AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಓಡಿ ಹೋಗೋಕೆ ನಿರ್ಧರಿಸಿದ್ದ ಬಿಗ್ ಬಾಸ್; ಕಾರಣ ತಿಳಿಸಿದ ಕಿಚ್ಚ

ಬಿಗ್​ ಬಾಸ್​ ಹೇಗಿರಬಹುದು ಎಂಬದನ್ನು ಕಲ್ಪಿಸಿಕೊಂಡು ಚಿತ್ರ ಬಿಡಿಸಲು ಅವಕಾಶ ನೀಡಲಾಯಿತು. ಒಬ್ಬೊಬ್ಬರು ಒಂದೊಂದು ರೀತಿಯ ಕಲ್ಪನೆ ಮಾಡಿಕೊಂಡರು. ಇದರಿಂದ ಬಿಗ್ ಬಾಸ್ ಬೇಸರಗೊಂಡಿದ್ದಾರಂತೆ.

Bigg Boss Kannada: ಓಡಿ ಹೋಗೋಕೆ ನಿರ್ಧರಿಸಿದ್ದ ಬಿಗ್ ಬಾಸ್; ಕಾರಣ ತಿಳಿಸಿದ ಕಿಚ್ಚ
ಸುದೀಪ್​
ರಾಜೇಶ್ ದುಗ್ಗುಮನೆ
|

Updated on: Dec 18, 2023 | 7:27 AM

Share

ಬಿಗ್ ಬಾಸ್​ನ (Bigg Boss) ಭಾನುವಾರದ ಎಪಿಸೋಡ್ ಸಖತ್ ಫನ್ ಆಗಿರುತ್ತದೆ. ಕಳೆದ ವಾರದ ಎಪಿಸೋಡ್ ಕೂಡ ಸಾಕಷ್ಟು ಎಂಟರ್​ಟೇನಿಂಗ್​ ಆಗಿತ್ತು. ಈಗ ಸುದೀಪ್ (Sudeep) ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಓಡಿ ಹೋಗೋಕೆ ನಿರ್ಧರಿಸಿದ್ದರಂತೆ. ಇದಕ್ಕೆ ಕಾರಣ ಏನು ಎಂಬುದನ್ನು ಸುದೀಪ್ ಅವರು ವಿವರಿಸಿದ್ದಾರೆ. ಇದನ್ನು ಕೇಳಿ ಎಲ್ಲರೂ ನಕ್ಕಿದ್ದಾರೆ. ಜೊತೆಗೆ ಬಿಗ್​ ಬಾಸ್​ಗೆ ಸ್ಪರ್ಧಿಗಳು ಕ್ಷಮೆ ಕೇಳಿದ್ದಾರೆ.

ಕಳೆದ ವಾರ ಮಕ್ಕಳಿಗೆ ಸ್ಕೂಲ್ ಟಾಸ್ಕ್ ನೀಡಲಾಯಿತು. ಎಲ್ಲರೂ ಮಕ್ಕಳಂತೆ ಆಗಿದ್ದರು. ಈ ವೇಳೆ ಬಿಗ್​ ಬಾಸ್​ ಹೇಗಿರಬಹುದು ಎಂಬದನ್ನು ಕಲ್ಪಿಸಿಕೊಂಡು ಚಿತ್ರ ಬಿಡಿಸಲು ಅವಕಾಶ ನೀಡಲಾಯಿತು. ಒಬ್ಬೊಬ್ಬರು ಒಂದೊಂದು ರೀತಿಯ ಕಲ್ಪನೆ ಮಾಡಿಕೊಂಡರು. ತುಕಾಲಿ ಸಂತೋಷ್ ಅವರಂತೂ ಕಲ್ಪನೆಯ ತುತ್ತತುದಿಗೆ ಹೋಗಿ ಮೊಟ್ಟೆ ಇಡುವ ಕೋಳಿಯನ್ನು ಬಿಡಿಸಿದ್ದರು. ‘ಬಿಗ್ ಬಾಸ್​ 17 ಮೊಟ್ಟೆಗಳನ್ನು ಇಟ್ಟು, ಕಾವುಕೊಟ್ಟು ಮರಿ ಮಾಡಿ ಅವುಗಳನ್ನು ಬೆಳೆಸುವ ಕೆಲಸ ಮಾಡುತ್ತಾರೆ’ ಎಂದು ಅದಕ್ಕೆ ವಿವರಣೆ ನೀಡಿದರು. ಈ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

‘ನೀವು ಈ ವಾರ ಬಿಗ್ ಬಾಸ್ ಹೇಗಿರುತ್ತಾರೆ ಎಂಬುದನ್ನು ಬಿಡಿಸಿದ್ದನ್ನು ನೋಡಿ ಸ್ವತಃ ಬಿಗ್ ಬಾಸ್ ಕಂಗಾಲಾದರು. ಅವರು ಕಂಪೌಡ್ ಹಾರಿ ಜಿಗಿದು ಹೋಗುವವರಿದ್ದರು. ನಾವು ಅವರನ್ನು ತಡೆ ಹಿಡಿದು ಸಮಾಧಾನ ಮಾಡಿದೆವು. ಏನೋ ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡೆವು’ ಎಂದು ಸುದೀಪ್ ಹೇಳಿದರು. ಇದನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ: ‘ಈ ರೀತಿ ಬದುಕಿರೋಕಾಗಲ್ಲ, ಮನೆಗೆ ಕಳುಹಿಸಿ’; ಬಿಗ್ ಬಾಸ್ ಎದುರು ವಿನಯ್ ಹೊಸ ಬೇಡಿಕೆ

ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡಬಹುದು. ಭಾನುವಾರದ (ಡಿಸೆಂಬರ್ 17) ಎಪಿಸೋಡ್​ನಲ್ಲಿ ಪವಿ ಪೂವಪ್ಪ ಎಲಿಮಿನೇಟ್ ಆಗಿದ್ದಾರೆ. ಎಲ್ಲರೂ ಇದನ್ನು ನಿರೀಕ್ಷಿಸಿದ್ದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರಿಗೆ ಮೋಡಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕೆಲವೇ ವಾರಗಳಲ್ಲಿ ಅವರು ಔಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್