ರಿಯಾಲಿಟಿ ಶೋಗಳ ಪೈಕಿ ಅತಿ ಹೆಚ್ಚು ಕ್ರೇಜ್ ಹುಟ್ಟುಹಾಕಿರುವ ಶೋ ಎಂದರೆ ಅದು ಬಿಗ್ ಬಾಸ್. ಮೊದಲು ಹಿಂದಿಯಲ್ಲಿ ಮಾತ್ರ ಪ್ರಸಾರ ಆಗುತ್ತಿದ್ದ ಈ ಕಾರ್ಯಕ್ರಮ ನಂತರದ ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಆರಂಭ ಆಯಿತು. ಕನ್ನಡ ಬಿಗ್ ಬಾಸ್ ಯಶಸ್ವಿಯಾಗಿ 8 ಸೀಸನ್ಗಳನ್ನು ಮುಗಿಸಿದೆ. ತೆಲುಗು ಬಿಗ್ ಬಾಸ್ 4 ಸೀಸನ್ ಪೂರೈಸಿದ್ದು, ಈಗ 5ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರು ಆಗಿದೆ. ಇಂದು (ಸೆ.5) ಸಂಜೆ 6 ಗಂಟೆಗೆ ಶೋ ಆರಂಭ ಆಗಲಿದೆ. ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರು ಎಂದಿನ ಜೋಶ್ನಲ್ಲಿ ಶೋ ಶುರುಮಾಡಲಿದ್ದಾರೆ. ಅದಕ್ಕೂ ಮುನ್ನವೇ 15 ಸ್ಪರ್ಧಿಗಳ ಹೆಸರು ಲೀಕ್ ಆಗಿದೆ.
ಸಿನಿಮಾ ಮತ್ತು ಕಿರುತೆರೆ ಸೆಲೆಬ್ರಿಟಿಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ವ್ಯಕ್ತಿಗಳಿಗೂ ಈ ಬಾರಿ ತೆಲುಗು ಬಿಗ್ ಬಾಸ್ ಚಾನ್ಸ್ ನೀಡಿದೆ. ಹಾಗಾಗಿ ಈ ಹೊಸ ಸೀಸನ್ನಲ್ಲಿ ಹೆಚ್ಚು ಡ್ರಾಮಾ ಮತ್ತು ಮನರಂಜನೆಯನ್ನು ನಿರೀಕ್ಷಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಶೋನ ಚಾರ್ಮ್ ಹೆಚ್ಚುತ್ತಿದೆ. ಈ ಬಾರಿ ತುಂಬ ಬೋಲ್ಡ್ ಆದಂತಹ ಟಾಸ್ಕ್ಗಳನ್ನು ನೀಡಲಾಗುತ್ತದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಆ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಬಿಗ್ ಬಾಸ್ ಸೀಸನ್ 5ರಲ್ಲಿ ಹಣಾಹಣಿ ನಡೆಸಲಿರುವ ಸೆಲೆಬ್ರಿಟಿಗಳು ಯಾರು? ಕಿರುತೆರೆ ಆ್ಯಂಕರ್ ರವಿ, ನಟ ಕಮ್ ವಿಜೆ ಸನ್ನಿ, ನಟ ಮಾನಸ್ ನಾಗುಲಪಲ್ಲಿ, ಕಿರುತೆರೆ ನಟಿ ಉಮಾ ದೇವಿ, ಸುಮಧುರ ಧ್ವನಿಯಿಂದ ಫೇಮಸ್ ಆಗಿರುವ ಆರ್ಜೆ ಕಾಜಲ್, ಬಹುಭಾಷಾ ನಟಿ ಶೈಲಜಾ ಪ್ರಿಯಾ, ಸೋಶಿಯಲ್ ಮೀಡಿಯದಲ್ಲಿ ಫೇಮಸ್ ಆಗಿರುವ ಷಣ್ಮುಖ್, ಕೊರಿಯೋಗ್ರಾಫರ್ ಅನೀ ಮಾಸ್ಟರ್, ಗಾಯಕ ಕಮ್ ನಟ ಶ್ರೀರಾಮ್ ಚಂದ್ರ, ಕಿರುತೆರೆ ನಟ ವಿಶ್ವ, ನಟಿ ಸಿರಿ ಹನುಮಂತ್, ಟಾಲಿವುಡ್ ನಟಿ ಲಹರಿ ಶಾರಿ, ಮಾಡೆಲ್ ಜಸ್ವಂತ್ ಹೆಸರುಗಳು ಕೇಳಿಬಂದಿದೆ.
The BIGG day is here! Get ready for 5-much entertainment…Ikkada kick tonnullo vastundi ?️ #BiggBossTelugu5 starting today at 6 PM on #StarMaa pic.twitter.com/HasK9Xwn7F
— starmaa (@StarMaa) September 5, 2021
ಅಂತಿಮವಾಗಿ ಯಾರೆಲ್ಲ ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರೆ ಎಂಬುದು ಇಂದು ಸಂಜೆ 6 ಗಂಟೆಗೆ ಜಗಜ್ಜಾಹೀರಾಗಲಿದೆ. ಸ್ಟಾರ್ ಮಾ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗಲಿದೆ.
ಇದನ್ನೂ ಓದಿ:
ಸೆನ್ಸಾರ್ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್ ನೀಡಿದ ಸನ್ನಿ ಲಿಯೋನ್; ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್
ಬಿಗ್ ಬಾಸ್ ನಿರೂಪಕನನ್ನೇ ಎದುರು ಹಾಕಿಕೊಂಡ ಸ್ಪರ್ಧಿ; ನನ್ನನ್ನು ಮನೆಯಿಂದ ಹೊರಹಾಕಿದರೂ ಬೇಸರವಿಲ್ಲ ಎಂದ ನಟಿ