‘ಜನ ಆಟಕ್ಕಿಂತ ಸಿಂಪತಿಗೆ ಯಮಾರಿದ್ರು’; ಹನುಮಂತನ ಗೆಲುವಿನ ಬಗ್ಗೆ ತ್ರಿವಿಕ್ರಂ ಫ್ಯಾನ್ಸ್ ಬೇಸರ  

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅವರು ವಿನ್ ಆದರು ಎಂಬುದು ಕೆಲವರಿಗೆ ಖುಷಿ ತಂದಿದೆ. ತ್ರಿವಿಕ್ರಂ ಹಾಗೂ ರಜತ್ ಅಭಿಮಾನಿಗಳಿಗೆ ಇದು ಬೇಸರ ಮೂಡಿಸಿದೆ. ಅನೇಕರು ಹನುಮಂತ ಬಗ್ಗೆ ಅಪವಾದ ಹೊರಿಸುತ್ತಿದ್ದಾರೆ.

‘ಜನ ಆಟಕ್ಕಿಂತ ಸಿಂಪತಿಗೆ ಯಮಾರಿದ್ರು’; ಹನುಮಂತನ ಗೆಲುವಿನ ಬಗ್ಗೆ ತ್ರಿವಿಕ್ರಂ ಫ್ಯಾನ್ಸ್ ಬೇಸರ  
ತ್ರಿವಿಕ್ರಂ-ಹನುಮಂತ

Updated on: Jan 27, 2025 | 11:49 AM

‘ಬಿಗ್ ಬಾಸ್​ ಕನ್ನಡ ಸೀಸನ್ 11’ರಲ್ಲಿ ಹನುಮಂತ ವಿನ್ ಆದ ಬಗ್ಗೆ ಚರ್ಚೆ ಜೋರಾಗಿದೆ. ತ್ರಿವಿಕ್ರಂ ಅವರ ಅಭಿಮಾನಿಗಳು ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್  ಶೋನ ಶಪಿಸುತ್ತಿದ್ದಾರೆ. ವಿನ್ನರ್ ಘೋಷಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಅನೇಕರು ಹನುಮಂತ ಅವರ ಆಟವನ್ನು ಟೀಕಿಸಿದ್ದಾರೆ. ಅವರು ಕೇವಲ ಸಿಂಪತಿಯಿಂದಲೇ ವೋಟ್ ಪಡೆದು ಎಂದು ಅನೇಕರು ಹೇಳಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಮೊದಲ ದಿನವೇ ಎಂಟ್ರಿ ಕೊಟ್ಟವರು. ಕೆಲ ವಾರ ಬಿಟ್ಟು ದೊಡ್ಮನೆಗೆ ಬಂದವರು ಹನುಮಂತ. ಅವರು ಟಾಸ್ಕ್​ನಲ್ಲಿ ಉತ್ತಮವಾಗಿ ಆಡಿದರು. ಆದರೆ ಅನೇಕರಿಗೆ ಇದು ಕಾಣಿಸುತ್ತಿಲ್ಲ. ಹನುಮಂತ ಅವರು ಸಿಂಪತಿ ಗಿಟ್ಟಿಸಿಕೊಂಡರು ಎಂದು ಹೇಳುತ್ತಾ ಇದ್ದಾರೆ.

ತ್ರಿವಿಕ್ರಂ ಅವರು ರನ್ನರ್ ಅಪ್ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಕಲರ್ಸ್ ಕನ್ನಡ ವಾಹಿನಿ ಪೋಸ್ಟ್ ಮಾಡಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ತ್ರಿವಿಕ್ರಂ ಅಭಿಮಾನಿಗಳು ಹನುಮಂತ ಗೆದ್ದಿದ್ದಕ್ಕೆ ಬೇಸರ ಹೊರಹಾಕಿದ್ದಾರೆ. ‘ಜನ ಆಟಕ್ಕಿಂತ ಸಿಂಪತಿಗೆ ಯಮಾರಿದ್ರು’ ಎಂಬ ಕಮೆಂಟ್​ಗಳು ಬಂದಿವೆ.

ಇದನ್ನೂ ಓದಿ: ಹನುಮಂತಂದು ಸಿಂಪತಿ ಕಾರ್ಡ್ ಎಂದವರು ಇದನ್ನು ಓದಲೇಬೇಕು; ದೋಸ್ತ ಮಾಡಿದ ಸಾಧನೆ ಒಂದೆರಡಲ್ಲ

‘ತ್ರಿವಿಕ್ರಮ್, ನೀವು ಸೋತಿಲ್ಲ, ನೀವು ಕೂಡ ಗೆದ್ದಿದ್ದೀರಿ. ಬಿಗ್​ ಬಾಸ್​ಗೆ ಅತೀ ಹೆಚ್ಚು ಕೊಡುಗೆ ನೀಡಿದವರು ನೀವು. ಬಿಗ್ ಬಾಸ್ ಮನೆಯಲ್ಲಿ ಸರಿಸಾಟಿಯಿಲ್ಲ ವ್ಯಕ್ತಿತ್ವದ ಸರದಾರ ನೀವು. ಮಾತಲ್ಲಿ, ನಡವಳಿಕೆಯಲ್ಲಿ, ಟಾಸ್ಕ್​​ನಲ್ಲಿ, ಸಂಬಂಧಗಳಲ್ಲಿ ನಮ್ಮನ್ನು ಅತಿ ಹೆಚ್ಚು ಮನರಂಜಿಸಿದ್ದೀರಿ. ಧನ್ಯವಾದಗಳು ಮಾಸ್ಟರ್’ ಎಂದು ಅವರ ಅಭಿಮಾನಿಗಳ ಪೇಜ್​​ನಲ್ಲಿ ಬರೆದುಕೊಲ್ಳಲಾಗುತ್ತಿದೆ. ‘ಸೋಲೆ ಗೆಲುವಿನ ಮೆಟ್ಟಿಲು, ಮುಂದೆ ಗೆಲುವಂತೆ’ ಎಂದು ಕೆಲವರು ತ್ರಿವಿಕ್ರಂ ಅವರನ್ನು ಹೊಗಳುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಮಾಡಿದ ತಪ್ಪಿಗೆ ಅಪ್ಪನ ಬಳಿ ಕ್ಷಮೆ ಕೇಳಿದ ಸುದೀಪ್

ಕೆಲವು ಕಡೆಗಳಲ್ಲಿ ಹನುಮಂತ ಅವರನ್ನು ಮೆಚ್ಚಿಕೊಂಡಿದ್ದಾರೆ. ಅವರು ಉತ್ತಮವಾಗಿ ಆಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅವರಿಗೆ 5 ಕೋಟಿ ವೋಟ್ ಬಿದ್ದಿದ್ದು ಸರಿ ಇದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:48 am, Mon, 27 January 25