Bigg Boss Kannada: ದೊಡ್ಮನೆಗೆ 5ನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್​ ಎಂಟ್ರಿ; ಇಂಥ ಹೆಸರು ಬಂದಿದ್ದು ಯಾಕೆ?

| Updated By: ರಾಜೇಶ್ ದುಗ್ಗುಮನೆ

Updated on: Oct 09, 2023 | 9:02 AM

Tukali Santhosh: ಈವರೆಗೂ ಕನ್ನಡದಲ್ಲಿ ‘ಬಿಗ್ ಬಾಸ್​’ ರಿಯಾಲಿಟಿ ಶೋನ 9 ಸೀಸನ್​ಗಳನ್ನು ಪೂರೈಸಲಾಗಿದೆ. ಈ ಎಲ್ಲ ಸೀಸನ್​ಗಳನ್ನು ಕಿಚ್ಚ ಸುದೀಪ್​ ಅವರು ನಡೆಸಿಕೊಟ್ಟಿದ್ದಾರೆ. ಈಗ 10ನೇ ಸೀಸನ್​ಗೂ ಅವರೇ ಸಾರಥ್ಯ ವಹಿಸಿದ್ದಾರೆ. ಈ ಸೀಸನ್​ನ ಸ್ಪರ್ಧಿಗಳನ್ನು ದೊಡ್ಮನೆಗೆ ವೆಲ್​ಕಮ್​ ಮಾಡಲಾಗಿದೆ. 5ನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್​ ಪ್ರವೇಶ ಪಡೆದಿದ್ದಾರೆ.

Bigg Boss Kannada: ದೊಡ್ಮನೆಗೆ 5ನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್​ ಎಂಟ್ರಿ; ಇಂಥ ಹೆಸರು ಬಂದಿದ್ದು ಯಾಕೆ?
ತುಕಾಲಿ ಸಂತೋಷ್​
Follow us on

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಆರಂಭ ಆಗಿದೆ. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಅದ್ದೂರಿಯಾಗಿ ಈ ರಿಯಾಲಿಟಿ ಶೋಗೆ ಚಾಲನೆ ಸಿಕ್ಕಿದೆ. ಈಗಾಗಲೇ ನಮ್ರತಾ ಗೌಡ, ಸ್ನೇಹಿತ್​ ಗೌಡ, ಈಶಾನಿ, ವಿನಯ್​ ಅವರು ಬಿಗ್​ ಬಾಸ್ (Bigg Boss Kannada)​ ಮನೆಗೆ ಕಾಲಿಟ್ಟಿದ್ದಾರೆ. ಪ್ರತಿಯೊಬ್ಬರು ಕೂಡ ಅಗತ್ಯ ಮಟ್ಟದ ಓಟಿಂಗ್​ ಪಡೆದರೆ ಮಾತ್ರ ದೊಡ್ಮನೆ ಪ್ರವೇಶಿಸಲು ಅರ್ಹರಾಗುತ್ತಾರೆ. ಅದೇ ರೀತಿ 5ನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್​ (Tukali Santhosh) ಅವರು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಎಲ್ಲರೂ ಕೂಡ 100 ದಿನಗಳ ಕಾಲ ದೊಡ್ಮನೆಯೊಳಗೆ ಇರುವ ಆಕ್ಷಾಂಕ್ಷೆ ಇಟ್ಟುಕೊಂಡು ಈ ರಿಯಾಲಿಟಿ ಶೋಗೆ ಬಂದಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

‘ಬಿಗ್ ಬಾಸ್​’ ರಿಯಾಲಿಟಿ ಶೋಗೆ ದೊಡ್ಡ ಪ್ರೇಕ್ಷಕ ವರ್ಗ ಇದೆ. ಈವರೆಗೂ ಕನ್ನಡದಲ್ಲಿ 9 ಸೀಸನ್​ಗಳನ್ನು ಪೂರೈಸಲಾಗಿದೆ. ಈ ಎಲ್ಲ ಸೀಸನ್​ಗಳನ್ನು ಕಿಚ್ಚ ಸುದೀಪ್​ ಅವರು ನಡೆಸಿಕೊಟ್ಟಿದ್ದಾರೆ. ಈಗ 10ನೇ ಸೀಸನ್​ಗೂ ಅವರೇ ಸಾರಥ್ಯ ವಹಿಸಿದ್ದಾರೆ. ಬಿಗ್​ ಬಾಸ್​ಗೆ ಬಂದ ಎಲ್ಲ ಸ್ಪರ್ಧಿಗಳನ್ನು ವೇದಿಕೆ ಮೇಲೆ ಸುದೀಪ್​ ಅವರು ಪರಿಚಯಿಸಿದ್ದಾರೆ. ಇಂದು (ಅಕ್ಟೋಬರ್​ 8) ಮೊದಲ ದಿನ ಆದ್ದರಿಂದ ಮನೆಯ ವಾತಾವರಣ ಕೂಲ್​ ಆಗಿದೆ. ಎರಡನೇ ದಿನದಿಂದ ಪೈಪೋಟಿ ಹೆಚ್ಚಲಿದೆ.

ಇದೆಂಥ ಹೆಸರು?

ಕಾಮಿಡಿ ಶೋಗಳ ಮೂಲಕ ಗುರುತಿಸಿಕೊಂಡಿರುವ ತುಕಾಲಿ ಸಂತೋಷ್​ ಅವರು ಈಗ ಬಿಗ್​ ಬಾಸ್​ ಮನೆ ಒಳಗೆ ಕಾಲಿಡುವ ಅವಕಾಶ ಪಡೆದಿದ್ದಾರೆ. ಒಂದು ಸ್ಕಿಟ್​ನಲ್ಲಿ ತುಕಾಲಿ ಎಂಬ ಹೆಸರು ಇಟ್ಟುಕೊಂಡಿದ್ದರು ಸಂತೋಷ್​. ಆ ಬಳಿಕ ತುಕಾಲಿ ಸಂತು ಎಂದೇ ಅವರು ಫೇಮಸ್​ ಆದರು. ಆ ಬಗ್ಗೆ ಸಂತೋಷ್​ ಅವರಿಗೆ ಖುಷಿ ಇದೆ.

ಇದನ್ನೂ ಓದಿ: Namratha Gowda: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಮೊದಲ ಸ್ಪರ್ಧಿ ನಮ್ರತಾ ಗೌಡ; ನಟಿಯ ಪರಿಚಯ ಇಲ್ಲಿದೆ..

ಪತ್ನಿ ಸಮೇತರಾಗಿ ಸಂತೋಷ್​ ಅವರು ಬಿಗ್​ ಬಾಸ್​ ವೇದಿಕೆಗೆ ಬಂದಿದ್ದರು. ಹೆಂಡತಿಯ ಜೊತೆಗೇ ನೀವು ದೊಡ್ಮನೆ ಒಳಗೆ ಸ್ಪರ್ಧಿಸುವುದು ಒಳ್ಳೆಯದು ಎಂದು ಸುದೀಪ್​ ಅಭಿಪ್ರಾಯಪಟ್ಟರು. ಆ ಕುರಿತು ವೇದಿಕೆಯಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯಿತು. ಕಡೆಗೂ ಪತ್ನಿಯನ್ನು ಬಿಟ್ಟು ಸಂತೋಷ್​ ಒಬ್ಬರೇ ಬಿಗ್​ ಬಾಸ್​ ಮನೆಯನ್ನು ಪ್ರವೇಶಿಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:31 pm, Sun, 8 October 23