ಬದುಕು ನಡೆಸಲು ನಾನಾ ಕಷ್ಟ ಪಡುತ್ತಿದ್ದ ನಾಗೇಂದ್ರ ಪ್ರಸಾದ್​ಗೆ ಸಾಹಿತ್ಯ ಕೈಹಿಡಿದಿದ್ದು ಹೇಗೆ?

Weekend With Ramesh: ಬದುಕು ನಡೆಸಲು ನಾನಾ ಕಷ್ಟಪಡುತ್ತಿದ್ದ ನಾಗೇಂದ್ರ ಪ್ರಸಾದ್ ಅವರನ್ನು ಸಾಹಿತ್ಯ ಇಷ್ಟು ದೂರ ಕರೆತಂದಿದೆ. ಅವರ ಜೀವನ ಹೇಗಿತ್ತು? ವೀಕೆಂಡ್​ ವಿತ್ ರಮೇಶ್​ನಲ್ಲಿ ಕತೆ ಅನಾವರಣಗೊಂಡಿದೆ.

ಬದುಕು ನಡೆಸಲು ನಾನಾ ಕಷ್ಟ ಪಡುತ್ತಿದ್ದ ನಾಗೇಂದ್ರ ಪ್ರಸಾದ್​ಗೆ ಸಾಹಿತ್ಯ ಕೈಹಿಡಿದಿದ್ದು ಹೇಗೆ?
ನಾಗೇಂದ್ರ ಪ್ರಸಾದ್
Follow us
ಮಂಜುನಾಥ ಸಿ.
|

Updated on: May 21, 2023 | 8:47 AM

ವೀಕೆಂಡ್ ವಿತ್ ರಮೇಶ್​ (Weekend With Ramesh) ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಆಗಮಿಸಿದ್ದ ಗೀತ ಸಾಹಿತಿ ವಿ ನಾಗೇಂದ್ರ ಪ್ರಸಾದ್ ತಮ್ಮ ಜೀವನ ಪಯಣವನ್ನು ಭಾವುಕವಾಗಿ ನೆನಪು ಮಾಡಿಕೊಂಡರು. ಇಜ್ಜಲಘಟ್ಟ ಹೆಸರಿನ ಸಣ್ಣ ಗ್ರಾಮದ ಬಡತನದ ಕುಟುಂಬದ ನಾಗೇಂದ್ರ ಪ್ರಸಾದ್, ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡವರು. ತಮ್ಮ ಸಹೋದರರೊಟ್ಟಿಗೆ ಸೇರಿಕೊಂಡು ಊದುಬತ್ತಿ ಪ್ಯಾಕೆಟ್ ಮಾಡುವುದು, ಮೆಡಿಕಲ್ ಶಾಪ್​ಗಳಿಗೆ ಪೊಟ್ಟಣಗಳನ್ನು ಮಾಡಿಕೊಡುವುದು, ಅಜ್ಜಿಯೊಟ್ಟಿಗೆ ತೆರಳಿ ಬಳೆ ಮಾಡುವುದು ಮಾಡುತ್ತಿದ್ದವರು. ಇದೆಲ್ಲದರ ನಡುವೆ ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿದ್ದವರು.

ತಮ್ಮ ಗ್ರಾಮದಲ್ಲಿ ನಡೆಯುತ್ತಿದ್ದ ಜನಪದ ಹಾಡು, ನೃತ್ಯಗಳ ಬಗೆಗೆ, ನಾಟಕಗಳ ಬಗ್ಗೆ ಬಹಳ ಆಸಕ್ತಿ ಇರಿಸಿಕೊಂಡಿದ್ದ ನಾಗೇಂದ್ರ ಪ್ರಸಾದ್ ಶಾಲೆ, ಕಾಲೇಜುಗಳಲ್ಲಿ ಅದನ್ನೇ ಹವ್ಯಾಸವಾಗಿ ರೂಢಿಸಿಕೊಂಡು ನಾಟಕಗಳನ್ನು ಬರೆಯುತ್ತಿದ್ದರಂತೆ. ಹೈಸ್ಕೂಲು, ಕಾಲೇಜಿನ ಸಮಯದಲ್ಲಿ ತುಸು ತುಂಟತನದ ವಿದ್ಯಾರ್ಥಿಯಾಗಿದ್ದ ನಾಗೇಂದ್ರ ಪ್ರಸಾದ್ ತಮ್ಮ ಸಹಪಾಠಿಗಳಿಗೆ ಲವ್ ಲೆಟರ್ ಬರೆದುಕೊಡುತ್ತಿದ್ದರಂತೆ ಸಹ. ಕನ್ನಡ ವಿದ್ಯಾರ್ಥಿಯಾಗಿದ್ದ ನಾಗೇಂದ್ರ ಪ್ರಸಾದರಿಗೆ ಪಾರ್ಕ್​ ಒಂದರಲ್ಲಿ ನಿರ್ದೇಶಕ ಕೆವಿ ಜಯರಾಂ ಸಿಕ್ಕು ಅವರ ಗಾಜಿನ ಮನೆ ಸಿನಿಮಾಕ್ಕೆ ಹಾಡು ಬರೆದುಕೊಡಲು ಸೂಚಿಸಿದ್ದಾರೆ. ಅವಕಾಶವನ್ನು ಸದುಪಯೋಗಪಡಿಸಿಕೊಂಡ ನಾಗೇಂದ್ರ ಪ್ರಸಾದ್, ಸಾಧಿಸಿದರೆ ಸಿನಿಮಾ ರಂಗದಲ್ಲಿಯೇ ಎಂದುಕೊಂಡು ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗಕ್ಕೆ ಹಾರಿದ್ದಾರೆ. ಅವರಿಗೆ ಮೊದಲ ಸಿಕ್ಕ ಅವಕಾಶವೇ ಶ್ರೀ ಮಂಜುನಾಥ ಸಿನಿಮಾ. ಆ ಸಿನಿಮಾದ ಬಳಿಕ ನಾಗೇಂದ್ರ ಪ್ರಸಾದ್ ಹಿಂತಿರುಗಿ ನೋಡಿದ್ದೇ ಇಲ್ಲ.

ಸಿನಿಮಾ ರಂಗಕ್ಕೆ ಬಂದ ನಂತರವೂ ಕಷ್ಟಗಳು ಅವರ ಬೆನ್ನು ಬಿಡಲಿಲ್ಲವಂತೆ. ಎಷ್ಟೋ ಬಾರಿ ಕೆಲಸಗಳೇ ಇರುತ್ತಿರಲಿಲ್ಲವಂತೆ, ಜೇಬಿನಲ್ಲಿ ದುಡ್ಡು ಸಹ ಇರುತ್ತಿರಲಿಲ್ಲವಂತೆ. ಪತ್ನಿ ಗರ್ಭಿಣಿ ಆದಾಗ ಅವರಿಗೆ ಇಷ್ಟದ ಮಸಾಲೆ ದೋಸೆ, ಮಲ್ಲಿಗೆ ಹೂವು ಕೊಡಿಸಲು ಸಹ ಹಣವಿರಲಿಲ್ಲ ಎಂದು ಭಾವುಕರಾದರು ನಾಗೇಂದ್ರ ಪ್ರಸಾದ್. ಆದರೆ ಅವರ ಪತ್ನಿ, ನನಗೆ ಇವರು ಎಲ್ಲವನ್ನೂ ನೀಡಿದ್ದಾರೆ ಎಂದರು ಆದರೆ ಕುಟುಂಬಕ್ಕೆ ಸರಿಯಾಗಿ ಸಮಯವೊಂದನ್ನು ನೀಡಲಾಗುತ್ತಿಲ್ಲ ಅವರಿಗೆ ಎಂದು ಬೇಸರ ವ್ಯಕ್ತಪಡಿಸಿದರು. ಶೋನ ಕೊನೆಯಲ್ಲಿ ಆ ಬಗ್ಗೆ ಕ್ಷಮೆಯನ್ನೂ ಕೇಳಿದರು ನಾಗೇಂದ್ರ ಪ್ರಸಾದ್.

ಇದನ್ನೂ ಓದಿ:ನಾಗೇಂದ್ರ ಪ್ರಸಾದ್ ಬದುಕು ಬದಲಾಯಿಸಿದ ‘ಶ್ರೀ ಮಂಜುನಾಥ’ ಅವಕಾಶ ದೊರಕಿದ್ದು ಹೇಗೆ?

ತಮ್ಮ ಪ್ರಿಯ ಶಿಷ್ಯರಲ್ಲಿ ಒಬ್ಬರಾಗಿರುವ ನಾಗೇಂದ್ರ ಪ್ರಸಾದರ ಬಗ್ಗೆ ಹಂಸಲೇಖ ಅವರಿಗೆ ವಿಶೇಷ ಪ್ರೇಮ. ”ನಾನು ಕೂರಬೇಕಾದ ಜಾಗಗಳಲ್ಲಿ ನಾಗೇಂದ್ರ ಪ್ರಸಾದ್ ಕೂರಬೇಕು, ನಾನು ಸಾಧಿಸಿದ್ದನ್ನು ಸಾಧಿಸಿ ಇನ್ನಷ್ಟು ಜನರನ್ನು ಸಾಧಕರ ಕುರ್ಚಿಯಲ್ಲಿ ಕೂರಿಸಬೇಕು” ಎಂದು ವೀಕೆಂಡ್ ವಿತ್ ರಮೇಶ್​ಗೆ ಕರೆ ಮಾಡಿ ಹರಸಿದರು ಹಂಸಲೇಖ. ಗುರುಗಳ ಮಾತಿನಿಂದ ಭಾವುಕರಾದ ನಾಗೇಂದ್ರ ಪ್ರಸಾದ್, ಹಂಸಲೇಖ ಅವರು ಒಮ್ಮೆ, ನಾಗೇಂದ್ರ ಪ್ರಸಾದ್ ನನ್ನ ಉತ್ತರಾಧಿಕಾರಿ ಎಂದಿದ್ದು ನೆನಪು ಮಾಡಿಕೊಂಡರು.

ಹರಿಕೃಷ್ಣ, ಅನೂಪ್ ಸಿಳಿನ್, ರವಿ ಬಸ್ರೂರು, ಅರ್ಜುನ್ ಜನ್ಯ ಇನ್ನೂ ಹಲವು ಸಂಗೀತ ನಿರ್ದೇಶಕರು ನಾಗೇಂದ್ರ ಪ್ರಸಾದ್​ರ ಬಗ್ಗೆ ಬಹು ಆತ್ಮೀಯವಾಗಿ ಮಾತನಾಡಿದರು. ನಾಗೇಂದ್ರ ಪ್ರಸಾದ್ ಒಂದು ಹಾಡಿನ ಎಷ್ಟು ವರ್ಷನ್​ಗಳನ್ನು ಬೇಕಾದರೂ ಕೆಲವೇ ನಿಮಿಷಗಳಲ್ಲಿ ಬರೆದುಕೊಡಬಲ್ಲರು ಎಂದರು. ಆರಂಭದ ದಿನಗಳಿಂದ ಇಂದಿನ ವರೆಗೂ ಅದೇ ವಿನಯತೆಯನ್ನು ಕೆಲಸದ ಬಗ್ಗೆ ಶ್ರದ್ಧೆಯನ್ನು ಇಟ್ಟುಕೊಂಡ ವ್ಯಕ್ತಿಯೆಂದು ಪ್ರಶಂಸಿದರು. ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ಕೂತು ಕೆಲವೇ ನಿಮಿಷಗಳಲ್ಲಿ ಅದೇ ಶೋ ಬಗ್ಗೆ ನಾಗೇಂದ್ರ ಪ್ರಸಾದ್ ಹಾಡು ಬರೆದು ಅದನ್ನು ಹಾಡಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದರು!

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ