಯವರೆಲ್ಲರೂ ಪಾಸ್ ಆಗಿದ್ದು, ಯಾರೂ ಸಹ ಅವರೊಟ್ಟಿಗೆ ಮಾತನಾಡುವಂತಿರಲಿಲ್ಲ. ಸಿರಿ ಅವರನ್ನು ಬಹುವಾಗಿ ಹಚ್ಚಿಕೊಂಡಿದ್ದ ಸಂಗೀತಾ ಕೂತಲ್ಲೇ ಕಣ್ಣೀರು ಸುರಿಸಿದರು, ತನಿಷಾ ಸಹ. ಆದರೆ ಇನ್ನೇನು ಸಿರಿ ಹೊರಗೆ ಹೋಗುವಾಗ ಎಲ್ಲರೂ ಪ್ಲೇ ಎಂಬ ಆದೇಶ ಬಂತು, ಆಗ ಎಲ್ಲರೂ ಸರಿಯಾಗಿ ಸಿರಿ ಅವರಿಗೆ ಗುಡ್​ಬೈ ಹೇಳಿದರು ಮಾತ್ರವಲ್ಲದೆ ಎಲ್ಲರೂ ಒಟ್ಟಿಗೆ ಚಿತ್ರವನ್ನು ತೆಗೆದುಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us