ಸಂತು-ಪಂತು ಗಾಳಕ್ಕೆ ಸಿಕ್ಕಿದ್ರಾ ಕಾರ್ತಿಕ್? ಅವರಿಗಿಲ್ಲ ಬೇರೆ ಆಯ್ಕೆ
ಸಂತು-ಪಂತು ಜೊತೆ ಸೇರಿದಮೇಲೆ ಅವರ ಚರ್ಚೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಬೇರೆಯವರಿಗೆ ತೋಡುವ ಗುಂಡಿಯಲ್ಲಿ ಕಾರ್ತಿಕ್ ಮಹೇಶ್ ಅವರೂ ಪಾಲು ತೆಗೆದುಕೊಳ್ಳಬೇಕಾಗುತ್ತದೆ.
ತುಕಾಲಿ ಸಂತೋಷ್ (Tukali Santosh) ಹಾಗೂ ವರ್ತೂರು ಸಂತೋಷ್ ಅವರು ಬೀನ್ ಬ್ಯಾಗ್ಮೇಲೆ ಕುಳಿತು ಸದಾ ಬೇರೆಯವರಿಗೆ ಗುಂಡಿ ತೋಡೋ ಬಗ್ಗೆಯೇ ಆಲೋಚನೆ ಮಾಡುತ್ತಾರೆ. ಅದರಲ್ಲೂ ತುಕಾಲಿ ಸಂತೋಷ್ ಅವರು ಯಾರ ಬಗ್ಗೆಯಾದರೂ ಒಳ್ಳೆಯ ಮಾತು ಹೇಳಿದರೆ ಅದನ್ನು ಪೂರ್ತಿಯಾಗಿ ನಂಬುವಂತಿಲ್ಲ. ಏಕೆಂದರೆ ಇದಾದ ಮರುಕ್ಷಣವೇ ಅವರು ಹಿಂದಿನಿಂದ ಕೆಟ್ಟ ಮಾತನ್ನು ಆಡುತ್ತಾರೆ. ಈ ಮಧ್ಯೆ ಸಂತು-ಪಂತು ಗಾಳಕ್ಕೆ ಕಾರ್ತಿಕ್ ಸಿಕ್ಕಿಬಿದ್ದರೇ ಎನ್ನುವ ಪ್ರಶ್ನೆ ಮೂಡಿದೆ.
ಕಾರ್ತಿಕ್ ಮಹೇಶ್ ಅವರಿಗೆ ಯಾರೂ ಇಲ್ಲದಂತೆ ಆಗಿದೆ. ಆಪ್ತವಾಗಿದ್ದ ತನಿಷಾ ಎಲಿಮಿನೇಟ್ ಆಗಿದ್ದಾರೆ. ಸಂಗೀತಾ ಶೃಂಗೇರಿ ಜೊತೆ ಬಾಂಧವ್ಯ ಕೊನೆ ಆಗಿದೆ. ನಮ್ರತಾ ಗೌಡ ಅವರು ಕೂಡ ಮುನಿಸಿಕೊಂಡಿದ್ದಾರೆ. ಪ್ರತಾಪ್ ಸಂಗ ಅವರ ಹೊಂದಿಕೆ ಆಗೋದಿಲ್ಲ. ವಿನಯ್ ಅವರ ಜೊತೆಗಿನ ಗೆಳೆತನ ಎಷ್ಟಕ್ಕೆ ಬೇಕೋ ಅಷ್ಟಕ್ಕೇ ಇದೆ. ಈ ಕಾರಣದಿಂದ ಅವರಿಗೆ ಉಳಿದುಕೊಂಡಿರೋದು ‘ನೊಂದವರ ಸಂಘ’. ಈ ಸಂಘದ ಸಂಸ್ಥಾಪಕರಾದ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಮೊರೆ ಹೋಗಿದ್ದಾರೆ ಕಾರ್ತಿಕ್.
ಇತ್ತೀಚೆಗೆ ಕಾರ್ತಿಕ್ ಅವರು ಗೇಮ್ ಗೆದ್ದಾಗ ಅವರ ಬೆಂಬಲಕ್ಕೆ ನಿಂತಿದ್ದು ಸಂತು-ಪಂತು. ಕಷ್ಟದ ಸಮಯದಲ್ಲಿ ಜೊತೆಯಾದರು ಎಂದು ಅವರ ಜೊತೆ ಹೋಗಿದ್ದಾರೆ ಕಾರ್ತಿಕ್. ಅವರ ಜೊತೆ ಸೇರಿದಮೇಲೆ ಅವರ ಚರ್ಚೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಬೇರೆಯವರಿಗೆ ತೋಡುವ ಗುಂಡಿಯಲ್ಲಿ ಕಾರ್ತಿಕ್ ಮಹೇಶ್ ಅವರೂ ಪಾಲು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಕಾರ್ತಿಕ್ ಅವರಿಗೆ ಇದರಿಂದ ತೊಂದರೆಯೇ ಹೆಚ್ಚು ಅನ್ನೋದು ಅನೇಕರ ಅಭಿಪ್ರಾಯ.
ಇದನ್ನೂ ಓದಿ: ‘ಯಾವನದ್ದೋ ಜತೆ ಓಡಿ ಹೋಗಿದ್ದಾಳೆ’: ಹೆಂಡತಿಯ ಅವಾಂತರ ವಿವರಿಸಿದ ತುಕಾಲಿ ಸಂತೋಷ್
ಇತ್ತೀಚೆಗೆ ತುಕಾಲಿ ಸಂತೋಷ್ ಅವರು ಸಂಗೀತಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅವರು ಫಿನಾಲೆ ತಲುಪಬೇಕು ಎಂದು ವೋಟ್ ಮಾಡಿದ್ದರು. ಇದಾದ ಕೆಲವೇ ದಿನಗಳ ಬಳಿಕ ಸಂಗೀತಾ ವಿರುದ್ಧವೇ ಕತ್ತಿ ಮಸೆದಿದ್ದರು. ಇದನ್ನು ವೀಕ್ಷಕರು ನೋಡಿದ್ದಾರೆ. ಕಾರ್ತಿಕ್ ಮಹೇಶ್ಗೂ ಇದೇ ರೀತಿ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಬಿಗ್ ಬಾಸ್ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ