ಅಮಾನವೀಯ ಕೃತ್ಯ; ವೀಕ್ಷಕರ ಈ ಪ್ರಶ್ನೆಗೆ ವಿನಯ್, ಮೈಕಲ್ ಬಳಿ ಉತ್ತರವಿದೆಯೇ?
ನಂತರ ಸಂಗೀತಾ, ಪ್ರತಾಪ್ ಚೇರ್ನಲ್ಲಿ ಕುಳಿತಾಗ ಮೈಕಲ್, ವಿನಯ್ ಸೋಪಿನ ನೀರು, ಬಟ್ಟೆ ತೊಳೆಯಲು ಬಳಕೆ ಮಾಡುವ ಪೌಡರ್, ಶೇವ್ ಮಾಡಲು ಬಳಕೆ ಮಾಡುವ ಕ್ರೀಮ್ ಮತ್ತಿತ್ಯಾದಿ ಕೆಮಿಕಲ್ನ ಬಳಕೆ ಮಾಡಿದ್ದಾರೆ.
ಈ ವಾರ ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್ನಲ್ಲಿ ಎರಡು ತಂಡದ ಮಧ್ಯೆ ಟಫ್ ಕಾಂಪಿಟೇಷನ್ ನಡೆಯಿತು. ಸ್ಪರ್ಧಿಗಳು ನಡೆದುಕೊಂಡ ರೀತಿ ಅನೇಕರಿಗೆ ಇಷ್ಟವೇ ಆಗಲಿಲ್ಲ. ವಿನಯ್ (Vinay Gowda), ಮೈಕಲ್ ತೋರಿದ ಅಮಾನವೀಯ ಆಟಕ್ಕೆ ಸಂಗೀತಾ ಹಾಗೂ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ. ‘ಅವರು ಮಾಡಿದ್ದನ್ನೇ ನಾವು ಮಾಡಿದ್ದು’ ಎಂದು ವಿನಯ್ ಸಮಜಾಯಿಶಿ ನೀಡುವ ಕೆಲಸ ಮಾಡಿದ್ದಾರೆ. ಆದರೆ, ವೀಕ್ಷಕರು ಕೇಳುತ್ತಿರುವ ಈ ಪ್ರಶ್ನೆಗೆ ಅವರಲ್ಲಿ ಉತ್ತರ ಇದೆಯೇ?
ಪ್ರತಾಪ್, ಅವಿನಾಶ್ ಮೊದಲಾದವರು ಸಂಗೀತಾ ತಂಡದಲ್ಲಿ ಇದ್ದರು. ವಿನಯ್, ನಮ್ರತಾ, ಮೈಕಲ್, ಮೊದಲಾದವರು ವರ್ತೂರು ಸಂತೋಷ್ ತಂಡದಲ್ಲಿ ಇದ್ದರು. ಚೇರ್ ಟಾಸ್ಕ್ನ ಬಿಗ್ ಬಾಸ್ ನೀಡಿದ್ದರು. ಇದರ ಪ್ರಕಾರ ನಾಲ್ಕು ಜನ ಚೇರ್ನಲ್ಲಿ ಕೂರಬೇಕು. ಅವರಿಗೆ ನೀರು ಹೊಡೆದು ಅವರನ್ನು ಎಬ್ಬಿಸಬೇಕು. ಮೊದಲು ವಿನಯ್ ತಂಡದವರು ಚೇರ್ ಮೇಲೆ ಕುಳಿತರು. ಸಂಗೀತಾ ತಂಡದವರು ನೀರು ಎರಚಿದರು. ಅವರು ಒಮ್ಮೆ ಸೋಪಿನ ನೀರನ್ನು ಬಳಸಿದ್ದರು. ಇದನ್ನು ವಿನಯ್ ಆ್ಯಂಡ್ ಟೀಂನ ಮನಸ್ಸಿನಲ್ಲಿ ಇಟ್ಟುಕೊಂಡಿದೆ.
ನಂತರ ಸಂಗೀತಾ, ಪ್ರತಾಪ್ ಚೇರ್ನಲ್ಲಿ ಕುಳಿತಾಗ ಮೈಕಲ್, ವಿನಯ್ ಸೋಪಿನ ನೀರು, ಬಟ್ಟೆ ತೊಳೆಯಲು ಬಳಕೆ ಮಾಡುವ ಪೌಡರ್, ಶೇವ್ ಮಾಡಲು ಬಳಕೆ ಮಾಡುವ ಕ್ರೀಮ್ ಮತ್ತಿತ್ಯಾದಿ ಕೆಮಿಕಲ್ನ ಬಳಕೆ ಮಾಡಿದ್ದಾರೆ. ಇದರಿಂದ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಸಾಕಷ್ಟು ಹಾನಿ ಆಗಿದೆ. ಅವರು ಆಸ್ಪತ್ರೆ ಸೇರಿದ್ದಾರೆ.
ಇದನ್ನೂ ಓದಿ: ಸಿಡಿದೆದ್ದ ನಮ್ರತಾ ಗೌಡ; ಕಣ್ಣೀರು ಹಾಕಿದ ಸಂಗೀತಾ ಶೃಂಗೇರಿ; ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಶಾಕ್
‘ಅವರು ಮಾಡಿದ್ದನ್ನೇ ನಾವು ಮಾಡಿದ್ದು’ ಎಂದು ವಿನಯ್ ಹೇಳಿಕೊಂಡಿದ್ದಾರೆ. ಹಾಗಾದರೆ, ಚೇರ್ನಲ್ಲಿ ಕುಳಿತ ಅವರ ತಂಡದ ಪವಿಗಾಗಲಿ, ವರ್ತೂರು ಸಂತೋಷ್ಗಾಗಲಿ ಈ ರೀತಿಯ ತೊಂದರೆ ಏಕಾಗಿಲ್ಲ ಎಂಬುದು ಅನೇಕರ ಪ್ರಶ್ನೆ. ವೀಕೆಂಡ್ನಲ್ಲಿ ಈ ವಿಚಾರವನ್ನು ಸುದೀಪ್ ಮುಖ್ಯವಾಗಿ ಪ್ರಶ್ನೆ ಮಾಡಲಿದ್ದಾರೆ. ಅಸಮರ್ಥವಾಗಿ ಕ್ಯಾಪ್ಟನ್ಸಿ ನಡೆಸಿದ ಸ್ನೇಹಿತ್ ಅವರ ನಡೆಯ ಬಗ್ಗೆಯೂ ಸುದೀಪ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:41 am, Sat, 9 December 23