ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರು ಗಂಟೆಗಳ ಅನಿಯಮಿತ ಮನರಂಜನೆ
Colors Kannada: ಫೆಬ್ರವರಿ 22 ಹಾಗೂ 23 ರಂದು ರಾತ್ರಿ 7.30ಕ್ಕೆ ಈ ‘ಮಹಾಮಿಲನ’ ಮಹಾ ಎಪಿಸೋಡ್ ಪ್ರಸಾರವಾಗಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮನೊರಂಜನೆ ಮತ್ತು ಅಪರಿಮಿತ ನಗುವನ್ನು ಈ ಶೋ ನೀಡಲಿದೆ. ಭರ್ಜರಿ ಮನೊರಂಜನೆ ಒದಗಿಸಲಿರುವ ಈ ಮಹಾಮಿಲನದಲ್ಲಿ ಹಲವು ವಿಶೇಷತೆಗಳು ಇರಲಿವೆ. ಈ ಶೋಗೆ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಜಂಟಿ ಜಡ್ಜ್ ಆಗಿರಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎರಡು ದೊಡ್ಡ ದೊಡ್ಡ ಶೋಗಳ ಮಹಾ ಮಿಲನ ನಡೆಯಲಿದೆ. ಈ ವಾರಾಂತ್ಯ ಆರು ಗಂಟೆಗಳ ಅಪರಿಮಿತ ಮನೊರಂಜನೇ ಟಿವಿ ವೀಕ್ಷಕರಿಗೆ ದೊರಕಲಿದೆ. ‘ಬಾಯ್ಸ್ vs ಗರ್ಲ್ಸ್’ ಮತ್ತು ಮಜಾ ಟಾಕೀಸ್’ ಶೋಗಳ ಮಹಾಮಿಲನ ನಡೆಯಲಿದ್ದು, ಫೆಬ್ರವರಿ 22 ಮತ್ತು 23 ರಂದು ಈ ಮಹಾ ಮಿಲನ ಶೋ ನಡೆಯಲಿದೆ. ಸೃಜನ್ ಲೋಕೇಶ್, ಯೋಗರಾಜ್ ಭಟ್ ಅವರು ಜಂಟಿಯಾಗಿ ಈ ಮಹಾಮಿಲನ ಕಾರ್ಯಕ್ರಮದ ಸಾರಥ್ಯ ವಹಿಸಲಿದ್ದಾರೆ.
ಫೆಬ್ರವರಿ 22 ಹಾಗೂ 23 ರಂದು ರಾತ್ರಿ 7.30ಕ್ಕೆ ಈ ‘ಮಹಾಮಿಲನ’ ಮಹಾ ಎಪಿಸೋಡ್ ಪ್ರಸಾರವಾಗಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮನೊರಂಜನೆ ಮತ್ತು ಅಪರಿಮಿತ ನಗುವನ್ನು ಈ ಶೋ ನೀಡಲಿದೆ. ಭರ್ಜರಿ ಮನೊರಂಜನೆ ಒದಗಿಸಲಿರುವ ಈ ಮಹಾಮಿಲನದಲ್ಲಿ ಹಲವು ವಿಶೇಷತೆಗಳು ಇರಲಿವೆ. ಈ ಶೋಗೆ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಜಂಟಿ ಜಡ್ಜ್ ಆಗಿರಲಿದ್ದಾರೆ. ಮಾತ್ರವಲ್ಲದೆ ಭಿನ್ನ ರೀತಿಯ ಜಡ್ಜ್ಮೆಂಟ್ಗಳನ್ನು ಅವರು ಬರೆಯಲಿದ್ದಾರೆ.
ಇದನ್ನೂ ಓದಿ:ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋನಿಂದಲೂ ಔಟ್ ಆದ್ರಾ ಜಗದೀಶ್?
ಇತ್ತೀಚೆಗಷ್ಟೆ ನಟನೆಗೆ ರಾಜ್ಯ ಪ್ರಶಸ್ತಿ ಪಡೆದ ಹರಳು ಹುರಿದಂತೆ ಮಾತನಾಡುವ ಅನಪಮಾ ಗೌಡ ಅವರು ಈ ಸುದೀರ್ಘ ಶೋ ನ ನಿರೂಪಣೆ ಮಾಡಲಿದ್ದಾರೆ. ಎರಡೂ ಶೋಗಳ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಸ್ಕಿಟ್, ಡ್ಯಾನ್ಸ್, ಹಾಡು ಇನ್ನತರೆ ರೂಪಗಳಲ್ಲಿ ಪ್ರದರ್ಶನ ಮಾಡಲಿದ್ದಾರೆ. ಕುರಿ ಪ್ರತಾಪ್ ಸಖತ್ ಕಾಮಿಡಿ ಮಾಡಲಿದ್ದಾರೆ. ‘ಮಹಾ ಶಿವರಾತ್ರಿ’ ವಿಶೇಷವಾಗಿ ಚಂದನಾ, ಐಶ್ವರ್ಯಾ ಸಿಂಧೋಗಿ ಮತ್ತು ಪ್ರಿಯಾಂಕಾ ಕಾಮತ್ ಇವರು ಕ್ರಮವಾಗಿ ಸತಿ, ಪಾರ್ವತಿ, ಕಾಳಿಯಾಗಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.
View this post on Instagram
‘ಅಣ್ಣಯ್ಯ’ ಸಿನಿಮಾದ ಕಾಮಿಡಿ ಅಣಕವನ್ನು ಹಾಲಿವುಡ್‌ನ ‘ಅವತಾರ್’ ಚಿತ್ರದ ಮಾದರಿಯಲ್ಲಿ ತೋರಿಸಲಿದ್ದಾರೆ ಚಂದ್ರಪ್ರಭ, ಪ್ರಶಾಂತ್, ವಿವೇಕ್ ಹಾಗೂ ಮಿಮಿಕ್ರಿ ಗೋಪಿ. ‘ನೊಂದ ಗಂಡಂದಿರ ಸಂಘ’ ಎಂಬ ಸ್ಕಿಟ್ನಲ್ಲಿ ತುಕಾಲಿ ಸಂತು – ಪತ್ನಿ ಮಾನಸಾ, ಪಾವಗಡ ಮಂಜು – ಪತ್ನಿ ನಂದಿನಿ ಮತ್ತು ಕುರಿ ಪ್ರತಾಪ್ ಪ್ರೇಕ್ಷಕರಿಗೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ