
‘ಕೆಜಿಎಫ್ 2’ ಸಿನಿಮಾ (KGF 2) ಬಳಿಕ ಯಶ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಕೆಲವರು ಹೊಟ್ಟೆ ಉರಿದುಕೊಂಡು ಈ ಚಿತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈಗ ಈ ವಿಚಾರಕ್ಕೆ ಸಾಕ್ಷಿ ಸಮೇತ ಉತ್ತರ ಸಿಕ್ಕಿದೆ. ಇದರಿಂದ ಹೇಟರ್ಗಳು ಬಾಯಿ ಮುಚ್ಚಿಕೊಳ್ಳುವಂತೆ ಆಗಿದೆ.
‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. ಯಶ್ ಅವರು ಇದಕ್ಕೆ ಹೀರೋ. ಈ ಚಿತ್ರಕ್ಕೆ ಅವರು ನಿರ್ಮಾಪಕರೂ ಹೌದು. ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಯಶ್ ಹಾಗೂ ಗೀತು ಮಧ್ಯೆ ಯಾವುದೂ ಸರಿ ಇಲ್ಲ, ಸಿನಿಮಾದ ರೀ ಶೂಟ್ ಮಾಡಲಾಗುತ್ತಿದೆ ಎಂದೆಲ್ಲ ಸುದ್ದಿ ಹಬ್ಬಿಸಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಎಫ್‌ಎಕ್ಸ್ ಸಂಸ್ಥೆಯ ಉದ್ಯೋಗಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
‘ಯಶ್ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ. ಸಿನಿಮಾ ಸಮಸ್ಯೆಯಲ್ಲಿ ಸಿಕ್ಕಿ ಬಿದ್ದಿದೆ. ಸಿನಿಮಾದ ಫೂಟೆಜ್ ಬಗ್ಗೆ ಯಶ್ಗೆ ಖುಷಿ ಇಲ್ಲ’ ಎಂದು ಪಾನಿಪುರಿ ಹೆಸರಿನ ಟ್ವಿಟರ್ ಖಾತೆ ಮೂಲಕ ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ‘ವಿಎಫ್‌ಎಕ್ಸ್’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರಣಿಲ್ ದೇಶ್ಮುಖ ಎಂಬುವವರು ಸ್ಪಷ್ಟನೆ ನೀಡಿದ್ದಾರೆ.
#ToxicTheMovie ain’t dead, it’s in the lab! 🔥
While haters spread fake news, an employee from the VFX company DNEG has confirmed that their team is already working on the film’s post-production.
In Cinemas on MARCH 19, 2026 💥#YashBoss #Yash #GeetuMohandas pic.twitter.com/jHfZbtJNKz
— Bhargavi (@IamHCB) October 29, 2025
‘ನನಗೆ ಜೋರಾಗಿ ನಗು ಬರುತ್ತಿದೆ. ನನ್ನ ಸಹೋದ್ಯೋಗಿಗಳು ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಈ ವ್ಯಕ್ತಿ, ರಿವರ್ಕ್ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ’ ಎಂದು ಪ್ರಣಿಲ್ ಸ್ಪಷ್ಟನೆ ನೀಡಿದ್ದಾರೆ. ಯಶ್ ಬಗ್ಗೆ ಆಗದೇ ಇದ್ದವರು ಈ ಕೆಲಸ ಮಾಡುತ್ತಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ.
ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರಕ್ಕಾಗಿ ಲಂಡನ್ಗೆ ಹಾರಿದ ಯಶ್; ನಡೆಯುತ್ತಿದೆ ದೊಡ್ಡ ಕೊಲಾಬರೇಷನ್
‘ಟಾಕ್ಸಿಕ್’ ಸಿನಿಮಾ 2026ರ ಮಾರ್ಚ್ 19ರಂದು ಥಿಯೇಟರ್ನಲ್ಲಿ ರಿಲೀಸ್ ಆಗಲಿದೆ. ಜನವರಿಯಲ್ಲಿ ಬರೋ ಯಶ್ ಜನ್ಮದಿನದ ಸಮಯದಲ್ಲಿ ಈ ಸಿನಿಮಾ ಬಗ್ಗೆ ಅಪ್ಡೇಟ್ ಸಿಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.