ಬಿಗ್ ಬಾಸ್ ಎಲಿಮಿನೇಷನ್​ನಲ್ಲಿ ಇರಲಿದೆ ಟ್ವಿಸ್ಟ್; ಯಾವಾಗ ಹೊರ ಹೋಗಲಿದ್ದಾರೆ ಇಬ್ಬರು ಸ್ಪರ್ಧಿಗಳು?

ಸಂಗೀತಾ ಶೃಂಗೇರಿ ಈಗಾಗಲೇ ಫಿನಾಲೆ ಟಿಕೆಟ್ ಪಡೆದಿದ್ದಾರೆ. ಉಳಿದ ಆರು ಮಂದಿಯಲ್ಲಿ ನಾಲ್ಕು ಮಂದಿ ಫೈನಲ್ ತಲುಪಲು ಸೆಣೆಸಾಡುತ್ತಿದ್ದಾರೆ. ಈ ಮಧ್ಯೆ ಇಬ್ಬರು ಎಲಿಮಿನೇಟ್​ ಆಗಲೇಬೇಕಿದೆ.

ಬಿಗ್ ಬಾಸ್ ಎಲಿಮಿನೇಷನ್​ನಲ್ಲಿ ಇರಲಿದೆ ಟ್ವಿಸ್ಟ್; ಯಾವಾಗ ಹೊರ ಹೋಗಲಿದ್ದಾರೆ ಇಬ್ಬರು ಸ್ಪರ್ಧಿಗಳು?
ಸುದೀಪ್

Updated on: Jan 20, 2024 | 2:39 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಕೊನೆಯ ಹಂತ ತಲುಪಿದೆ. ಯಾರು ಔಟ್ ಆಗುತ್ತಾರೆ, ಯಾರು ಉಳಿದುಕೊಳ್ಳುತ್ತಾರೆ ಎನ್ನುವ ಲೆಕ್ಕಾಚಾರ ಆರಂಭ ಆಗಿದೆ. ಈಗ ಸದ್ಯ ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ನಮ್ರತಾ ಗೌಡ, ವಿನಯ್ ಗೌಡ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್ ಮಧ್ಯೆ ಸ್ಪರ್ಧೆ ಜೋರಾಗಿದೆ. ಈ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಅದಕ್ಕೂ ಮೊದಲು ಇಬ್ಬರ ಎಲಿಮಿನೇಷನ್ ನಡೆಯಲಿದೆ.

ಫಿನಾಲೆ ಜನವರಿ 27 ಹಾಗೂ 28ರಂದು ನಡೆಯಲಿದೆ. ಕಾರ್ಯಕ್ರಮ ಅದ್ದೂರಿಯಾಗಿ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಸಂಗೀತಾ ಶೃಂಗೇರಿ ಈಗಾಗಲೇ ಫಿನಾಲೆ ಟಿಕೆಟ್ ಪಡೆದಿದ್ದಾರೆ. ಉಳಿದ ಆರು ಮಂದಿಯಲ್ಲಿ ನಾಲ್ಕು ಮಂದಿ ಫೈನಲ್ ತಲುಪಲು ಸೆಣೆಸಾಡುತ್ತಿದ್ದಾರೆ. ಈ ಮಧ್ಯೆ ಇಬ್ಬರು ಎಲಿಮಿನೇಟ್​ ಆಗಲೇಬೇಕಿದೆ.

ಈ ವಾರ ಐವರು ನಾಮಿನೇಟ್ ಆಗಿದ್ದಾರೆ. ತುಕಾಲಿ ಸಂತೋಷ್ ಹಾಗೂ ಸಂಗೀತಾ ಶೃಂಗೇರಿ ಮಾತ್ರ ಸೇಫ್ ಜೋನ್​ನಲ್ಲಿದ್ದು, ಉಳಿದವರೆಲ್ಲರೂ ಡೇಂಜರ್ ಜೋನ್​ನಲ್ಲಿದ್ದಾರೆ. ಈ ವಾರ ಒಂದು ಎಲಿಮಿನೇಷನ್ ನಡೆಯಲಿದೆ. ಕೆಲವು ಮೂಲಗಳ ಪ್ರಕಾರ ಮುಂದಿನ ವಾರ ಮಧ್ಯದಲ್ಲಿ ಮತ್ತೊಂದು ಎಲಿಮಿನೇಷನ್ ಆಗಲಿದೆ. ಇದಕ್ಕೆ ಮುಂದಿನ ವಾರದ ಆರಂಭದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದ ಬಳಿಕ ಆ ಜಾಗ ತುಂಬಲು ಬರುತ್ತಿವೆ ಹೊಸ ಧಾರಾವಾಹಿ ಹಾಗೂ ರಿಯಾಲಿಟಿ ಶೋ

ಸಾಮಾನ್ಯವಾಗಿ ಕೊನೆಯ ವಾರದಲ್ಲಿ ಬಿಗ್ ಬಾಸ್ ಎಲ್ಲರನ್ನೂ ನಾಮಿನೇಟ್ ಮಾಡುತ್ತಾರೆ. ಈ ವಾರ ವರ್ತೂರು ಸಂತೋಷ್ ಅಥವಾ ನಮ್ರತಾ ಹೊರ ಹೋಗಬಹುದು ಎಂಬುದು ಕೆಲವರ ಊಹೆ. ಮುಂದಿನ ವಾರ ಎಲ್ಲರೂ (ಫಿನಾಲೆ ಟಿಕೆಟ್ ಪಡೆದ ಸಂಗೀತಾ ಹೊರತುಪಡಿಸಿ) ನಾಮಿನೇಟ್ ಆದರೆ ಅವರಲ್ಲಿ ಒಬ್ಬರು ವಾರದ ಮಧ್ಯದಲ್ಲಿ ಹೊರ ಹೋಗಲಿದ್ದಾರೆ. ಈ ಮೂಲಕ ಐವರು ಫಿನಾಲೆ ತಲುಪಲಿದ್ದಾರೆ. ಈ ಬಾರಿ ಮಹಿಳಾ ಸ್ಪರ್ಧಿ ವಿಜೇತರಾಗಬಹುದು ಎಂಬುದು ಅನೇಕರ ಅಭಿಪ್ರಾಯ. ಸಂಗೀತಾ ಶೃಂಗೇರಿ ಅವರು ಗೆಲುವು ಕಾಣಲಿ ಎಂದು ಅನೇಕರು ಬಯಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:39 pm, Sat, 20 January 24