ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಏನು ನಡೆಯುತ್ತಿದೆ? ನಟಿಗೆ ಕಿಸ್

ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಅವರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಒಂದೇ ಗ್ಯಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಯ ಸಿಕ್ಕಾಗ ಇವರು ಹರಟೆ ಹೊಡೆಯುತ್ತಾ ಇರುತ್ತಾರೆ. ಇತ್ತೀಚಿನ ಎಪಿಸೋಡ್ ಒಂದರ ವಿಡಿಯೋನ ಈಗ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹಂಚಿಕೊಂಡಿದ್ದಾರೆ.

ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಏನು ನಡೆಯುತ್ತಿದೆ? ನಟಿಗೆ ಕಿಸ್
ಭವ್ಯಾ-ತ್ರಿವಿಕ್ರಂ

Updated on: Nov 07, 2024 | 7:23 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ಒಟ್ಟಾಗಿ ಆಟ ಆಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ. ಇವರ ಮಧ್ಯೆ ದಿನ ಕಳೆದಂತೆ ಆಪ್ತತೆ ಹೆಚ್ಚುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ತ್ರಿವಿಕ್ರಂ ಅವರು ಭವ್ಯಾ ತಲೆಗೆ ಪ್ರೀತಿಯಿಂದ ಕಿಸ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆಯುತ್ತಿದೆ. ಅನೇಕರು ಈ ಜೋಡಿಯನ್ನು ಇಷ್ಟಪಡುತ್ತಿದ್ದಾರೆ.

ತ್ರಿವಿಕ್ರಂ ಹಾಗೂ ಭವ್ಯಾ ಗೌಡ ಅವರ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಒಂದೇ ಗ್ಯಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಯ ಸಿಕ್ಕಾಗ ಇವರು ಹರಟೆ ಹೊಡೆಯುತ್ತಾ ಇರುತ್ತಾರೆ. ಇತ್ತೀಚಿನ ಎಪಿಸೋಡ್ ಒಂದರ ವಿಡಿಯೋನ ಈಗ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹಂಚಿಕೊಂಡಿದ್ದಾರೆ. ಇದರಲ್ಲಿ ಭವ್ಯಾ ಗೌಡ ಅವರನ್ನು ಹಿಂಬದಿಯಿಂದ ತಬ್ಬಿದ ತ್ರಿವಿಕ್ರಂ ಅವರು ತಲೆಗೆ ಮುತ್ತಿಟ್ಟಿದ್ದಾರೆ. ಇದಕ್ಕೆ ಭವ್ಯಾ ಅವರು ಬೇಸರ ಮಾಡಿಕೊಂಡಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ‘ತ್ರಿವ್ಯಾ’ (ತ್ರಿವಿಕ್ರಂ+ಭವ್ಯಾ) ಹೆಸರಿನ ಫ್ಯಾನ್​ ಪೇಜ್​ಗಳು ಸೃಷ್ಟಿ ಆಗಿವೆ. ಅವರು ಈ ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ. ಇವರನ್ನು ಅನೇಕರು ‘ಬೆಸ್ಟ್​ ಜೋಡಿ’ ಎಂದು ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಮಧ್ಯೆ ಪ್ರೀತಿ ಮೂಡುತ್ತದೆಯೇ ಅಥವಾ ಫ್ರೆಂಡ್​ಶಿಪ್​ಗೆ ಸೀಮಿತ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ:  ಭವ್ಯಾ ಗೌಡ ಎದುರು ಹೀನಾಯವಾಗಿ ಸೋತ ಐಶ್ವರ್ಯಾ

ಭವ್ಯಾ ಗೌಡ ಅವರು ‘ಗೀತಾ’ ಧಾರಾವಾಹಿ ಮೂಲಕ ಗಮನ ಸೆಳೆದವರು. ತ್ರಿವಿಕ್ರಂ ಕೂಡ ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದಾರೆ. ಇಬ್ಬರೂ ಫಿನಾಲೆ ತಲುಪುವ ಕನಸನ್ನು ಇಟ್ಟುಕೊಂಡಿದ್ದಾರೆ. ತ್ರಿವಿಕ್ರಂ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಟಾಪ್ ಐದರಲ್ಲಿ ಬರೋದು ಖಚಿತವಾಗಿದೆ ಎನ್ನಲಾಗಿದೆ. ಭವ್ಯಾ ಅವರ ವರ್ತನೆ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಅವರಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:21 am, Thu, 7 November 24

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us