‘ಪ್ರತಾಪ್​ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ, ಫಿನಾಲೆಯಲ್ಲಿ ಸುದೀಪ್ ಪಕ್ಕ ಅವನಿರ್ತಾನೆ’; ಸ್ನೇಹಿತ್ ಗೌಡ

| Updated By: ರಾಜೇಶ್ ದುಗ್ಗುಮನೆ

Updated on: Dec 18, 2023 | 12:07 PM

ವಿನಯ್ ಹಾಗೂ ನಮ್ರತಾ ಜೊತೆ ಸದಾ ಇರುತ್ತಿದ್ದ ಸ್ನೇಹಿತ್ ಅವರು ಪ್ರತಾಪ್​ನ ಸ್ಪರ್ಧಿ ಎಂದೇ ಪರಿಗಣಿಸಿ ಇರಲಿಲ್ಲ. ಆದರೆ, ಹೊರ ಬಂದ ಬಳಿಕ ಅವರಿಗೆ ನಿಜವಾದ ವಿಚಾರ ಏನು, ಅವರ ಬಗ್ಗೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ಗೊತ್ತಾಗಿದೆ. ಇದನ್ನು ಸ್ನೇಹಿತ್ ಅವರು ಒಪ್ಪಿಕೊಂಡಿದ್ದಾರೆ.

‘ಪ್ರತಾಪ್​ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ, ಫಿನಾಲೆಯಲ್ಲಿ ಸುದೀಪ್ ಪಕ್ಕ ಅವನಿರ್ತಾನೆ’; ಸ್ನೇಹಿತ್ ಗೌಡ
ಪ್ರತಾಪ್, ಸಂಗೀತಾ, ಸ್ನೇಹಿತ್
Follow us on

ಬಿಗ್ ಬಾಸ್ (Bigg Boss) ಒಳಗಿದ್ದು ಆಡುವವರಿಗೆ ಹೊರಗಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಅನ್ನೋದು ಗೊತ್ತಾಗುವುದಿಲ್ಲ. ಯಾವ ಸ್ಪರ್ಧಿಗಳ ಬಗ್ಗೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ತಿಳಿಯುವುದಿಲ್ಲ. ಒಮ್ಮೆ ಅದು ಗೊತ್ತಾದರೆ ಆಟದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಆ ವಿಚಾರ ಗೊತ್ತಾಗದಂತೆ ನೋಡಿಕೊಳ್ಳಲಾಗುತ್ತದೆ. ಬಿಗ್ ಬಾಸ್ ಒಳಗಿರೋ ಅನೇಕರು ಡ್ರೋನ್ ಪ್ರತಾಪ್ ಅವರನ್ನು ವಿರೋಧಿಸುತ್ತಿದ್ದಾರೆ. ಹೊರಗೆ ಬಂದವರಿಗೆ ನಿಜ ವಿಚಾರ ಏನು ಅನ್ನೋದು ಗೊತ್ತಾಗುತ್ತದೆ. ಸ್ನೇಹಿತ್​ ಗೌಡ ಅವರಿಗೂ ಈ ಬಗ್ಗೆ ಜ್ಞಾನೋದಯ ಆಗಿದೆ.

ಸ್ನೇಹಿತ್ ಗೌಡ ಅವರು ಬಿಗ್ ಬಾಸ್​ನಲ್ಲಿ ಎರಡು ತಿಂಗಳಿಗೂ ಅಧಿಕ ಕಾಲ ಇದ್ದರು. ಅವರು ಇದ್ದಷ್ಟು ದಿನ ಪ್ರತಾಪ್ ಅವರನ್ನು ವಿರೋಧಿಸುತ್ತಾ ಬಂದರು. ವಿನಯ್ ಹಾಗೂ ನಮ್ರತಾ ಜೊತೆ ಸದಾ ಇರುತ್ತಿದ್ದ ಅವರು ಪ್ರತಾಪ್​ನ ಸ್ಪರ್ಧಿ ಎಂದೇ ಪರಿಗಣಿಸಿ ಇರಲಿಲ್ಲ. ಆದರೆ, ಹೊರ ಬಂದ ಬಳಿಕ ಅವರಿಗೆ ನಿಜವಾದ ವಿಚಾರ ಏನು, ಅವರ ಬಗ್ಗೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ಗೊತ್ತಾಗಿದೆ. ಇದನ್ನು ಸ್ನೇಹಿತ್ ಅವರು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಫಿನಾಲೆಯಲ್ಲಿ ಪ್ರತಾಪ್ ಇರುತ್ತಾರೆ ಅನ್ನೋ ನಂಬಿಕೆ ಸ್ನೇಹಿತ್​​ಗೆ ಬಂದಿದೆ.

ಬಿಗ್ ಬಾಸ್ ಒಳಗೆ ಗೌರಿಶ್ ಅಕ್ಕಿ ಸ್ಪರ್ಧಿ ಆಗಿ ತೆರಳಿದ್ದರು. ಆದರೆ, ಬಹುಬೇಗ ಅವರು ದೊಡ್ಮನೆಯಿಂದ ಬಂದರು. ಅವರ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಪ್ರತಾಪ್ ಬಗ್ಗೆ ಇರುವ ಅಭಿಪ್ರಾಯ ಬದಲಾದ ಬಗ್ಗೆ ಸ್ನೇಹಿತ್ ಮಾತನಾಡಿದ್ದಾರೆ. ಪ್ರತಾಪ್​ನ ಅವರು ಬಾಯ್ತುಂಬ ಹೊಗಳಿದ್ದಾರೆ.

‘ಗೇಮ್​ನ ಪ್ರತಾಪ್​ನಷ್ಟು ಅರ್ಥ ಮಾಡಿಕೊಂಡವರು ಯಾರೂ ಇಲ್ಲ. ನಾವು ಹೊಡೆದುಕೊಂಡು, ರಕ್ತ ಸುರಿಸಿ ಆಟ ಆಡಿದೆವು. ನಾವೆಲ್ಲ ಹೊರಗೆ ಇದ್ದೇವೆ. ಆದರೆ, ಅವನು ಒಳಗೆ ಇದ್ದಾನೆ. ಅವನು ಎಲ್ಲಿಯೂ ಫಿಸಿಕಲ್ ಆಡ್ತಾ ಇಲ್ಲ. ನಾವು ರೋಡಿಸ್ ಆಡಿದೆವು. ಪ್ರತಾಪ್ ಬಿಗ್ ಬಾಸ್ ಆಡ್ತಾ ಇದಾನೆ. ಬಿಗ್ ಬಾಸ್​ ಫಿನಾಲೆ ಹೋಗೋರಲ್ಲಿ ಪ್ರತಾಪ್ ಮೊದಲು ಇರ್ತಾನೆ. ಸುದೀಪ್ ಸರ್ ಕೈಯಲ್ಲಿ ಒಂದು ಕೈ ಪ್ರತಾಪ್​ದಾಗಿರುತ್ತದೆ’ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಸ್ನೇಹಿತ್.

ಇದನ್ನೂ ಓದಿ: ‘ಬಿಗ್​ ಬಾಸ್​ನ ಮಾವುತ ಅವಿನಾಶ್​ ಅಲ್ಲ, ಪ್ರತಾಪ್​’; ಹೊಸ ಬಿರುದು ನೀಡಿದ ಸುದೀಪ್

ಪ್ರತಾಪ್ ಅವರ ಬಗ್ಗೆ ಹೊರ ಜಗತ್ತಿನಲ್ಲಿ ಬೇರೆಯದೇ ರೀತಿಯ ಅಭಿಪ್ರಾಯ ಇತ್ತು. ಡ್ರೋನ್​ ತಯಾರಿಸಿದ್ದಾಗಿ ಸುಳ್ಳು ಹೇಳಿದ್ದರು. ಅವರು ಬಿಗ್ ಬಾಸ್ ಹೋದಾಗ ಅನೇಕರು ಟೀಕಿಸಿದ್ದರು. ಆದರೆ, ದೊಡ್ಮನೆಗೆ ಹೋದ ಬಳಿಕ ಅವರು ತಮ್ಮ ನಿಜವಾದ ಆಟ ತೋರಿಸಿದರು. ಸೈಲೆಂಟ್ ಆಗಿದ್ದರೂ ಮೆಚ್ಚುಗೆ ಆಗುವ ರೀತಿಯಲ್ಲಿ ಅವರು ಆಟ ಆಡಿದರು. ಈ ಮೂಲಕ ಅನೇಕರಿಗೆ ಅವರು ಅಚ್ಚರಿ ಮೂಡಿಸಿದರು. ಫಿನಾಲೆ ತಲುಪುವಲ್ಲಿ ಅವರು ಮೊದಲಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ