ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದ ‘ಅಣ್ಣಯ್ಯ’; ಟಾಪ್ 5 ಸೀರಿಯಲ್​ಗಳಿವು

2025ನೇ ವರ್ಷದ 21ನೇ ವಾರದ ಕನ್ನಡ ಧಾರಾವಾಹಿಗಳ TRP ವರದಿ ಹೊರಬಿದ್ದಿದೆ. ಜೀ ಕನ್ನಡದ ‘ಅಣ್ಣಯ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ‘ಸೀತಾ ರಾಮ’ ವಿದಾಯದ ಸಂಚಿಕೆ ಉತ್ತಮ ಟಿಆರ್​ಪಿ ಪಡೆದುಕೊಂಡಿದೆ. ನಗರ ಭಾಗದಲ್ಲಿ ಈ ಧಾರಾವಾಹಿಗೆ 3.2 ಟಿಆರ್​ಪಿ ಸಿಕ್ಕಿದೆ. ಈ ಧಾರಾವಾಹಿಯು ಇತ್ತೀಚೆಗೆ ಪೂರ್ಣಗೊಂಡಿದೆ.

ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದ ‘ಅಣ್ಣಯ್ಯ’; ಟಾಪ್ 5 ಸೀರಿಯಲ್​ಗಳಿವು
ಅಣ್ಣಯ್ಯ ಧಾರಾವಾಹಿ

Updated on: Jun 05, 2025 | 2:59 PM

ಧಾರಾವಾಹಿ ಟಿಆರ್​ಪಿ (Serial TRP) ವಾರದಿಂದ ವಾರ ಬದಲಾವಣೆ ಕಾಣುತ್ತಾ ಇರುತ್ತದೆ. ಯಾವ ಧಾರಾವಾಹಿ ಯಾವ ಸ್ಥಾನ ಪಡೆದುಕೊಂಡಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಇರುತ್ತದೆ. ಅಂತೆಯೇ 2025ನೇ ವರ್ಷದ 21ನೇ ವಾರದ ಟಿಆರ್​ಪಿ ಹೊರ ಬಿದ್ದಿದೆ. ಈ ಪೈಕಿ ಜೀ ಕನ್ನಡದ ‘ಅಣ್ಣಯ್ಯ’ ಧಾರಾವಾಹಿಯು ಟಿಆರ್​ಪಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಉಳಿದಂತೆ ಟಾಪ್ ಐದು ಧಾರಾವಾಹಿಗಳ ವಿವರ ಇಲ್ಲಿದೆ.

ಇಷ್ಟು ವಾರಗಳ ಕಾಲ ಐಪಿಎಲ್ ಪಂದ್ಯಗಳು ಇದ್ದ ಕಾರಣ ಎಲ್ಲಾ ಧಾರಾವಾಹಿಗಳ ಟಿಆರ್​ಪಿಯಲ್ಲಿ ಕುಸಿತ ಕಂಡಿತ್ತು. ಆದರೆ, ಮುಂಬರುವ ದಿನಗಳಲ್ಲಿ ಎಲ್ಲಾ ಧಾರಾವಾಹಿಗಳು ಮೊದಲಿನ ಸಂಖ್ಯೆಗೆ ತಲುಪೋ ಸಾಧ್ಯತೆ ಇದೆ. ಹಾಗಾದರೆ 21ನೇ ವಾರದಲ್ಲಿ ಯಾವ ಧಾರಾವಾಹಿ ಯಾವ ಸ್ಥಾನದಲ್ಲಿ ಇತ್ತು ಎಂಬುದರ ವಿವರ ಇಲ್ಲಿದೆ.

‘ಅಣ್ಣಯ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ನಿಶಾ ರವಿಕೃಷ್ಣನ್ ಅಭಿನಯದ ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದೆ. ಕಥಾ ನಾಯಕಿ ಹಾಗೂ ನಾಯಕಿ ನಡುವಿನ ಮುದ್ದಾದ ರೊಮ್ಯಾನ್ಸ್, ಪೆದ್ದು ಪೆದ್ದಾಗಿ ನಡೆದುಕೊಳ್ಳೋದು ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಎರಡನೇ ಸ್ಥಾನದಲ್ಲಿ ಈ ಬಾರಿ ಎರಡು ಧಾರಾವಾಹಿಗಳು ಸ್ಥಾನ ಪಡೆದಿವೆ ಅನ್ನೋದು ವಿಶೇಷ. ಹೌದು, ಈ ಬಾರಿ ಎರಡನೇ ಸ್ಥಾನದಲ್ಲಿ ‘ನಾನಿನ್ನ ಬಿಡಲಾರೆ’ ಹಾಗೂ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ.

ಇದನ್ನೂ ಓದಿ
ಸೋಶಿಯಲ್ ಮೀಡಿಯಾಗೆ ಶೋಭಾ ಶೆಟ್ಟಿ ಗುಡ್​ ಬೈ; ಖಿನ್ನತೆಗೊಳಗಾದ್ರಾ ನಟಿ?
‘ಅಭಿಮಾನ, ಪ್ರೀತಿ ಕುಟುಂಬದ ನೋವಿಗೆ ಕಾರಣವಾಗಬಾರದು’; ಶಿವಣ್ಣ ಭಾವುಕ ಪೋಸ್ಟ್
‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಬೆಂಗಳೂರಿಗರ ನೆನೆದು ಮರುಗಿದ ಕಮಲ್ ಹಾಸನ್
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ

ಇದನ್ನೂ ಓದಿ: ‘ಕರ್ಣ’ ಧಾರಾವಾಹಿ ಆರಂಭಕ್ಕೆ ದಿನಾಂಕ ನಿಗದಿ; ಇಲ್ಲಿದೆ ಮಾಹಿತಿ

ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಕಳೆದ ಹಲವು ತಿಂಗಳಿಂದ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಳ್ಳುತ್ತಾ ಬರುತ್ತಿದ್ದು, ಸ್ಥಿರತೆ ಕಾಯ್ದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಹಾಗೂ ಐದನೇ ಸ್ಥಾನದಲ್ಲಿ ‘ಬ್ರಹ್ಮಗಂಟು’ ಧಾರಾವಾಹಿ ಇದೆ. ‘ಸೀತಾ ರಾಮ’ ವಿದಾಯದ ಸಂಚಿಕೆ ಉತ್ತಮ ಟಿಆರ್​ಪಿ ಪಡೆದುಕೊಂಡಿದೆ. ನಗರ ಭಾಗದಲ್ಲಿ ಈ ಧಾರಾವಾಹಿಗೆ 3.2 ಟಿಆರ್​ಪಿ ಸಿಕ್ಕಿದೆ. ಈ ಧಾರಾವಾಹಿಯು ಇತ್ತೀಚೆಗೆ ಪೂರ್ಣಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.