AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್​ನ ಮಾವುತ ಅವಿನಾಶ್​ ಅಲ್ಲ, ಪ್ರತಾಪ್​’; ಹೊಸ ಬಿರುದು ನೀಡಿದ ಸುದೀಪ್

‘ಅವಿ ಅವರೇ ಮಾವುತ ಯಾರಾದ್ರೂ ಅಂತ ಗೊತ್ತಾಯ್ತಾ? ಮಾವುತ ಅಂದರೆ ಆನೆಗೆ ಹುಲ್ಲು ಹಾಕುವವನು. ಹೀಗಾಗಿ, ಮನೆಯ ಹೊಸ ಮಾವುತ ಪ್ರತಾಪ್​. ಇದು ನಾವು ಕೊಡುತ್ತಿರುವುದಲ್ಲ, ನೀವು ಸಂಪಾದಿಸಿದ್ದು’ ಎಂದರು ಸುದೀಪ್. ಪ್ರತಾಪ್​ನ ‘ಮಾವುತ ಸರ್’ ಎಂದು ಕರೆದರು ಮೈಕಲ್.

‘ಬಿಗ್​ ಬಾಸ್​ನ ಮಾವುತ ಅವಿನಾಶ್​ ಅಲ್ಲ, ಪ್ರತಾಪ್​’; ಹೊಸ ಬಿರುದು ನೀಡಿದ ಸುದೀಪ್
ಡ್ರೋನ್​ ಪ್ರತಾಪ್​, ಕಿಚ್ಚ ಸುದೀಪ್​, ವಿನಯ್​ ಗೌಡ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 17, 2023 | 2:04 PM

Share

‘ಬಿಗ್​ ಬಾಸ್​’ಗೆ ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿತ್ತು. ಅವಿನಾಶ್ ಶೆಟ್ಟಿ (Avinash Shetty) ಹಾಗೂ ಪವಿ ಪೂವಪ್ಪ ಬಂದರು. ಅವಿನಾಶ್ ಅವರು ಬರುತ್ತಿದ್ದಂತೆಯೇ ವಿನಯ್ (Vinay Gowda) ಬಗ್ಗೆ ಮಾತನಾಡಿದ್ದರು. ‘ಆನೆಯನ್ನು (ವಿನಯ್) ಪಳಗಿಸೋಕೆ ಮಾವುತ ಬೇಕು ಎಂದು ಜಾಹೀರಾತು ಕೊಟ್ಟಿದ್ದರು, ಅದಕ್ಕೆ ಬಂದಿದ್ದೇನೆ’ ಎಂದಿದ್ದರು ಅವಿನಾಶ್. ಈ ಕಾರಣಕ್ಕೆ ಅವರಿಗೆ ಎಲ್ಲರೂ ಮಾವುತ ಎಂದೇ ಕರೆಯುತ್ತಿದ್ದರು. ಈ ಪಟ್ಟ ಈಗ ಪ್ರತಾಪ್​ಗೆ (Drone Prathap) ಶಿಫ್ಟ್ ಆಗಿದೆ. ವೀಕೆಂಡ್ ಎಪಿಸೋಡ್​​ನಲ್ಲಿ ಈ ಫನ್ ಆ್ಯಕ್ಟಿವಿಟಿ ನಡೆದಿದೆ.

‘ವಿನಯ್​ನ ಪಳಗಿಸೋಕೆ ಬಂದ್ದೀನಿ’ ಎಂದು ಅವಿನಾಶ್ ಅವರು ಯಾವಾಗ ಹೇಳಿದರೋ ಅಲ್ಲಿಂದ ಚರ್ಚೆಗಳು ಶುರುವಾದವು. ಅವಿನಾಶ್ ಅವರನ್ನು ಎಲ್ಲರೂ ಅದೇ ದೃಷ್ಟಿಯಲ್ಲಿ ನೋಡಿದರು. ಆದರೆ, ಅವರಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ, ಸಂತೋಷ್ ಅವರು ಮಾವುತ ಅನ್ನೋದಕ್ಕೆ ಹೊಸ ಅರ್ಥ ಕೊಟ್ಟರು. ‘ಮಾವುತ ಎಂದರೆ ಆನೆಗೆ ಹುಲ್ಲು ಹಾಕುವವನು’ ಎಂದಿದ್ದರು. ಪ್ರತಾಪ್ ಈಗ ವಿನಯ್ ಅವರ ಆರೈಕೆ ಮಾಡಿ ಮಾವುತ ಆಗಿದ್ದಾರೆ.

ಈ ವಾರ ಪ್ರತಾಪ್ ಅವರು ಮುದ್ದೆ ಮಾಡಿದ್ದರು. ಜೈಲು ಸೇರುವ ಸ್ಪರ್ಧಿಗೆ ಕೊಡುವ ರಾಗಿ ಹಿಟ್ಟಿನಲ್ಲಿ ಅವರು ಮುದ್ದೆ ತಯಾರಿಸಿದ್ದರು. ಇದು ಬಿಗ್ ಬಾಸ್ ನಿಯಮದ ಪ್ರಕಾರ ಮಾಡುವ ಹಾಗಿಲ್ಲ. ಹೀಗಾಗಿ, ಶಿಕ್ಷೆ ಪಕ್ಕಾ ಎಂದು ಸ್ಪರ್ಧಿಗಳು ಭಾವಿಸಿದ್ದರು. ಆ ಬಳಿಕ ಬಿಗ್ ಬಾಸ್ ಗ್ಯಾಸ್ ಆಫ್ ಮಾಡಿದರು. ‘ನನಗೆ ಊಟ ಸಿಗದೇ ಇದ್ರೆ ಸರಿ ಇರಲ್ಲ’ ಎಂದು ವಿನಯ್ ಆಗಾಗ ಎಚ್ಚರಿಕೆ ನೀಡುತ್ತಲೇ ಇದ್ದರು. ಈ ವೇಳೆ ಪ್ರತಾಪ್ ಅವರು ವಿನಯ್​​ಗೆ ತಮ್ಮ ಪಾಲಿನ ಮೊಟ್ಟೆ ಕೊಡ್ತೀನಿ, ಹಾಲು ಕೊಡ್ತೀನಿ ಎಂದೆಲ್ಲ ಹೇಳಿದ್ದರು. ವಿನಯ್ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಯತ್ನ ಮಾಡಿದ್ದರಿಂದ ಪ್ರತಾಪ್​ನ ಮಾವುತ ಎಂದು ಕರೆದಿದ್ದಾರೆ ಸುದೀಪ್.

ಇದನ್ನೂ ಓದಿ: ‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ’; ಕಣ್ಣೀರು ಹಾಕಿದ ನಮ್ರತಾ

‘ಪ್ರತಾಪ್ ಅವರು ಇರೋಬರೋ ದೇವರ ನೆನಪಿಸಿಕೊಳ್ಳುವ ಬದಲು ಮನೆಯಲ್ಲಿರುವ ವಿನಾಯಕನ್ನ (ವಿನಯ್​) ನೆನಪಿಸಿಕೊಳ್ಳುತ್ತಿದ್ದರು. ನಾನು ಊಟ ಸಿಗಲಿಲ್ಲ ಅಂದರೆ ಯಾರಿಗೂ ಮಲಗೋಕೆ ಬಿಡಲ್ಲ ಎಂದು ವಿನಯ್ ಹೇಳುತ್ತಲೇ ಇದ್ದರು. ಎಲ್ಲಿಂದಾದರೂ ಒಂದು ಡ್ರೋನ್ ಬಂದು ಎತ್ತಾಕ್ಕಂಡು ಹೋಗಬೇಕು ಅನಿಸಿತ್ತ’ ಎಂದು ಕೇಳಿದರು ಸುದೀಪ್​. ಇದಕ್ಕೆ ಹೌದು ಎನ್ನುವ ಉತ್ತರ ಕೊಟ್ಟರು ಪ್ರತಾಪ್.

‘ನಂಗೆ ಏನು ಮಾಡಬೇಕು ಅಂತಾನೇ ಗೊತ್ತಾಗುತ್ತಿರಲಿಲ್ಲ. ನನ್ನ ಬಳಿ ಇದ್ದಿದ್ದ ಬಾಳೆ ಹಣ್ಣನ್ನು ತೆಗೆದುಕೊಂಡು ಹೋಗಿ ಕೊಟ್ಟೆ. ಆ ಬಳಿಕ ಹಾಲು ನೀಡಿದೆ. ಆದರೆ, ಅವರು ತೆಗೆದುಕೊಳ್ಳಲಿಲ್ಲ. ಗ್ಯಾಸ್ ಹತ್ತಿಸಲು ಪ್ರಯತ್ನಿಸಿದೆ. ಗ್ಯಾಸ್ ಬರಲಿಲ್ಲ’ ಎಂದರು ಪ್ರತಾಪ್. ‘ಅವಿ ಅವರೇ ಮಾವುತ ಯಾರಾದ್ರೂ ಅಂತ ಗೊತ್ತಾಯ್ತಾ? ಮಾವುತ ಅಂದರೆ ಆನೆಗೆ ಹುಲ್ಲು ಹಾಕುವವನು. ಹೀಗಾಗಿ, ಮನೆಯ ಹೊಸ ಮಾವುತ ಪ್ರತಾಪ್​. ಇದು ನಾವು ಕೊಡುತ್ತಿರುವುದಲ್ಲ, ನೀವು ಸಂಪಾದಿಸಿದ್ದು. ಮಾವುತ ಕಿದರ್​ ಹೈ ತೋ ಬಗಲ್​ ಮೇ ಹೈ’ ಎಂದರು ಸುದೀಪ್. ಪ್ರತಾಪ್​ನ ‘ಮಾವುತ ಸರ್’ ಎಂದು ಕರೆದರು ಮೈಕಲ್.

ಇದನ್ನೂ ಓದಿ: ಬಕೆಟ್​ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್​ ಸುತ್ತಿಗೆ ಏಟು; ಬಿಗ್ ಬಾಸ್​ ಸದಸ್ಯರಿಗೆ ದೊಡ್ಡ ಶಾಕ್​

ಶನಿವಾರದ ಎಪಿಸೋಡ್ ಯಾವಾಗಲೂ ಪೂರ್ತಿಯಾಗಿ ಗಂಭೀರವಾಗಿರುತ್ತದೆ. ಆದರೆ, ಈ ಬಾರಿ ಗಂಭೀರತೆ ಹಾಗೂ ಫನ್ ಎರಡೂ ಕೂಡಿತ್ತು. ಈ ವಾರದ ಎಪಿಸೋಡ್​ಗಳು ಫನ್ ಆಗಿದ್ದವು. ಅಲ್ಲಿ ಯಾವುದೇ ಫೈಟ್ ಹಾಗೂ ಜಗಳ ನಡೆದಿಲ್ಲ. ಈ ಕಾರಣಕ್ಕೆ ವೀಕೆಂಡ್ ಎಪಿಸೋಡ್ ಕೂಡ ಫನ್​ನಿಂದ ಕೂಡಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!