
ಕಿಚ್ಚ ಸುದೀಪ್ (Sudeep) ಅವರು ಕಳೆದ ವಾರ ಧ್ರುವಂತ್ಗೆ ಸೀಸನ್ ಚಪ್ಪಾಳೆ ಕೊಟ್ಟಿದ್ದು ಗೊತ್ತೇ ಇದೆ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಈ ವಿಷಯ ಕಿಚ್ಚನ ಕಿವಿಗೂ ಬಿದ್ದಿದೆ. ಈ ಚರ್ಚೆಯ ಬಗ್ಗೆ ಅವರಿಗೆ ಬೇಸರ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಬಗ್ಗೆ ಅವರು ವೀಕೆಂಡ್ ಎಪಿಸೋಡ್ನಲ್ಲಿ ಮಾತನಾಡಿದ್ದಾರೆ.
ಧ್ರುವಂತ್ ಬದಲು ಗಿಲ್ಲಿಗೆ ಸೀಸನ್ ಚಪ್ಪಾಳೆ ಕೊಡಬಹುದಿತ್ತು ಎಂಬುದು ಅನೇಕರ ಅಭಿಪ್ರಾಯ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯದಲ್ಲಿ ಸಾಕಷ್ಟು ಚರ್ಚೆ ಆದವು. ಸುದೀಪ್ ಅವರನ್ನೇ ಅನೇಕರು ಟೀಕಿಸಿದರು. ಈ ವಿಷಯದಲ್ಲಿ ಸುದೀಪ್ ಅಭಿಪ್ರಾಯ ಬೇರೆಯದೇ ಇದೆ ಎನ್ನಬಹುದು. ಅವರು ಜನವರಿ 17ರ ಪ್ರೀ-ಫಿನಾಲೆಯಲ್ಲಿ ಈ ಬಗ್ಗೆ ಅವರು ಮಾತನಾಡಿದರು.
‘ಕಿಚ್ಚನ ಚಪ್ಪಾಳೆ ನನ್ನ ಅನಿಸಿಕೆ. ಯಾರು ಅರ್ಹರೋ ಅವರನ್ನು ಹುರಿದುಂಬಿಸಬೇಕು ಎಂದು ಶಾಲೆಯಲ್ಲಿ ಟೀಚರ್ ಹೇಳಿಕೊಟ್ಟಿದ್ದರು. ಬಿಗ್ ಬಾಸ್ ಒಬ್ಬ ವ್ಯಕ್ತಿ ಇಂದ ಅಲ್ಲ, ಒಬ್ಬ ಸುದೀಪ್ ಇಂದ ಅಲ್ಲ. ಬಿಗ್ ಬಾಸ್ ಎಲ್ಲರ ಕೊಡುಗೆ. ಪ್ರತಿಯೊಬ್ಬರೂ ಇದ್ದರೇನೆ ಬಿಗ್ ಬಾಸ್. ಅವರು ಗೆಲ್ಲದೆ ಇರಬಹುದು. ಆದರೆ, ಬಿಗ್ ಬಾಸ್ ಮನೆಗೆ ಅವರ ಕೊಡುಗೆ ಇದೆ ಎಂಬುದನ್ನು ಒಪ್ಪಲೇಬೇಕು’ ಎಂದರು ಕಿಚ್ಚ ಸುದೀಪ್.
ಇದನ್ನೂ ಓದಿ: ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುತ್ತಿರುವ ನಾಟಕಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್
ಶೋ ನಡೆಸಿಕೊಡೋ ನಮಗೆ ಯಾರು ಹೊರ ಹೋಗ್ತಾರೆ ಎಂಬ ವಿಷಯ ಗೊತ್ತಿರೋದಿಲ್ಲವಾ? ಹಾಗಿದ್ರೂ ಕೊಟ್ಟಿದ್ದೇವೆ ಎಂದರೆ ಅದಕ್ಕೆ ಅರ್ಥ ಇದೆ. ಗೆಲ್ಲುವವರು ಯಾರೇ ಇರಬಹುದು. ಎಲ್ಲರ ಕಾಂಟ್ರಿಬ್ಯೂಷನ್ ಇದೆ ಎಂದಾಗ ನ್ಯಾಯವಾಗಿ ಮನಸ್ಫೂರ್ವಕವಾಗಿ ಧ್ರುವಂತ್ಗೆ ಕೊಟ್ಟೆ. ಚಪ್ಪಾಳೆ ವಿಷಯದಲ್ಲಿ ಜೀವನ್ನೇ ಜಾಲಾಡಿಬಿಟ್ರಲ್ಲ. ಕಿಚ್ಚನ ಚಪ್ಪಾಳೆಯಲ್ಲಿ ತಲೆಕೆಡಿಸಿಕೊಳ್ಳೋಬೇಡಿ. ನಮ್ಮದು ಉದ್ಧಾರ ಮಾಡೋ ಚಪ್ಪಾಳೆ, ಹೊರಗೆ ತಟ್ಟುತ್ತಾ ಇರೋದು ಹಾಳು ಮಾಡೋ ಚಪ್ಪಾಳೆ. ನಿಮ್ಮ ಜೀವನ ಮೇಲೆ ಗಮನ ಹರಿಸಿ. ಕಿಚ್ಚ ಚಪ್ಪಾಳೆ ಮೇಲೆ ಅಲ್ಲ’ ಎಂದರು ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.