‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿ 9 ವಾರಗಳು ಕಳಿದಿವೆ. ಇಲ್ಲಿಯವರೆಗೆ ಅನೇಕರು ಬಿಗ್ ಬಾಸ್ನಿಂದ ಔಟ್ ಆಗಿದ್ದಾರೆ. ಡಿಸೆಂಬರ್ 10ರ ಎಪಿಸೋಡ್ನಲ್ಲಿ ಸ್ನೇಹಿತ್ ಗೌಡ ಎಲಿಮಿನೇಟ್ ಆಗಿದ್ದಾರೆ. ಇದು ವಿನಯ್ ಗೌಡ ಹಾಗೂ ನಮ್ರತಾ ಗೌಡ (Namratha Gowda) ಅವರಿಗೆ ಶಾಕ್ ನೀಡಿದೆ. ‘ಟಾಪ್ 5ರಲ್ಲಿ ನಾವೇ ಇರೋದು’ ಎಂದು ಬೀಗಿದ್ದವರೆಲ್ಲ ಒಬ್ಬೊಬ್ಬರೇ ಬಿಗ್ ಬಾಸ್ನಿಂದ ಔಟ್ ಆಗುತ್ತಿದ್ದಾರೆ. ಇನ್ನಾದರೂ ನಮ್ರತಾ ಹಾಗೂ ವಿನಯ್ ಪಾಠ ಕಲಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಆರಂಭದಲ್ಲಿ ಸಮರ್ಥರು, ಅಸಮರ್ಥರು ಎಂದು ಎರಡು ಟೀಂ ಮಾಡಲಾಗಿತ್ತು. ಸಮರ್ಥರ ಸಾಲಿನಲ್ಲಿ ವಿನಯ್, ಸ್ನೇಹಿತ್, ನಮ್ರತಾ ಮೊದಲಾದವರು ಇದ್ದರು. ಅವರ ಮಧ್ಯೆ ಫ್ರೆಂಡ್ಶಿಪ್ ಬೆಳೆಯಿತು. ಆ ಬಳಿಕ ಬಿಗ್ ಬಾಸ್ ವಾರದ ಟಾಸ್ಕ್ ಆಡಲು ತಂಡದವೊಂದನ್ನು ರೂಪಿಸಿದ್ದರು. ಈ ತಂಡದಲ್ಲಿ ನಮ್ರತಾ, ವಿನಯ್, ಸ್ನೇಹಿತ್, ಈಶಾನಿ, ತುಕಾಲಿ ಸಂತೋಷ್, ರಕ್ಷಕ್ ಹಾಗೂ ನೀತು ವನಜಾಕ್ಷಿ ಇದ್ದರು.
ವಿನಯ್ ಅವರು ಎಲ್ಲರನ್ನೂ ಕರೆದು ಫಿನಾಲೆ ಬಗ್ಗೆ ಮಾತನಾಡಿದ್ದರು. ‘ಸ್ಟ್ರೆಟಜಿ ಮಾಡೋಣ . ನಮ್ಮ ವಿರುದ್ಧ ತಂಡದ ಒಬ್ಬೊಬ್ಬರನ್ನು ನಾಮಿನೇಟ್ ಮಾಡೋಣ. ಈ ಮೂಲಕ ಒಬ್ಬೊಬ್ಬರನ್ನೇ ಹೊರಗೆ ಹಾಕುತ್ತಾ ಬರೋಣ. ಫಿನಾಲೆ ಸಂದರ್ಭದಲ್ಲಿ ಟಾಪ್ ಐದರಲ್ಲಿ ನಾವೇ ಇರಬೇಕು’ ಎಂದು ವಿನಯ್ ಹೇಳಿದ್ದರು. ಯಾವಾಗ ಈ ಮಾತನ್ನು ಹೇಳಿದರೋ ಅವರ ತಂಡದವರೇ ಒಬ್ಬೊಬ್ಬರಾಗಿ ಔಟ್ ಆಗೋಕೆ ಶುರುವಾದರು.
ಮೊದಲು ಔಟ್ ಆಗಿದ್ದು ವಿನಯ್ ತಂಡದ ರಕ್ಷಕ್. ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡರೂ ಒಂದೇ ತಿಂಗಳಿಗೆ ಅವರು ಔಟ್ ಆದರು. ನಂತರ ನೀತು ಅವರು ತಂಡ ಬದಲಿಸಿದರು. ಆದಾಗ್ಯೂ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದರು. ನಂತರ ಈಶಾನಿ ಔಟ್ ಆದರು. ಈಗ ಸ್ನೇಹಿತ್ ಗೌಡ ಕೂಡ ಎಲಿಮಿನೇಟ್ ಆಗಿದ್ದಾರೆ. ತುಕಾಲಿ ಸಂತೋಷ್ ಅವರು ತಂಡ ಬದಲಿಸಿ ಬಚಾವ್ ಆಗಿದ್ದಾರೆ.
‘ಟಾಪ್ ಐದರಲ್ಲಿ ನಾವೇ ಇರೋಣ’ ಎಂದು ಬೀಗಿದ್ದ ವಿನಯ್ ಗ್ಯಾಂಗ್ನಲ್ಲಿ ಉಳಿದುಕೊಂಡಿದ್ದು ಈಗ ನಮ್ರತಾ ಹಾಗೂ ವಿನಯ್ ಮಾತ್ರ! ನಮ್ರತಾ ಒಂದು ವಾರ ಮಾತ್ರ ಉತ್ತಮ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ಮತ್ತೆ ಗ್ಯಾಂಗ್ ಕಟ್ಟಿಕೊಂಡು ಮೊದಲಿನ ಕಳಪೆ ಆಟ ತೋರಿಸಿದ್ದರು. ಹೀಗಾದರೆ ಅವರು ಕೂಡ ಸದ್ಯದಲ್ಲೇ ಔಟ್ ಆಗಲಿದ್ದಾರೆ. ಈ ಮೂಲಕ ವಿನಯ್ ಒಬ್ಬಂಟಿ ಆಗಲಿದ್ದಾರೆ.
ಸ್ನೇಹಿತ್ ಗೌಡ ಅವರು ಹೇಳಿಕೊಳ್ಳುವಂಥ ಪರ್ಫಾರ್ಮೆನ್ಸ್ ನೀಡಿಲ್ಲ. ಕ್ಯಾಪ್ಟನ್ ಆಗಿ ತಾವು ಒಳ್ಳೆಯ ಪರ್ಫಾರ್ಮೆನ್ಸ್ ನೀಡುವ ಅವಕಾಶ ಅವರಿಗೆ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಅವರು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸಂಪೂರ್ಣವಾಗಿ ಎಡವಿದ್ದರು. ಹೀಗಾಗಿ, ದೊಡ್ಮನೆಯಿಂದ ಔಟ್ ಆಗಿದ್ದಾರೆ. ಅವರು ಬಿಗ್ ಬಾಸ್ನಿಂದ ಹೊರಗೆ ಹೋಗುವಾಗ ವಿನಯ್ ಹಾಗೂ ನಮ್ರತಾ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ‘ಹೈದರಾಬಾದ್ನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುತ್ತೇವೆ’: ತೆಲಂಗಾಣ ಬಿಜೆಪಿ ಮುಖ್ಯಸ್ಥ
ವಿನಯ್ ಗೌಡ ಅವರು ಗೇಮ್ ಆಡುವಾಗ ಸಾಕಷ್ಟು ಅಗ್ರೆಸ್ಸಿವ್ನೆಸ್ ತೋರಿಸುತ್ತಾರೆ. ಇದು ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ. ಅವರು ಕೂಡ ಇನ್ನುಮುಂದೆ ಎಚ್ಚರಿಕೆಯ ಆಟ ಆಡಬೇಕು. ಇಲ್ಲವಾದಲ್ಲಿ ಅವರು ಕೂಡ ಎಲಿಮಿನೇಟ್ ಆಗಲಿದ್ದಾರೆ. ಫಿನಾಲೆಯಲ್ಲಿ ಕಪ್ ಗೆಲ್ಲಬೇಕು ಎನ್ನುವ ಕನಸು ಕನಸಾಗಿಯೇ ಉಳಿಯುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:34 am, Mon, 11 December 23