
ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಹಾಗೂ ಸೂರಜ್ ಅವರು ಒಟ್ಟಾಗಿ ಇದ್ದರು. ಇವರ ಮಧ್ಯೆ ಪ್ರೀತಿ ಇದೆ ಎಂದೆಲ್ಲ ಸುದ್ದಿ ಹಬ್ಬುವಷ್ಟು ಇವರು ಆಪ್ತವಾಗಿದ್ದರು ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ, ರಾಶಿಕಾ ಅವರು ಕ್ಯಾಪ್ಟನ್ ಆದ ಬಳಿಕ ಎಲ್ಲವೂ ಬದಲಾಗಿಬಿಟ್ಟಿತ್ತು. ರಾಶಿಕಾ ಹಾಗೂ ಸೂರಜ್ ಮಧ್ಯೆ ಕಿರಿಕ್ ಆಗಿದೆ. ಅದು ಸಾಕಷ್ಟು ತೀರಾನೇ ಆಳಕ್ಕೆ ಹೋಗಿದೆ ಎಂದರೂ ತಪ್ಪಾಗಲಾರದು. ಇವರ ಕಿತ್ತಾಟಕ್ಕೆ ಕಾರಣ ಏನು? ಆ ಬಗ್ಗೆ ಇಲ್ಲಿ ಇದೆ ವಿವರ.
ಈ ವಾರ ರಾಶಿಕಾ ಅವರು ಕ್ಯಾಪ್ಟನ್ ಆದರು. ಈ ಆಟದಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದು ಚೈತ್ರಾ ಅವರಾಗಿತ್ತು. ಚೈತ್ರಾ ಅವರು ಸರಿಯಾಗಿ ಉಸ್ತುವಾರಿ ಮಾಡಿದ್ದಾರೆ ಎಂಬ ವಾದ ಸೂರಜ್ ಅವರದ್ದಾಗಿತ್ತು. ಇದನ್ನು ಸೂರಜ್ ಅವರು ಮನಸ್ಸಿನಲ್ಲೇ ಇಟ್ಟುಕೊಂಡಿದ್ದರು. ಮನಸ್ಸಿನಲ್ಲಿ ಇದ್ದಿದ್ದನ್ನು ನೇರವಾಗಿ ಹೇಳಿಲ್ಲ ಸೂರಜ್.
ಸೂರಜ್ ಅವರು ಮೈಕ್ ಹಾಕದ ಕಾರಣದಿಂದ ಕ್ಯಾಪ್ಟನ್ ರಾಶಿಕಾ ಶಿಕ್ಷೆ ಕೊಡಲು ಹೋದರು. ಆದರೆ, ಇದಕ್ಕೆ ಸೂರಜ್ ಅವರು ಧಿಮಾಕಿನಿಂದ ಮಾತನಾಡಿದರು. ‘ನಾನು ನೀರಿಗೆ ಇಳಿಯಲ್ಲ’ ಎಂದರು. ಇದಕ್ಕೆ ಕಾರಣ ಏನು ಎಂಬುದು ರಾಶಿಕಾಗೆ ಗೊತ್ತಾಗಲಿಲ್ಲ. ಆ ಬಳಿಕ ಸಿಟ್ಟಿನಿಂದ ಹೋಗಿ ರಾಶಿಕಾ ಅವರು ಸೂರಜ್ನ ಬಟ್ಟೆಯನ್ನು ಸ್ವಿಮಿಂಗ್ಪೂಲ್ಗೆ ಹಾಕಿದರು. ಆ ಬಳಿಕ ಸಿಟ್ಟಾದರು ಸೂರಜ್.
ಸ್ವಿಮ್ಮಿಂಗ್ ಪೂಲ್ ಬಳಿ ‘ನಾನು ಬಂದಾಗ ನನ್ನ ಜೊತೆ, ಬೇರೆಯವರು ಬಂದಾಗ ಮತ್ತೊಬ್ಬರ ಜೊತೆ ಇರ್ತಾರೆ’ ಎಂಬ ಮಾತನ್ನು ಹೇಳಿದ್ದರು. ಅಲ್ಲದೆ, ‘ರಾಶಿಕಾ ಮಾತನಾಡಿದ್ದು ಇಷ್ಟ ಆಗಿಲ್ಲ’ ಎಂದಿದ್ದರು. ಈ ಮಾತು ರಾಶಿಕಾಗೆ ಸಾಕಷ್ಟು ಬೇಸರ ಮೂಡಿಸಿದೆ. ‘ಈ ಮಾತು ಎಷ್ಟು ಸರಿ? ನಾನು ಬಂದಾಗ ನನ್ನ ಜೊತೆ, ಬೇರೆಯವರು ಬಂದಾಗ ಮತ್ತೊಬ್ಬರ ಜೊತೆ ಮಾತಾಡ್ತೀರಲ್ಲ. ನಿಮ್ಮ ಅಕ್ಕ ತಂಗಿ ಇದ್ರೆ ಹೀಗೆ ಮಾತಾಡ್ತೀರಾ’ ಎಂದರು ರಾಶಿಕಾ. ಆ ಬಳಿಕ ಅವರು ಕಣ್ಣೀರು ಹಾಕಿದರು.
ಇದನ್ನೂ ಓದಿ: ವೈಲ್ಡ್ ಕಾರ್ಡ್ ಎಂಟ್ರಿಗಳಿಗೆ ವೈಲ್ಡ್ ಆಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ
ಸೂರಜ್ ಮಾತನಾಡಿದ್ದು ತುಂಬಾನೇ ಕೀಳಾಗಿದೆ ಎಂದು ರಾಶಿಕಾ ಅಭಿಪ್ರಾಯಪಟ್ಟರು. ರಾಶಿಕಾ ಅವರು ಮಾತನಾಡಿದ್ದು ತುಂಬಾನೇ ಚುಚ್ಚಿದೆ. ಆ ಬಳಿಕ ನಿರಂತರವಾಗಿ ಕಣ್ಣೀರು ಹಾಕಿದರು. ಆ ಬಳಿಕ ಮನೆಯವರೆಲ್ಲ ಬಂದು ಚರ್ಚೆ ಮಾಡುವಂತೆ ಹೇಳಿ ಇಬ್ಬರ ಮಧ್ಯೆ ಸಮಾಧಾನಪಡಿಸಿದರು. ‘ನಾನು ಅಷ್ಟು ಕೆಟ್ಟ ಅರ್ಥದಲ್ಲಿ ಹೇಳಿಲ್ಲ’ ಎಂದರು ಸೂರಜ್. ಆ ಬಳಿಕ ಇಬ್ಬರ ಮಧ್ಯೆ ಸಂಧಾನ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.