ಬಿಗ್​ಬಾಸ್ ಮನೆಗೆ ಬಂತು ಖಾಲಿ ಕಾರು, ಹೊರ ಹೋಗಿದ್ದು ಯಾರು?

ಬಿಗ್​ಬಾಸ್ ಕನ್ನಡ ಸೀಸನ್ 11ರ ವೀಕೆಂಡ್ ಪಂಚಾಯಿತಿಗೆ ಈ ವಾರ ಸುದೀಪ್ ಬಂದಿಲ್ಲ. ಹಾಗಾಗಿ ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಮನೆಗೆ ಬಂದಿದ್ದರು. ಭಾನುವಾರದ ಎಪಿಸೋಡ್​ಗೆ ಹೊಸ ಅತಿಥಿ ಬಂದಿದ್ದು ತಮ್ಮೊಟ್ಟಿಗೆ ಕಾರುಗಳನ್ನು ಸಹ ಕರೆತಂದಿದ್ದಾರೆ.

ಬಿಗ್​ಬಾಸ್ ಮನೆಗೆ ಬಂತು ಖಾಲಿ ಕಾರು, ಹೊರ ಹೋಗಿದ್ದು ಯಾರು?
Follow us
|

Updated on: Oct 27, 2024 | 8:15 AM

ಬಿಗ್​ಬಾಸ್ ಕನ್ನಡ ಸೀಸನ್ 11ರ ವೀಕೆಂಡ್ ಪಂಚಾಯಿತಿಗೆ ಈ ಬಾರಿ ಸುದೀಪ್ ಬಂದಿಲ್ಲ. ಕಳೆದ ಶನಿವಾರ ಸುದೀಪ್ ಅವರ ತಾಯಿ ಸರೋಜಮ್ಮ ನಿಧನರಾದ ಕಾರಣ ಸುದೀಪ್ ಆ ನಂತರದ ತಮ್ಮ ಎಲ್ಲ ಚಿತ್ರೀಕರಣ, ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಈ ವೀಕೆಂಡ್​ನ ವಾರದ ಪಂಚಾಯಿತಿಗೆ ಸಹ ಸುದೀಪ್ ಬಂದಿಲ್ಲ. ಹಾಗಾಗಿ ಬಿಗ್​ಬಾಸ್ ಆಯೋಜಕರು ಇಬ್ಬರು ಅತಿಥಿಗಳನ್ನು ಮನೆಯ ಒಳಕ್ಕೆ ಕಳಿಸಿದ್ದಾರೆ. ಶನಿವಾರದ ಎಪಿಸೋಡ್​ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಬಂದಿದ್ದರು. ಮನೆಯ ಸದಸ್ಯರ ಕೈಲಿ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡಿದ್ದರು. ಕೆಲವರಿಗೆ ಬುದ್ಧಿವಾದ ಹೇಳಿದ್ದರು. ಭಾನುವಾರದ ಎಪಿಸೋಡ್​ಗೆ ಸೃಜನ್ ಬಂದಿದ್ದಾರೆ.

ಈ ಹಿಂದೆ ಸೃಜನ್ ಲೋಕೇಶ್ ಬಿಗ್​ಬಾಸ್​ ಸ್ಪರ್ಧಿಯಾಗಿ ಬಂದಿದ್ದರು. ಈ ಬಾರಿ ಅತಿಥಿಯಾಗಿ ಬಂದಿದ್ದಾರೆ. ಮನೆಗೆ ಬಂದಿರುವ ಸೃಜನ್ ಲೋಕೇಶ್ ಖಾಲಿ ಕೈನಲ್ಲಿ ಬಂದಿಲ್ಲ ತಮ್ಮೊಟ್ಟಿಗೆ ಎರಡು ಟಾಟಾ ಕರ್ವ್ ಕಾರುಗಳನ್ನು ಸಹ ತಂದಿದ್ದರು. ಮನೆಗೆ ಬಂದಿದ್ದ ಖಾಲಿ ಕಾರುಗಳು ಎಲಿಮಿನೇಟ್ ಆದ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿವೆ. ಆದರೆ ಆ ಸ್ಪರ್ಧಿ ಯಾರು?

ಬಿಗ್​ಬಾಸ್ ಮನೆಗೆ ಬಂದ ಸೃಜನ್ ಮೊದಲಿಗೆ ಸ್ಪರ್ಧಿಗಳಿಗೆ ವಿವಿಧ ಟಾಸ್ಕ್​ಗಳನ್ನು ನೀಡಿದ್ದಾರೆ. ಕೆಲವು ತಮಾಷೆಯ ಆಟಗಳನ್ನು ಆಡಿಸಿದ್ದಾರೆ. ಆ ನಂತರ ಮನೆಯಿಂದ ಯಾರು ಹೊರಗೆ ಹೋಗಬೇಕು ಮತ್ತು ಏಕೆ? ಕಾರಣ ನೀಡಿ ಎಂದು ಸ್ಪರ್ಧಿಗಳಲ್ಲಿ ಹೇಳಿದ್ದಾರೆ ಅದರಂತೆ ಐಶ್ವರ್ಯಾ ಸೇರಿದಂತೆ ಇನ್ನು ಕೆಲವರು ವಿಕ್ರಂ ಹೆಸರು ಹೇಳಿದ್ದಾರೆ. ಕೆಲವರು ಉಗ್ರಂ ಮಂಜು ಹೆಸರು ಹೇಳಿದ್ದಾರೆ. ಹೀಗೆ ಒಬ್ಬೊಬ್ಬರು ಒಬ್ಬರ ಹೆಸರು ಹೇಳಿದ್ದಾರೆ. ಕೊನೆಗೆ ಮತಗಳ ಆಧಾರದಲ್ಲಿ ಒಬ್ಬ ಸ್ಪರ್ಧಿಯನ್ನು ಇಂದು ಬಿಗ್​ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಕಾಲಿಟ್ಟ ಯೋಗರಾಜ್ ಭಟ್, ಮನೆಯಲ್ಲಿ ನಗುವೋ ನಗು

ಬಿಗ್​ಬಾಸ್ ನಲ್ಲಿ ಕಳೆದ ವಾರ ಯಾರೂ ಸಹ ಎಲಿಮಿನೇಟ್ ಆಗಿರಲಿಲ್ಲ. ಸಾಮಾನ್ಯವಾಗಿ ಭಾನುವಾರ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಾಗುತ್ತದೆ. ಆದರೆ ಸುದೀಪ್ ಅವರು ಭಾನುವಾರದ ಎಪಿಸೋಡ್​ಗೆ ಬರಲಿಲ್ಲವಾದ್ದರಿಂದ ಯಾರೂ ಸಹ ಎಲಿಮಿನೇಟ್ ಆಗಿರಲಿಲ್ಲ. ಈ ವಾರವೂ ಸಹ ಸುದೀಪ್ ಅವರು ಬರಲಿಲ್ಲವಾದ್ದರಿಂದ ಈ ವಾರವೂ ಯಾರೂ ಎಲಿಮಿನೇಟ್ ಆಗಲ್ಲ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ ಈ ವಾರ ಎಲಿಮಿನೇಷನ್ ನಡೆದಿದೆ. ಆದರೆ ಯಾರು ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿಯಲು ರಾತ್ರಿ ಪ್ರಸಾರವಾಗುವ ಎಪಿಸೋಡ್ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಭೀಕರ ಸ್ಫೋಟಕ್ಕೆ ಪಾಕಿಸ್ತಾನ ಕ್ವೆಟ್ಟಾ ರೈಲು ನಿಲ್ದಾಣ ಛಿದ್ರ: ವಿಡಿಯೋ ನೋಡಿ
ಭೀಕರ ಸ್ಫೋಟಕ್ಕೆ ಪಾಕಿಸ್ತಾನ ಕ್ವೆಟ್ಟಾ ರೈಲು ನಿಲ್ದಾಣ ಛಿದ್ರ: ವಿಡಿಯೋ ನೋಡಿ
ಸಿದ್ದರಾಮಯ್ಯ ನಡೆಸುತ್ತಿರೋದು 90 ಪರ್ಸೆಂಟ್ ಕಮೀಶನ್ ಸರ್ಕಾರ: ಯತ್ನಾಳ್
ಸಿದ್ದರಾಮಯ್ಯ ನಡೆಸುತ್ತಿರೋದು 90 ಪರ್ಸೆಂಟ್ ಕಮೀಶನ್ ಸರ್ಕಾರ: ಯತ್ನಾಳ್
ಸ್ಯಾಮ್ಸನ್​ನ ಕೆಣಕಿದ ಯಾನ್ಸೆನ್​ಗೆ ಚಳಿ ಬಿಡಿಸಿದ ಸೂರ್ಯಕುಮಾರ್ ಯಾದವ್
ಸ್ಯಾಮ್ಸನ್​ನ ಕೆಣಕಿದ ಯಾನ್ಸೆನ್​ಗೆ ಚಳಿ ಬಿಡಿಸಿದ ಸೂರ್ಯಕುಮಾರ್ ಯಾದವ್
ನನ್ನ ತಾಕತ್ತಿನ ಬಗ್ಗೆ ಮಾತಾಡುವ ಯೋಗ್ಯತೆ ಶೋಭಾ ಕರಂದ್ಲಾಜೆಗಿಲ್ಲ: ಎಸ್ಟಿಎಸ್
ನನ್ನ ತಾಕತ್ತಿನ ಬಗ್ಗೆ ಮಾತಾಡುವ ಯೋಗ್ಯತೆ ಶೋಭಾ ಕರಂದ್ಲಾಜೆಗಿಲ್ಲ: ಎಸ್ಟಿಎಸ್