ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವಾಗಲೇ ‘ಮ್ಯಾಕ್ಸ್’ ಸಕ್ಸಸ್ನ ಎಂಜಾಯ್ ಮಾಡಲು ಬೇರೆ ಬೇರೆ ವೇದಿಕೆ ಏರುತ್ತಿದ್ದಾರೆ. ಅವರು ಈಗ ‘ಸರಿಗಮಪ’ ವೇದಿಕೆಗೆ ಬಂದಿದ್ದಾರೆ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಈ ಕಾರ್ಯಕ್ರಮದ ಮುಖ್ಯ ಜಡ್ಜ್ ಆಗಿದ್ದಾರೆ. ಈ ವೇದಿಕೆ ಮೇಲೆ ಸುದೀಪ್ ಅವರು ಮನ ಬಿಚ್ಚಿ ಮಾತನಾಡಿದ್ದಾರೆ. ಶನಿವಾರ (ಡಿಸೆಂಬರ್ 4) ಈ ಎಪಿಸೋಡ್ ಪ್ರಸಾರ ಕಾಣಲಿದೆ.
2011ರಲ್ಲಿ ಬಂದ ‘ಕೆಂಪೇಗೌಡ’ ಚಿತ್ರ ಸುದೀಪ್ ನಟನೆಯ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಅವರು ಈ ಚಿತ್ರದ ಹಾಡನ್ನು ಹಾಡಿದ್ದರು. ಸಿನಿಮಾ ಹಿಟ್ ಆಗಲು ಇದೂ ಕಾರಣ ಎಂದು ಸುದೀಪ್ ಅವರು ಬಲವಾಗಿ ನಂಬಿದ್ದಾರೆ. ಈ ಕಾರಣಕ್ಕೆ ‘ಸರಿಗಮಪ’ ವೇದಿಕೆ ಮೇಲೆ ಅವರನ್ನು ಸುದೀಪ್ ಹೊಗಳಿದ್ದಾರೆ.
‘ಕೆಂಪೆಗೌಡ’ ಚಿತ್ರದ ಎರಡು ರತ್ನಗಳು. ಅವರು ಧ್ವನಿ ಆದ್ರು, ನಾನು ದೇಹ ಆಗಿದ್ದೇನೆ’ ಎಂದರು ಸುದೀಪ್. ಕಿಚ್ಚನ ಅಭಿಮಾನಿಗಳಲ್ಲಿ ವಿಜಯ್ ಪ್ರಕಾಶ್ ಕೂಡ ಒಬ್ಬರು. ಅವರು ಸುದೀಪ್ನ ಹಾಡಿ ಹೊಗಳಿದ್ದಾರೆ. ಅವರಿಗಾಗಿ ಸಾಲುಗಳನ್ನು ಕೂಡ ಬರೆದು ಹೇಳಿದ್ದಾರೆ.
ಕಿಚ್ಚ ಸುದೀಪ, ಫ್ಯಾನ್ಸ್ಗೆ ಎಂದೆಂದಿಗೂ ಸಮೀಪ..
ನನ್ನಂತ ಅದೆಷ್ಟೋ ಕಲಾವಿದರಿಗೆ ಆಗಿದ್ದಾರೆ ದಾರೀ ದೀಪ..
ವೆಲ್ಕಮ್ ಟು ಸರೆಗಮಪ.. ಎಂದರು ವಿಜಯ್ ಪ್ರಕಾಶ್.
ವಿಜಯ್ ಅವರು ಬರೆದ ಪ್ರಾಸಬದ್ಧ ಸಾಲುಗಳು ಅಲ್ಲಿ ಕುಳಿತಿದ್ದವರಿಗೆ ಇಷ್ಟ ಆಯಿತು. ಈ ಕಾರಣಕ್ಕೆ ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟಿದರು. ಈಗಾಗಲೇ ಸರಿಗಮಪ ಒಳ್ಳೆಯ ಟಿಆರ್ಪಿ ಪಡೆಯುತ್ತಿದೆ. ಈ ವಾರ ಸುದೀಪ್ ಹಾಗೂ ಅವರ ಕುಟುಂಬ ಬಂದಿರುವುದರಿಂದ ಟಿಆರ್ಪಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸುದೀಪ್ ನಿರ್ಮಾಣದ ಧಾರಾವಾಹಿಯಲ್ಲಿ ನಟಿಸಿದ್ದ ಕಾಫಿನಾಡು ಚಂದು; ಇಲ್ಲಿದೆ ವಿಡಿಯೋ
ಸುದೀಪ್ ಅವರು ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದು ಕಡಿಮೆ. ಈ ಬಾರಿ ಅವರು ‘ಸರಿಗಮಪ’ ವೇದಿಕೆ ಏರುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.