ಬಿಗ್ ಬಾಸ್ ಸ್ಪರ್ಧಿಗಳು ಎಂದಿಗೂ ಮರೆಯದ ಉಪಕಾರ ಮಾಡಿದ ನಟಿ ತಾರಾ

ತಾರಾ ಅವರ ಮಾತಿಗೆ ಬಿಗ್ ಬಾಸ್ ತಲೆದೂಗಿಸಿದ್ದಾರೆ. ಮನೆಯಲ್ಲಿ ತರಕಾರಿ, ಕಾಫಿ ಪೌಡರ್, ಉಪ್ಪು ಎಲ್ಲವೂ ಖಾಲಿ ಆಗಿತ್ತು. ಈ ವಿಚಾರ ಕೇಳಿ ತಾರಾ ನೊಂದುಕೊಂಡರು. ಹೀಗಾಗಿ, ಅವರು ಬಿಗ್ ಬಾಸ್ ಬಳಿ ಈ ಬಗ್ಗೆ ಮನವಿ ಮಾಡಿದರು. ಇದಕ್ಕೆ ಬಿಗ್ ಬಾಸ್ ಸಮ್ಮತಿಸಿದರು.

ಬಿಗ್ ಬಾಸ್ ಸ್ಪರ್ಧಿಗಳು ಎಂದಿಗೂ ಮರೆಯದ ಉಪಕಾರ ಮಾಡಿದ ನಟಿ ತಾರಾ
ತಾರಾ
Follow us
ರಾಜೇಶ್ ದುಗ್ಗುಮನೆ
|

Updated on:Oct 25, 2023 | 7:40 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂರನೇ ವಾರಕ್ಕೆ ಕಾಲಿಟ್ಟಿದೆ. 14 ಸ್ಪರ್ಧಿಗಳ ಮಧ್ಯೆ ದೊಡ್ಮನೆಯಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಎಂಟು ಮಂದಿ ನಾಮಿನೇಟ್ ಆಗಿದ್ದು, ಆ ಪೈಕಿ ಒಬ್ಬರು ಈ ವಾರ ಔಟ್ ಆಗಲಿದ್ದಾರೆ. ಈ ಮಧ್ಯೆ ನಟಿ ತಾರಾ ಅವರು ಬಿಗ್ ಬಾಸ್ ಮನೆಗೆ ಅತಿಥಿ ಆಗಿ ಬಂದಿದ್ದರು. ಅವರು ಬಿಗ್ ಬಾಸ್ (Bigg Boss) ಸ್ಪರ್ಧಿಗಳಿಗೆ ದೊಡ್ಡ ಸಹಾಯ ಮಾಡಿದ್ದಾರೆ. ಈ ಸಹಾಯವನ್ನು ಮನೆ ಮಂದಿ ಮರೆಯಲು ಸಾಧ್ಯವೇ ಇಲ್ಲ. ಅಕ್ಟೋಬರ್ 24ರ ಎಪಿಸೋಡ್​ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.

ಸ್ಪರ್ಧಿಗಳ ಮಾತನ್ನು ಬಿಗ್ ಬಾಸ್ ಕೇಳುವುದಿಲ್ಲ. ಇಲ್ಲಿ ಬಿಗ್ ಬಾಸ್ ಆದೇಶವೇ ಅಂತಿಮ. ಆದರೆ, ತಾರಾ ಅವರ ಮಾತಿಗೆ ಬಿಗ್ ಬಾಸ್ ತಲೆದೂಗಿಸಿದ್ದಾರೆ. ಮನೆಯಲ್ಲಿ ತರಕಾರಿ, ಕಾಫಿ ಪೌಡರ್, ಉಪ್ಪು ಎಲ್ಲವೂ ಖಾಲಿ ಆಗಿತ್ತು. ಈ ವಿಚಾರ ಕೇಳಿ ತಾರಾ ನೊಂದುಕೊಂಡರು. ಹೀಗಾಗಿ, ಅವರು ಬಿಗ್ ಬಾಸ್ ಬಳಿ ಈ ಬಗ್ಗೆ ಮನವಿ ಮಾಡಿದರು. ಇದಕ್ಕೆ ಬಿಗ್ ಬಾಸ್ ಸಮ್ಮತಿಸಿದರು.

‘ಕಾಫಿ ಪೌಡರ್ ಲಕ್ಷುರಿ ವಸ್ತು. ಹೀಗಾಗಿ, ಅದನ್ನು ಕಳಿಸೋಕೆ ಸಾಧ್ಯವಿಲ್ಲ. ಉಳಿದ ಎಲ್ಲಾ ಐಟಂಗಳನ್ನು ನಾವು ಕಳುಹಿಸುತ್ತೇವೆ’ ಎಂದು ಬಿಗ್ ಬಾಸ್ ಹೇಳಿದರು. ಇದನ್ನು ಕೇಳಿ ಮನೆ ಮಂದಿ ಸಖತ್ ಖುಷಿಪಟ್ಟರು. ಕೆಲವೇ ನಿಮಿಷಗಳಲ್ಲಿ ಸ್ಟೋರೂಂಗೆ ತರಕಾರಿ, ಉಪ್ಪು ಬಂತು. ಬೇಕಷ್ಟು ತರಕಾರಿಗಳನ್ನು ಬಿಗ್ ಬಾಸ್ ಕಳುಹಿಸಿಕೊಟ್ಟರು. ‘ತಾರಾ ಅವರೇ ಧನ್ಯವಾದ. ಬಿಗ್ ಬಾಸ್ ಮಾರ್ಕೆಟ್​ನೇ ಕಳುಹಿಸಿಕೊಟ್ಟಿದ್ದಾರೆ’ ಎಂದು ಮನೆ ಮಂದಿಯೆಲ್ಲ ಖುಷಿಯಿಂದ ಸಂಭ್ರಮಿಸಿದರು.

ಇದನ್ನೂ ಓದಿ: ಬಿಗ್ ಬಾಸ್​ ಮನೆಯಲ್ಲಿ ಶಾಕ್ ಮತ್ತು ಸರ್​ಪ್ರೈಸ್; ಹಿರಿಯ ನಟಿಯ ಎಂಟ್ರಿ

ಬಿಗ್ ಬಾಸ್ ಮನೆಯಲ್ಲಿ ಸಂಭ್ರಮದಿಂದ ನವರಾತ್ರಿ ಹಬ್ಬ ಆಚರಿಸಲಾಗಿದೆ. ಈ ಆಚರಣೆಗೆಂದೇ ತಾರಾ ಅವರು ಆಗಮಿಸಿದ್ದರು. ಅವರು ಮಾಡಿದ ಉಪಕಾರಕ್ಕೆ ಮನೆ ಮಂದಿ ಸಖತ್ ಖುಷಿಪಟ್ಟಿದ್ದಾರೆ. ಈ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:29 am, Wed, 25 October 23

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್