ಕಿರುತೆರೆ ನಟಿ ಮೋಕ್ಷಿತಾ ಅವರು ಇಷ್ಟು ದಿನ ‘ಬಿಗ್ ಬಾಸ್ ಕನ್ನಡ 11’ ಶೋನಲ್ಲಿ ಸೈಲೆಂಟ್ ಆಗಿದ್ದರು. ಈ ವಾರ ಅವರು ಎಲಿಮಿನೇಷನ್ನಿಂದ ಜಸ್ಟ್ ಪಾರಾಗಿದ್ದಾರೆ. ತಾವು ಸೇಫ್ ಆಗಿರುವುದು ತಿಳಿದ ಬಳಿಕ ಅವರ ಆಟದ ವರಸೆಯೇ ಬದಲಾಗಿದೆ. ಈವರೆಗೆ ತಮ್ಮ ಬಗ್ಗೆ ಕೆಲವರು ಆಡಿದ ಮಾತುಗಳನ್ನು ಅವರು ನಿರ್ಲಕ್ಷಿಸಿದ್ದರು. ಆದರೆ ಈಗ ಆ ಎಲ್ಲ ಮಾತುಗಳಿಗೆ ತಿರುಗೇಟು ನೀಡಲು ಶುರು ಮಾಡಿದ್ದಾರೆ. ‘ಇವರೆಲ್ಲ 10 ವಾರ ಮಾತ್ರ ಇರೋದು’ ಎಂದು ಹೇಳಿದ್ದ ತ್ರಿವಿಕ್ರಮ್ಗೆ ಮೋಕ್ಷಿತಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಬೇರೆ ವಿಷಯಗಳು ಕೂಡ ಬಹಿರಂಗ ಆಗಿವೆ.
ಮೋಕ್ಷಿತಾ ಮುಂತಾದವರು ಕೇವಲ 10 ವಾರ ಇರುತ್ತಾರೆ ಎಂದು ತ್ರಿವಿಕ್ರಮ್ ಅವರು ಉಗ್ರಂ ಮಂಜು ಬಳಿ ಹೇಳಿದ್ದರು. ಆ ವಿಷಯ ಮೋಕ್ಷಿತಾ ಅವರ ಕಿವಿಗೆ ಬಿದ್ದಿತ್ತು. ಇಷ್ಟು ದಿನ ಸುಮ್ಮನಿದ್ದ ಅವರು ಈಗ ಎಲಿಮಿನೇಷನ್ನಿಂದ ಪಾರಾದ ಬಳಿಕ ಅದೇ ವಿಷಯ ಇಟ್ಟುಕೊಂಡು ಜಗಳ ಆರಂಭಿಸಿದ್ದಾರೆ. ಆಗ ತ್ರಿವಿಕ್ರಮ್ ಅವರ ಇನ್ನೊಂದು ಹೇಳಿಕೆ ಕೂಡ ಹಲ್ಚಲ್ ಎಬ್ಬಿಸಿತು.
‘ಈ ಬಾರಿ ಯಾರೆಲ್ಲ ಬಿಗ್ ಬಾಸ್ಗೆ ಬರುತ್ತಾರೆ ಎಂಬುದು ಗೊತ್ತಾಗ ನಂತರವೇ ನಾನು ಇಲ್ಲಿಗೆ ಬರಲು ಒಪ್ಪಿದ್ದು’ ಎಂಬರ್ಥದಲ್ಲಿ ತ್ರಿವಿಕ್ರಮ್ ಅವರು ಮಾತನಾಡಿದ್ದರು. ಆ ವಿಚಾರ ಅನೇಕರಿಗೆ ಬೇಸರ ಮೂಡಿಸಿದೆ. ‘ಲಿಸ್ಟ್ ನಿಮಗೆ ಮೊದಲೇ ಗೊತ್ತಿತ್ತಾ’ ಎಂದು ಮೋಕ್ಷಿತಾ ಹಾಗೂ ಗೌತಮಿ ಅವರು ಮರುಪ್ರಶ್ನೆ ಮಾಡಿದ್ದರು. ‘ನಾನು ತಿಳಿದುಕೊಂಡೇ ಬಂದಿದ್ದು’ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ‘ಹಾಗಾದ್ರೆ ಲಿಸ್ಟ್ ಮೊದಲೇ ಕೊಡ್ತೀರಾ ಬಿಗ್ ಬಾಸ್?’ ಎಂದು ಬಿಗ್ ಬಾಸ್ಗೆ ಇನ್ನುಳಿದವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ತ್ರಿವಿಕ್ರಮ್ ಹೇಳಿದ ಈ ಮಾತುಗಳಿಂದಾಗಿ ಬಿಗ್ ಬಾಸ್ ಮೇಲೆಯೇ ಅನುಮಾನ ಮೂಡುವಂತಾಗಿದೆ. ಹಾಗಾಗಿ ಈ ಮಾತನ್ನು ಬಿಗ್ ಬಾಸ್ ಇಷ್ಟಕ್ಕೇ ಬಿಡುವುದಿಲ್ಲ ಎನಿಸುತ್ತದೆ. ಒಂದು ವೇಳೆ ಈ ವಾರಾಂತ್ಯದ ಸಂಚಿಕೆ ನಡೆಸಿಕೊಡಲು ಸುದೀಪ್ ಬಂದರೆ ಅವರು ಕೂಡ ಈ ವಿಚಾರವನ್ನು ಚರ್ಚಿಸುವ ಸಾಧ್ಯತೆ ಇರುತ್ತದೆ. ತ್ರಿವಿಕ್ರಮ್ ಅವರ ನಡೆ-ನುಡಿ ಕೆಲವರಿಗೆ ಹಿಡಿಸುತ್ತಿಲ್ಲ. ಅತಿಯಾದ ಆತ್ಮಿವಿಶ್ವಾಸದಲ್ಲಿ ಅವರು ವರ್ತಿಸುತ್ತಿದ್ದಾರೆ. ಇದರಿಂದ ಬೇರೆ ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.