‘ತಂದೆ, ಮಗಳು ಮಾತ್ರ ನನ್ನ ಆಸ್ತಿ, ಬಿಗ್ ಬಾಸ್ ಕ್ರೆಡಿಟ್ ನನಗೆ ಬೇಡ’; ಸುದೀಪ್
ಬಿಗ್ ಬಾಸ್ ಕನ್ನಡ ಸೀಸನ್ 11ರ ಯಶಸ್ಸಿನ ಬಗ್ಗೆ ಕಿಚ್ಚ ಸುದೀಪ್ ಅವರು ತಮ್ಮ ಕೊಡುಗೆಯನ್ನು ಅಲ್ಲಗಳೆದಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ತಂಡದ ಕಠಿಣ ಪರಿಶ್ರಮವೇ ಕಾರಣ ಎಂದು ಅವರು ಹೇಳಿದ್ದಾರೆ. ಯೋಗರಾಜ್ ಭಟ್ ಅವರೊಂದಿಗಿನ ಸಂಭಾಷಣೆಯಲ್ಲಿ ಈ ವಿಷಯವನ್ನು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಅವರು ಬಿಗ್ ಬಾಸ್ನ ಈ ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. 11 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ಅವರು ಇದಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈ ಕ್ರೆಡಿಟ್ನ ವಾಹಿನಿಯವರು ಸುದೀಪ್ಗೆ ಅನೇಕ ಬಾರಿ ನೀಡಿದ್ದಾರೆ. ಆದರೆ, ಇದನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವೇದಿಕೆ ಮೇಲೆ ಸುದೀಪ್ ಅವರು ಈ ಮಾತನ್ನು ಹೇಳಿದ್ದಾರೆ. ಕಲರ್ಸ್ ಕನ್ನಡದ ತಂಡ ಹಾಗೂ ಸ್ಪರ್ಧಿಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.
ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಅನ್ನು ಜನವರಿ 26ರಂದು ಪೂರ್ಣಗೊಳಿಸಿದರು. 119 ದಿನಗಳ ಕಾಲ ನಡೆದ ಜರ್ನಿಯಲ್ಲಿ ಅವರು ಹಲವು ಬಾರಿ ಟೆಂಪರ್ ಕಳೆದುಕೊಂಡಿದ್ದು ಇದೆ. ಆದರೆ, ಇದನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಕ್ರೆಡಿಟ್ನ ಸುದೀಪ್ ಅವರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ವೇದಿಕೆ ಏರಿದ ಯೋಗರಾಜ್ ಭಟ್ ಅವರು ಸುದೀಪ್ ಜೊತೆ ಮಾತನಾಡಿದರು. ನಿಮ್ಮಿಂದಾಗಿ ಟಿಆರ್ಪಿ ಬರುತ್ತಿದೆ ಎಂಬರ್ಥದಲ್ಲಿ ಅವರು ಮಾತನಾಡಿದರು. ಆದರೆ, ಇದನ್ನು ಸುದೀಪ್ ಅವರು ಒಪ್ಪಿಕೊಂಡಿಲ್ಲ. ‘ಶೋ ಮುಂದೆ ಬರೋದಕ್ಕೆ ಪಿಸಿಆರ್ನಲ್ಲಿ ಒಂದು ಟೀಂ ಕುಳಿತಿದೆ. ಅದ್ಭುತ ತಂಡ. ಕಂಟೆಸ್ಟ್ ಬರಬಹುದು, ಹೋಗಬಹುದು. ಕಲರ್ಸ್ ಕನ್ನಡ ವಾಹಿನಿ, ಎಂಡಮೋಲ್ ಅವರು ಈ ತಂಡವನ್ನು ಕಾಪಾಡಿಕೊಂಡು ಬಂದರೆ, ವಾಹಿನಿ ಹೀಗೆ ಮುಂದಕ್ಕೆ ಹೋಗುತ್ತದೆ. ಶೋ ಮುಂದಕ್ಕೆ ಹೋಗುತ್ತದೆ. ಇದರ ಕ್ರೆಡಿಟ್ನ ಅವರಿಗೆ ಕೊಡುತ್ತೇನೆ’ ಎಂದರು ಸುದೀಪ್.
‘ಒಳಗೆ ಮೂರು ಜನ (ಹನುಮಂತ, ತ್ರಿವಿಕ್ರಂ, ರಜತ್) ಕುಳಿತಿದ್ದಾರೆ ಅವರಿಗೆ ನಾನು ಕ್ರೆಡಿಟ್ ಕೊಡುತ್ತೇನೆ. ಅವರು ಇನ್ಸ್ಟ್ರುಮೆಂಟ್, ನಾವು ಶ್ರುತಿ ಸೆಟ್ ಮಾಡುತ್ತೇವೆ ಅಷ್ಟೇ. ನಾನು ಅದಕ್ಕೆ ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಕೂತವರೇ (ಈ ಸೀಸನ್ ಸ್ಪರ್ಧಿಗಳು) ಈ ಸೀಸನ್ನ ಆಸ್ತಿ’ ಎಂದರು ಸುದೀಪ್.
ಇದನ್ನೂ ಓದಿ: ಬಿಗ್ ಬಾಸ್ ತೊರೆಯುವ ಬಗ್ಗೆ ವೇದಿಕೆಯ ಮೇಲೆ ಸುದೀಪ್ ಹೇಳಿದ್ದೇನು?
‘ಇಷ್ಟು ದೊಡ್ಡ ವಿಚಾರನ ನಮ್ಮದಲ್ಲ ಎಂದು ಬಿಟ್ರಲ್ಲ’ ಎಂದು ಯೋಗರಾಜ್ ಭಟ್ ಹೇಳಿದರು. ‘ಅಲ್ಲಿ ಕುಳಿತ ನನ್ನ ಮಗಳು, ನನ್ನ ತಂದೆ ಮಾತ್ರ ನನ್ನ ಆಸ್ತಿ’ ಎಂದು ಸುದೀಪ್ ಹೆಮ್ಮೆಯಿಂದ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.